ಬೆಂಗಳೂರು: ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, ಆ ಯುವಕ ಕೋಮಾಗೆ ತೆರಳಿದ್ದ. ಚಿಕಿತ್ಸೆ ನೀಡುತ್ತಿದ್ದಂತ ವೈದ್ಯರು ಮೆದುಳು ನಿಷ್ಕ್ರಿಯವಾಗಿದೆ. ಬದುಕೋದು ಕಷ್ಟವೆಂದು ತಿಳಿಸಿದ್ದಾರೆ. ಅಲ್ಲದೇ ಅಂಗಾಂಗ ದಾನಕ್ಕೆ ಮನವೊಲಿಕೆ ಮಾಡಿದ್ದಾರೆ. ವೈದ್ಯರ ಮನವೊಲಿಕೆಗೆ ಮಣಿದಂತ ಕುಟುಂಬಸ್ಥರು, ಪುತ್ರನ ಸಾವಿನಲ್ಲಿಯೂ ಅಂಗಾಂಗ ದಾನ ಮಾಡಿ, ಇಬ್ಬರ ಬದುಕಿಗೆ ಆಸರೆಯಾಗಿದ್ದಾರೆ.
ಸೆಪ್ಟೆಂಬರ್ 25ರಂದು ತನ್ನ ಸ್ವಿಫ್ಟ್ ಕಾರಿನಲ್ಲಿ ಯುವಕ ದೀಪಕ್ (26) ತೆರಳುತ್ತಿದ್ದನು. ಈ ವೇಳೆ ರಸ್ತೆಯಲ್ಲಿ ನಿಂತಿದ್ದಂತ ಕ್ಯಾಂಟರ್ ಲಾರಿಗೆ ಹಿಂಬದಿಯಿಂದ ಡಿಕ್ಕಿಯಾಗಿದೆ. ಈ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, ದೀಪಕ್ ಮೆದುಳಿಗೂ ಪೆಟ್ಟು ಬಿದ್ದಿತ್ತು.
ಅಪಘಾತದಲ್ಲಿ ಗಾಯಗೊಂಡಿದ್ದಂತ ಆತನನ್ನು ಆರ್ ಆರ್ ನಗರದಲ್ಲಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಸೇರಿಸಿ, ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದ್ರೇ ಇಂದು ಅವರ ಮೆದುಳು ನಿಷ್ಕ್ರೀಯಗೊಂಡ ಕಾರಣ, ಕುಟುಂಬಸ್ಥರನ್ನು ಅಂಗಾಂಗ ದಾನಕ್ಕೆ ಮನವೊಲಿಸಿದ್ದಾರೆ.
ವೈದ್ಯರ ಮನವೊಲಿಕೆಯಿಂದಾಗಿ ಯುವಕ ದೀಪಕ್ ಅಂಗಾಂಗ ದಾನಕ್ಕೆ ಪೋಷಕರು ಒಪ್ಪಿದ್ದಾರೆ. ಹೀಗಾಗಿ ದೀಪಕ್ ಅವರ ಕಿಡ್ನಿ, ಕಣ್ಣು, ಚರ್ಮ ಸೇರಿದಂತೆ ಹಲವು ಅಂಗಾಂಗ ದಾನವನ್ನು ಮಾಡಲಾಗಿದೆ. ಈ ಮೂಲಕ ಸಾವಿನಲ್ಲೂ ಇಬ್ಬರ ಬಾಳಿಗೆ ಬೆಳಾಗುವ ಮೂಲಕ ಕುಟುಂಬಸ್ಥರು ಸಾರ್ಥಕತೆಯನ್ನು ಮೆರೆದಿದ್ದಾರೆ.