ಕೆಎನ್ಎನ್ಡಿಜಿಟಲ್ ಡೆಸ್ಕ್ : ಶಾರುಖ್ ಖಾನ್ ಅವರ ಚಕ್ ದೇ ಇಂಡಿಯಾ ಚಲನಚಿತ್ರದ ಹಾಡನ್ನ ಯಾರಾದ್ರು ಮರೆಯಲು ಸಾಧ್ಯವೇ? ಅಲ್ಲಿ ಖಾನ್ ಅವರ ಪಾತ್ರವು ಭಾರತೀಯ ತ್ರಿವರ್ಣ ಧ್ವಜವನ್ನ ನೋಡಿದ ನಂತ್ರ ಅವರ ಕಣ್ಣೀರನ್ನು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಭಾನುವಾರ, ಏಷ್ಯಾಕಪ್ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ 5 ವಿಕೆಟ್ಗಳ ಗೆಲುವು ಸಾಧಿಸಿದಾಗ, ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳು ಅದೇ ಭಾವನೆಗಳನ್ನ ಅನುಭವಿಸಿದರು. ಕಿಕ್ಕಿರಿದ ಸ್ಟೇಡಿಯಂ ಚಕ್ ದೇ ಇಂಡಿಯಾ ಎಂದು ಜಪಿಸುತ್ತಿರುವ ವೀಡಿಯೊ ಈಗ ಟ್ವಿಟ್ಟರ್ನಲ್ಲಿ ವೈರಲ್ ಆಗಿದೆ.
ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾದ ನೀಲಿ ಜರ್ಸಿಯನ್ನ ಧರಿಸಿದ ಅಭಿಮಾನಿಗಳು ಕಿಕ್ಕಿರಿದಿದ್ದು, ಈ ಕ್ಲಿಪ್ ಉದ್ದಕ್ಕೂ ಜನರು ಚಕ್ ದೇ ಇಂಡಿಯಾ ಹಾಡು ಪ್ರತಿಧ್ವನಿಸಿದೆ. ಕೊನೆಯಲ್ಲಿ, ಸ್ಕೋರ್ ಬೋರ್ಡ್ “ಭಾರತವು 5 ವಿಕೆಟ್ʼಗಳಿಂದ ಗೆದ್ದಿತು” ಎಂದು ಮಿನುಗುತ್ತಿದ್ದಂತೆ, ಘೋಷಣೆಗಳು ಜೋರಾದವು.
ಇನ್ನು ಈ ವಿಡಿಯೋದ ಕ್ಯಾಪ್ಶನ್ನಲ್ಲಿ “ಗೆಲುವಿನ ಕ್ಷಣ, ಎಂತಹ ಭಾವನೆ. ಇಡೀ ಸ್ಟೇಡಿಯಂ ಚಕ್ ದೇ ಇಂಡಿಯಾ ಹಾಡುತ್ತಿದೆ!” ಎಂದು ಬರೆಯಲಾಗಿದೆ.
ವೈರಲ್ ವಿಡಿಯೋ ನೋಡಿ..!
Winning moment.. what a feeling 😍
Whole stadium singing Chak De India! pic.twitter.com/ouI0gt5ZiP
— Dhruv Rathee (@dhruv_rathee) August 28, 2022