ಬೆಂಗಳೂರು : ರಾಜ್ಯಾದ್ಯಂತ ಪಿಎಫ್ ಐ ಮುಖಂಡರ ಮನೆಗಳ ಪೊಲೀಸರು ದಾಳಿ ಮಾಡಿ 40 ಕ್ಕೂಹೆಚ್ಚು ಮುಖಂಡರನ್ನು ವಶಕ್ಕೆ ಪಡೆಯಲಾಗಿದೆ. ಈ ಬೆನ್ನಲ್ಲೇ ಮುಖಂಡರ ವಿಚಾರಣೆ ವೇಳೆ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.
Rain In Karnataka: ನವರಾತ್ರಿಯ ಸಂಭ್ರಮದ ನಡುವೆಯೇ ಮತ್ತೆ ರಾಜ್ಯಕ್ಕೆ ಮಳೆ ಎಂಟ್ರಿ: ಮುಂದಿನ 3 ದಿನ ಭಾರೀ ಮಳೆ
ಖಾಕಿ ಮುಖಂಡರ ವಿಚಾರಣೆ ವೇಳೆ ಸ್ಪೋಟಕ ಡೈರಿವೊಂದು ಪತ್ತೆಯಾಗಿದ್ದು. ಆ ಡೈರಿಯಲ್ಲಿ ́TRAINING TO BE ORGANZED́ ಎಂದು ಬರಹ ಪತ್ತೆಯಾಗಿದೆ. ಆದರೇ ಅದರಲ್ಲಿ ದಿನಾಂಕ ಹಾಗೂ ತಾರೀಕುಗಳು ಪತ್ತೆಯಾಗಿಲ್ಲ ಎಂಬ ಮಾಹಿತಿ ಬಹಿರಂಗವಾಗಿದೆ ಮತ್ತಷ್ಟು ಆತಂಕ್ಕೆ ಕಾರಣವಾಗಿದಂತೂ ಸತ್ಯವಾಗಿದೆ.
ಈ ನಡುವೆ ವಿಜಯಪುರದಲ್ಲಿ PFI, SDPI ಬೆಳೆಯಲು ಕಾರಣವೇ ಸಿದ್ದರಾಮಯ್ಯನವರೇ ಕಾರಣ. ಅವರಿಂದಲೇ ಪರಿಸ್ಥಿತಿ ಗಂಭೀರವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, SDPI ಮತ್ತು PFI ಬೆಳೆಯಲು ಸಿದ್ದರಾಮಯ್ಯ ಅವರೇ ಕಾರಣ.ಸಿದ್ದರಾಮಯ್ಯ ಅವಧಿಯಲ್ಲೆ ದೇಶ ವಿರೋಧಿ ಸಂಘಟನೆಗಳು ಬೆಳೆದಿವೆ. ನಮ್ಮ ಸರ್ಕಾರ ಈಗ ಗಟ್ಟಿ ನಿರ್ಧಾರ ತೆಗೆದುಕೊಂಡಿದೆ. ದೇಶಾದ್ಯಂತ ರಾಷ್ಟ್ರೀಯ ತನಿಖಾ ದಳ ದಾಳಿ ನಡೆಸಿದೆ. ಅತಿ ಹೆಚ್ಚು ನಮ್ಮ ರಾಜ್ಯದವರನ್ನೇ ಬಂಧಿಸಿದ್ದಾರೆ ಎಂದರು. ಪಿಎಫ್ಐ ನಿಷೇಧಕ್ಕೆ ದೇಶಭಕ್ತರ ಬೇಡಿಕೆ ಇದೆ. ಅದಕ್ಕೆ ಸಾಕ್ಷ್ಯಾಧಾರಗಳ ಸಂಗ್ರಹ ನಡೆಯುತ್ತಿದೆ. ನಮ್ಮ ಸರ್ಕಾರ ಕಟ್ಟುನಿಟ್ಟಿನ ಕ್ರಮದ ಜೊತೆಗೆ ಗಟ್ಟಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪಿಎಫ್ಐ ಮೇಲೆ ದಾಳಿ ರಾಜಕೀಯ ಪ್ರೇರಿತ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಎಲ್ಲದಕ್ಕೂ ರಾಜಕೀಯ ಪ್ರೇರಿತ ಎನ್ನುತ್ತಾರೆ. ಭಯೋತ್ಪಾದನೆಗೆ ರಾಜಕೀಯ ಪ್ರೇರಣೆ ನೀಡಿದವರು ಯಾರು ಎಂದು ಪ್ರಶ್ನಿಸಿದರು.
Rain In Karnataka: ನವರಾತ್ರಿಯ ಸಂಭ್ರಮದ ನಡುವೆಯೇ ಮತ್ತೆ ರಾಜ್ಯಕ್ಕೆ ಮಳೆ ಎಂಟ್ರಿ: ಮುಂದಿನ 3 ದಿನ ಭಾರೀ ಮಳೆ