ಚಿಕ್ಕೋಡಿ: ಸಚಿವ ಉಮೇಶ್ ಕತ್ತಿ ಹೃದಯಾಘಾತದಿಂದ ನಿಧನ ಹೊಂದಿದ್ದು, ನಿನ್ನೆ ಸಂಜೆ ಅಂತ್ಯಕ್ರಿಯೆ ನಡೆದಿದೆ. ಇಂದು ಸಮಾಧಿಗೆ ಕುಟುಂಬಸ್ಥರು ಪೂಜೆ ನೆರವೇರಿಸಿ ಅಂತಿಮ ವಿಧಿ ವಿಧಾನವನ್ನು ನಡೆಸಿದ್ರು.
ಅವರ ಹುಟ್ಟೂರು ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿರುವ ಗದ್ದೆಯಲ್ಲಿ ತಂದೆ ತಾಯಿ ಸಮಾಧಿ ಪಕ್ಕವೇ ಅವರ ಅಂತ್ಯಕ್ರಿಯೆ ನಡೆದಿತ್ತು. ಸಮಾಧಿಗೆ ತೆರಳಿ ಪುತ್ರ ನಿಖಿಲ್ ಕತ್ತಿ, ಅಳಿಯ ನಿತಿನ್ ಪ್ರಭುದೇವ ಅವರು ಪೂಜೆ ಸಲ್ಲಿಸಿದರು.
ಇನ್ನು ಸಮಾಧಿಗೆ ಪೂಜೆ ಮಾಡಿ ಅವರಿಷ್ಟದ ತಿಂಡಿ, ತಿನಿಸುಗಳನ್ನು ಇಡಲಾಯಿತು.ಜೊತೆಗೆ ಸಮಾಧಿ ಮೇಲೆ ಅವರಿಗೆ ಇಷ್ಟವಾದ ಗುಟ್ಕಾ ಪ್ಯಾಕೇಟ್ ಇಟ್ಟು ನಮನ ಸಲ್ಲಿಸಲಾಯಿತು. ಅವರ ಸಮಾಧಿಗೆ ಅಭಿಮಾನಿಗಳ ಸಾಗರವೇ ಹರಿದು ಬಂದಿದೆ