ಹಾವೇರಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನೈಸರ್ಗಿಕ ಕೃಷಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು, ರೈತರು ಮತ್ತೆ ನಮ್ಮ ಪೂರ್ವಜರ ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಹೆಚ್ಚಿನ ಉತ್ಪಾದನೆ ಮಾಡಬೇಕು. ಅಗ್ರೊ ಕಂಪನಿ ರೈತರನ್ನು ಗಮನದಲ್ಲಿ ಇಟ್ಟುಕೊಂಡು ನೈಸರ್ಗಿಕ ಕೃಷಿಯಿಂದ ರೈತರಿಗೆ ಲಾಭವಾಗುವಂತೆ ನೋಡಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಹಾವೇರಿಯಲ್ಲಿ ಇಂದು ವೆಂಕಟೇಶ್ವರ ಕೋ ಆಪರೇಟಿವ್ ಪವರ್ ಆಂಡ್ ಅಗ್ರೊ ಪ್ರೊಸೆಸ್ಸಿಂಗ್ ಸಂಸ್ಥೆ ಏರ್ಪಡಿಸಿದ್ದ ಕೃಷಿ ಸೇವಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ಕೃಷಿಯಲ್ಲಿ ಬಹಳಷ್ಟು ಪ್ರಯೋಗಗಳು ನಡೆಯುತ್ತಿವೆ. ಅತ್ಯಂತ ಹೆಚ್ಚು ಪ್ರಯೋಗಕ್ಕೆ ಒಳಗಾಗಿರುವುದು ಭೂಮಿ ಮತ್ತು ರೈತ. ಒಂದು ಕಡೆ ಭೂಮಿಯ ಶಕ್ತಿಯನ್ನು ಸಾರವನ್ನು ಉಳಿಸುವಂತ ಪ್ರಯೋಗ ನಡೆಯುತ್ತಿದೆ. ಇನ್ನೊಂದು ಕಡೆ ಆ ಭೂಮಿಯ ಶಕ್ತಿಯ ಸಾರವನ್ನು ನಶಿಸುವಂತ ಕೆಲಸಗಳು ಆಗುತ್ತಿವೆ, ರೈತ ಹೀಗಾಗಿ ಬಹಳಷ್ಟು ಗೊಂದಲಕ್ಕೆ ಬಿದ್ದಿದ್ದಾನೆ. ಯಾವುದನ್ನು ಬಳಕೆ ಮಾಡಬೇಕು. ಯಾವುದನ್ನು ಬಳಕೆ ಮಾಡಬಾರದು ಯಾವುದನ್ನು ಮಾಡಿದರೆ ತುರ್ತು ಲಾಭ. ಯಾವುದನ್ನು ಮಾಡಿದರೆ ದೀರ್ಘ ಕಾಲದ ಲಾಭ ಇದೆ ಅಂತ ಚಿಂತನೆಯಲ್ಲಿದ್ದಾನೆ. ಇಂತಹ ಸಂದರ್ಭದಲ್ಲಿ ಶ್ರೀ ವೆಂಕಟೇಶ್ವರ ಮತ್ತು ಬಾಲಾಜಿ ಸಂಸ್ಥೆಯ ಶಿವರಾಜ್ ಡೋಲೆ ಅವರು ಒಂದು ಸಾಹಸ ಮಾಡಿದ್ದಾರೆ ಎಂದು ಹೇಳಿದರು.
