ವಾಷಿಂಗ್ಟನ್: ಗಾಳಿಯಲ್ಲಿರುವ ಇನ್ಫ್ಲುಯೆನ್ಸ ಮತ್ತು ಕೋವಿಡ್-19 ನಂತಹ ಸಾಮಾನ್ಯ ಉಸಿರಾಟದ ವೈರಸ್ಗಳನ್ನು ಪತ್ತೆ ಮಾಡುವ ಫೇಸ್ ಮಾಸ್ಕ್ಅನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ನಮ್ಮ ಸುತ್ತ ಗಾಳಿಯಲ್ಲಿ ಅಪಾಯವನ್ನುಂಟುಮಾಡುವ ವೈರಸ್ಗಳು ಇದ್ದರೆ ಅಂತಹುಗಳನ್ನು ಪತ್ತೆಹಚ್ಚಲು ಈ ಮಾಸ್ಕ್ ಸಹಕಾರಿ.
ಈ ಮಾಸ್ಕ್ ಧರಿಸಿದವರಿಗೆ ಅವರ ಸುತ್ತಮುತ್ತ ಇರುವ ಸೂಕ್ಷ್ಮ ವೈರಸ್ಗಳಿರುವ ಬಗ್ಗೆ ಕೇವಲ 10 ನಿಮಿಷಗಳಲ್ಲಿ ಅವರ ಮೊಬೈಲ್ಗೆ ಸಂದೇಶವೊಂದು ಬರಲಿದೆ.
ಮಾಸ್ಕ್ ಧರಿಸೋದ್ರಿಂದ ರೋಗ ಹರಡುವ ಮತ್ತು ಸಂಕುಚಿತಗೊಳ್ಳುವ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಹಿಂದಿನ ಸಂಶೋಧನೆಗಳು ತೋರಿಸಿವೆ. ಆದ್ದರಿಂದ, ಗಾಳಿಯಲ್ಲಿ ವೈರಸ್ ಇರುವಿಕೆಯನ್ನು ಪತ್ತೆಹಚ್ಚುವ ಮತ್ತು ಧರಿಸಿದವರಿಗೆ ಎಚ್ಚರಿಕೆ ನೀಡುವ ಮಾಸ್ಕ್ ರಚಿಸಲು ನಾವು ಬಯಸಿದ್ದೇವೆ ಎಂದು ಶಾಂಘೈ ಟೊಂಗ್ಜಿ ವಿಶ್ವವಿದ್ಯಾಲಯದ ವಸ್ತು ವಿಜ್ಞಾನಿ ಯಿನ್ ಫಾಂಗ್ ಹೇಳುತ್ತಾರೆ.
COVID-19 ಮತ್ತು H1N1 ಇನ್ಫ್ಲುಯೆನ್ಸವನ್ನು ಉಂಟುಮಾಡುವ ಉಸಿರಾಟದ ರೋಗಕಾರಕಗಳು ಸೋಂಕಿತ ಜನರು ಮಾತನಾಡುವಾಗ, ಕೆಮ್ಮುವಾಗ ಮತ್ತು ಸೀನುವಾಗ ಬಿಡುಗಡೆ ಮಾಡುವ ಸಣ್ಣ ಹನಿಗಳು ಮತ್ತು ಏರೋಸಾಲ್ಗಳ ಮೂಲಕ ಹರಡುತ್ತವೆ. ಈ ವೈರಸ್ ಒಳಗೊಂಡಿರುವ ಅಣುಗಳು, ವಿಶೇಷವಾಗಿ ಸಣ್ಣ ಏರೋಸಾಲ್ಗಳು, ದೀರ್ಘಕಾಲದವರೆಗೆ ಗಾಳಿಯಲ್ಲಿ ಉಳಿದುಕೊಳ್ಳಬಹುದು. ಇದರಿಂದ ರಕ್ಷಣೆ ಪಡೆಯಲಿ ಈ ಮಾಸ್ಕ್ ಸಹಕಾರಿ ಎಂದು ವಿಜ್ಞಾನಿಗಳು ಹೇಳುತ್ತಾರೆ.
BIG NEWS: ಬಿಹಾರದಲ್ಲಿ ಸಿಡಿಲು, ಮಳೆಗೆ 11 ಮಂದಿ ಸಾವು… ಸರ್ಕಾರದಿಂದ ₹ 4 ಲಕ್ಷ ಪರಿಹಾರ ಘೋಷಣೆ
ನಕಲಿ ‘ವರ್ಕ್ ಫ್ರಮ್ ಹೋಮ್’ ಉದ್ಯೋಗಗಳನ್ನು ನೀಡುವ ವೆಬ್ಸೈಟ್ ಬ್ಯಾನ್ ಮಾಡುವಂತೆ ದೆಹಲಿ ಹೈಕೋರ್ಟ್ ಆದೇಶ