ರೈತರಿನಿಗೆ ಹೊಸ ಹೊಸ ಬೀಜ ಗೊಬ್ಬರ ಬರುತ್ತವೆ. ಒಮ್ಮೊಮ್ಮೆ ಅವರು ಅದರ ಹಿಂದೆ ಹೋಗುತ್ತಾರೆ. ಒಮ್ಮೊಮ್ಮೆ ಹತ್ತಿ ಯಾವುದಾದರೂ ಬೀಜ ಚನ್ನಾಗಿ ಇದೆ ಅಂತ ಹೇಳಿದರೆ ಅದರ ಹಿಂದೆ ಹೋಗುತ್ತಾರೆ. ಅದು ಸಿಗುವುದಿಲ್ಲ. ಗಲಾಟೆ ಆಗುತ್ತದೆ. ಯೂರಿಯಾ ಚೆನ್ನಾಗಿದೆ ಅಂದರೆ ಅದರ ಹಿಂದೆ ಹೋಗುತ್ತಾರೆ. ನಮ್ಮ ದೇಶದ ಕೃಷಿಗೆ ಐದು ಸಾವಿರ ಇತಿಹಾಸ ಇದ್ದರೂ ಹೊಸ ಹೊಸ ಪ್ರಯೋಗ ಮಾಡುತ್ತಾರೆ. ಮಕ್ಕಳು ಬಂದು ಹೊಸ ಪ್ರಯೋಗ ಮಾಡುತ್ತಾರೆ. ಮನೆಯಲ್ಲಿಯೇ ಸಾಕಷ್ಟು ಗೊಂದಲ ಸೃಷ್ಟಿಯಾಗುವ ವಾತಾವರಣ. ನಿರ್ಮಾಣ ಆಗಿದೆ. ನಿಮಗೆ ಬರುವ ಯೂರಿಯಾ, ಕಾಂಪೋಸ್ಟ್ ಗೊಬ್ಬರ ಸಬ್ಸಿಡಿಯಾಗಿ ಬಂದಿದೆ. ಮಾರುಕಟ್ಟೆಯ ದರದಲ್ಲಿ ಬಂದರೆ 5 ಸಾವಿರಕ್ಕೆ ಸಿಗುವ ಗೊಬ್ಬರ ಸಬ್ಸಿಡಿಯಲ್ಲಿ 1 ಸಾವಿರಕ್ಕೆ ಸಿಗುತ್ತದೆ. ಕೇಂದ್ರ ಸರ್ಕಾರ 75 ಸಾವಿರ ಕೋಟಿ ರೂ.ಸಬ್ಸಿಡಿಗೆ ನೀಡುತ್ತದೆ. ನಾವೇ ತಯಾರು ಮಾಡುವ ಗೊಬ್ಬರ ನಮ್ಮ ಹೊಲಕ್ಕೆ ಹಾಕಿದರೆ ಅನುಕೂಲ ಆಗುತ್ತದೆ. ನಮ್ಮ ಹಿತ್ತಲಿನ ಗೊಬ್ಬರವನ್ನು ನಾನೂ ನಮ್ಮ ಟ್ಯಾಕ್ಟರ್‌ನಲ್ಲಿ ಹೋಗಿ ಬಿಟ್ಟು ಬರುತ್ತಿದ್ದೆ. ಅದರ ಅನುಭವ ಇದೆ. ಅದರ ಜೊತೆಗೆ ಪ್ರತಿ ವರ್ಷ ಕೆರಿ ಮಣ್ಣು ಹಾಕುತ್ತಿದ್ದರು. ಅದನ್ನು ಸರಿಯಾಗಿ ಹಾಕಿ ಬಿಟ್ಟರೆ ಉತ್ತಮ ಬೆಳೆ ಬರುತ್ತದೆ. ಈಗ ಎಲ್ಲವೂ ತುರ್ತಾಗಿ ಬರಬೇಕೆಂಬ ಬಯಕೆ ಆಗಿದೆ. ಹೊಟೆಲ್ ನಲ್ಲಿ ಕುಂತು ತಿನ್ನುವ ತಾಳ್ಮೆಯೂ ಇಲ್ಲ. ಮತ್ತೆ ನಾವು ಈಗ ರಿವರ್ಸ್ ಇಂಜನೀಯರಿಂಗ್ ಮಾಡಬೇಕಿದೆ. ಕೃಷಿಯಲ್ಲಿ ನಮ್ಮ ಹಿರಿಯರು ಮಾಡಿದ ಪ್ರಯೋಗಗಳಿಗೆ ಹೋಗಬೇಕಿದೆ ಎಂದರು.
ಸೈನಿಕರ ಮೇಲೆ ನಂಬಿಕೆ
ಹೊಸ ಔಷಧಿಗಳನ್ನು ಹೊಡೆಯುವ ಮೂಲಕ ಔಷಧ ಮಣ್ಣಿನ ಮೇಲೆ ದುಷ್ಟ ಪರಿಣಾಮ ಉಂಟು ಮಾಡುತ್ತಿದೆ. ಸುಭಾಸ ಪಾಳೆಕರ ಅವರು ಬಂದು ಹೇಳಿದ್ದಾರೆ. ಅವರು ಬಹಳ ದೊಡ್ಡ ಬದಲಾವಣೆ ಮಾಡಿದ್ದಾರೆ. ಅದೇ ರೀತಿ ಬಾಲಾಜಿ ಅಗೊ ಸಂಸ್ಥೆ ಮಾಡುತ್ತಿದೆ. ಇವರು ಸೈನಿಕರು ಆಗಿರುವುದರಿಂದ ಜೈ ಜವಾನ್ ಜೈ ಕಿಸಾನ್ ಜೊತೆಗೆ ಜೈ ವಿಜ್ಞಾನ ಆಗಿದೆ. ಈಗ ನಮ್ಮ ಪ್ರಧಾನಿ ಮೋದಿಯವರು ನೈಸರ್ಗಿಕ ಕೃಷಿಗೆ ಒತ್ತು ಕೊಟ್ಟಿದ್ದಾರೆ. ಅಂದರೆ ಪರಿಸರಕ್ಕೆ ಹೊಂದಿಕೊಳ್ಳುವ ಕೃಷಿ ಮಾಡಿದರೆ ಉತ್ಪಾದನೆ ಹೆಚ್ಚಾಗುತ್ತದೆ. ಸ್ವಾತಂತ್ರ್ಯ ಬಂದಾಗ ನಮ್ಮ ದೇಶದಲ್ಲಿ 33 ಕೋಟಿ ಜನಸಂಖ್ಯೆ ಇತ್ತು. ನಾವು ಆಹಾರವನ್ನು ವಿದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದೇವು. ಈಗ 130 ಕೋಟಿ ಜನರಿಗೆ ನಾವೇ ಆಹಾರ ಬೆಳೆಯುತ್ತೇವೆ. ಹಸಿರು ಕ್ರಾಂತಿಯಾಗಿದೆ ಅದನ್ನು ರೈತರು ಮಾಡಿದ್ದಾರೆ. ಭೂಮಿಗೆ ಬಂದ ಗಂಗಾ ಮಾತೆಯ ಜೊತೆಗೆ ರೈತನ ಶ್ರಮದ ಬೆವರು ಸೇರಿದರೆ ಭೂಮಿ ತಾಯಿ ಬಂಗಾರದ ಬೆಳೆ ನೀಡುತ್ತಾಳೆ. ಕೃಷಿ ಬೆಳವಣಿಗೆ ಆಗಿದೆ ಕೃಷಿ ಬೆಳೆಸಿದ ರೈತ ಅಲ್ಲಿಯೇ ಇದ್ದಾನೆ ಎಂದು ಹೇಳಿದರು.
ಈ ಕಂಪನಿ ನೀಡುವ ಗೊಬ್ಬರದಿಂದ ಎಷ್ಟು ಉತ್ಪಾದನೆ ಆಗುತ್ತದೆ ಎನ್ನುವ ಪ್ರಶ್ನೆ ಇದೆ. ಇದರ ಬಗ್ಗೆ ತಾವು ನಾಶಿಕ್ ಗೆ ರೈತರನ್ನು ಕರೆದುಕೊಂಡು ಹೋಗಿ ತೋರಿಸಿ ತಾವು ನೀಡುವ ಗೊಬ್ಬರ ಸರ್ಟಿಫೈಡ್ ಇರಬೇಕು. ಅದು ನಿಜವಾಗಿ ಬಯೊ ಆರ್ಗ್ಯಾನಿಕ್ ಇದಿಯೊ ಇಲ್ಲವೊ ಎಂದು ತಿಳಿಯುತ್ತದೆ. 12 ರಾಜ್ಯಗಳಲ್ಲಿ ಮಾಡಿದ್ದಾರೆ. ಸುಮಾರು ಎರಡೂವರೆ ಲಕ್ಷ ಜನರು ಅದರಲ್ಲಿ ಇದ್ದಾರೆ. ಸುಮಾರು 85 ಸಾವಿರ ಜನ ಸೈನಿಕರಿದ್ದಾರೆ. ಸೈನಿಕರಿದ್ದಾರೆ ಎಂದು ನಮಗೆ ನಂಬಿಕೆ ಅವರು ದೇಶಭಕರಿದ್ದಾರೆ ಅವರು ನಮಗೆ ಮೋಸ. ಮಾಡುವುದಿಲ್ಲ ಎಂಬ ನಂಬಿಕೆ ಇದೆ. ಈಗಾಗಲೇ ಬೆಳಗಾವಿ ಮತ್ತು ಹುಬ್ಬಳ್ಳಿಯಲ್ಲಿ ಅವರ ಕಚೇರಿ ಇದೆ. ಅವರು ನ್ಯಾನೋ ಯೂರಿಯಾ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ನೈಸರ್ಗಿಕ ಕೃಷಿ ಮಾಡುವ ರೈತರಿಗೆ ಬಹಳ ಪೋತ್ಸಾಹ ನೀಡುತ್ತಿದ್ದಾರೆ. ನಾನು ಸಿಎಂ ಇದ್ದಾಗ ನೈಸರ್ಗಿಕ ಕೃಷಿ ಮಾಡಿದ ರೈತರಿಗೆ 10 ಸಾವಿರ ರೂ. ಪೋತ್ಸಾಹ ಧನ ನೀಡುತ್ತಿದ್ದೆ. ಮೊದಲು ಕೃಷಿ ವಿವಿ ಹೊಲದಲ್ಲಿ ಪ್ರಯೋಗ ಮಾಡಿ ನಂತರ ರೈತರಿಗೆ ಕೊಡುವಂತೆ ಆದೇಶ ಮಾಡಿದ್ದೆ ಈ ಸರ್ಕಾರ ಬಂದ ಮೇಲೆ ಆ ಯೋಜನೆಯನು ರದ್ದು ಮಾಡಿದ್ದಾರೆ ಎಂದರು. ರೈತರ ಪರಿಸ್ಥಿತಿ ಹೇಗಿದೆ ಅಂದರೆ, ಮೊದಲು ಬೀಗರು ಬಂದರೆ ಬಿಸಿನೀರು ಕೊಟ್ಟು ಹೋಳಿಗೆ ಮಾಡಿ ಕೊಡುತ್ತಿದ್ದರು. ಈಗ ಯಾವಾಗ ಹೋಗುತ್ತಿ ಅಂತ ಕೇಳುವ ಪರಿಸ್ಥಿತಿ ಇದೆ. ಹುಬ್ಬಳ್ಳಿ, ದಾವಣಗೆರೆ ದವಾಖಾನಿಗಿ ಹೋದರೆ ಏನಾಗುತ್ತದೊ ಗೊತ್ತಿಲ್ಲ. ಮಗಳ ಮದುವೆ ಮಾಡಿದರೆ ಹೊಲ ಮಾರುವ ಪರಿಸ್ಥಿತಿ ಇದೆ. ಮೂರು ನಾಲ್ಕು ಮಕ್ಕಳಿದ್ದರೆ ಇಬ್ಬರು ಹೊಲ ಮಾಡಿ ಉಳಿದವರು ಬೇರೆ ಉದ್ಯೋಗ ಮಾಡಬೇಕು. ನಾನು ರೈತರ ಮಕ್ಕಳಿಗೆ ವಿದ್ಯಾಸಿರಿ ಯೋಜನೆ ಮಾಡಿದ್ದೆ, ಒಂದೇ ವರ್ಷದಲ್ಲಿ 11 ಲಕ್ಷ ರೈತರ ಮಕ್ಕಳಿಗೆ ಯೋಜನೆ ತಲುಪಿಸಿದ್ದೆ. ಬೀಜ ಗೊಬ್ಬರಕ್ಕೆ ಸಬ್ಸಿಡಿ ಕೊಡುತ್ತಿದ್ದೆ ಅದನ್ನು ನಿಲ್ಲಿಸಿದ್ದಾರೆ. ಬ್ಯಾಂಕ್ ಕ್ರೆಡಿಟ್ ರೇಷಿಯೊ ಅಂತ ಇದೆ. ಒಂದು ಎಕರೆ ಜೋಳ ಬೆಳೆಯಲು 20 ಸಾವಿರ ಬೇಕು. ಆದರೆ, ಬ್ಯಾಂಕ್‌ನವರು ಕೇವಲ 4 ಸಾವಿರ ಸಾಲ ಕೊಡುತ್ತಾರೆ. ಸರ್ಕಾರಿ ಗೊಬ್ಬರ ಹಾಕದೇ ನೈಸರ್ಗಿಕ ಕೃಷಿಯಲ್ಲಿ ಬೆಳೆಯುವಂತೆ ಆಗಬೇಕು. ಈಗ ಸಗಣಿ ಗೊಬ್ಬರ ಸಿಗದಂತಾಗಿದೆ. ಎಲ್ಲರೂ ನೈಸರ್ಗಿಕ ಕೃಷಿ ಆರಂಭಿಸಿದರೆ ಮನೆಗಳಲ್ಲಿ ದನಕರುಗಳು ಬರುತ್ತವೆ ಹೈನುಗಾರಿಕೆಯೂ ಬರುತ್ತದೆ. ನೈಸರ್ಗಿಕ ಕೃಷಿ ಪ್ರಯೋಗ ಆಗಬೇಕು. ಇಂತಹ ಕಂಪನಿಗಳು ರೈತರಿಗೆ ಅನುಕೂಲ ಮಾಡಿಕೊಡಬೇಕು. ಅವರು ನೈಸರ್ಗಿಕವಾಗಿ ಬೆಳೆದಿರುವ ಉತ್ಪನ್ನಗಳಿಂದ ಎಥೆನಾಲ್ ಉತ್ಪಾದನೆ ಮಾಡಿದ್ದಾರೆ. ನಮ್ಮ ಜಿಲ್ಲೆಯಲ್ಲಿಯೂ ಎಥೆನಾಲ್ ಉತ್ಪಾದನೆ ಆಗುತ್ತಿದೆ ನಿರಾಣಿ ಸುಗರ್ಸ್ ಅತಿ ಹೆಚ್ಚು ಎಥೆನಾಲ್ ಉತ್ಪಾದನೆ ಮಾಡುತ್ತಿದೆ. ರೈತರನ್ನು ಗಮನದಲ್ಲಿ ಇಟ್ಟುಕೊಂಡು ನೈಸರ್ಗಿಕ ಕೃಷಿಯಿಂದ ರೈತರಿಗೆ ಲಾಭವಾಗಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕ ಶಿವರಾಜ ಸಜ್ಜನರ, ಸಂಸ್ಥೆ ಮುಖ್ಯಸ್ಥ ಶಿವಾಜಿ ರಾಮರಾವ್ ಡೋಲೆ ಮತ್ತಿತರರು ಹಾಜರಿದ್ದರು.
ಶಿವಮೊಗ್ಗ: ಸಾಗರದಲ್ಲಿ ಶರಾವತಿ ಹಿನ್ನೀರಿನಲ್ಲಿ ಮುಳುಗಿ ‘ಪಶು ವೈದ್ಯ ಡಾ.ಸುನೀಲ್’ ಸಾವು
ರಾಜ್ಯದ `ಪಡಿತರ ಚೀಟಿದಾರರೇ’ ಗಮನಿಸಿ : ‘ರೇಷನ್ ಕಾರ್ಡ್’ನಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿಗೆ ಮತ್ತೆ ಅವಕಾಶ.!








