ಉತ್ತರ ಪ್ರದೇಶ: ಉತ್ತರ ಪ್ರದೇಶದ ಲಕ್ನೋದ ಗೋಮತಿ ನಗರ ಪ್ರದೇಶದಲ್ಲಿ ಬೀದಿ ಬದಿ ವ್ಯಾಪಾರಿಗಳ ತಾತ್ಕಾಲಿಕ ಅಂಗಡಿಗಳನ್ನು ಧ್ವಂಸ ಮಾಡಿದ ಆರೋಪದ ಮೇಲೆ ಮಹಿಳೆಯೊಬ್ಬರ ವಿರುದ್ಧ ಪ್ರಕರಣ ದಾಖಲಾಗಿರುವ ಘಟನೆ ನಡೆದಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬೀದಿಬದಿ ವ್ಯಾಪಾರಿಗಳ ವಿರುದ್ಧ ಅಸಮಾಧಾನಗೊಂಡ ಆಕೆ ಕ್ರಿಕೆಟ್ ಬ್ಯಾಟ್ನಿಂದ ಅಂಗಡಿಗಳನ್ನು ಧ್ವಂಸಗೊಳಿಸಿದ್ದಾಳೆ.
ಮಹಿಳೆಯನ್ನು ಮಾಜಿ ಐಎಎಸ್ ಅಧಿಕಾರಿ ಶಂಕರ್ ಲಾಲ್ ಅವರ ಪುತ್ರಿ ಮತ್ತು ವೃತ್ತಿಯಲ್ಲಿ ವೈದ್ಯೆ ಎಂದು ತಿಳಿದುಬಂದಿದೆ. ಮಹಿಳೆ ಬೀದಿ ಬದಿ ಹಾಕಿದ್ದ ಅಂಗಡಿಗಳನ್ನು ತೆಗೆದುಹಾಕುವಂತೆ ಎಚ್ಚರಿಸಿದ್ದಾ. ಆದ್ರೆ, ಅಂಗಡಿಯವರು ಆಕೆಯ ಮಾತಿಗೆ ತಲೆಕೆಡಿಸಿಕೊಳ್ಳದೇ ವ್ಯಾಪಾರ ಮುಂದುವರೆಸಿದ್ದಾರೆ. ಇದ್ರಿಂದ ಕೋಪಗೊಂಡ ಆಕೆ ಮೊದಲು ಅವರ ಮೇಲೆ ನೀರು ಸುರಿದು ನಂತ್ರ, ಕ್ರಿಕೆಟ್ ಬ್ಯಾಟ್ನಿಂದ ಅಂಗಡಿಗಳನ್ನು ಧ್ವಂಸಗೊಳಿಸಿದ್ದಾಳೆ.
लखनऊ के गोमतीनगर स्थित पत्रकारपुरम में सड़क पर लगी दुकानों में महिला ने की तोड़फोड़। सड़क पर लगी दुकानों से नाराज महिला ने हाथों में डंडा लेकर जमकर की तोड़फोड़। तोड़फोड़ करने का वीडियो सोशल मीडिया पर हुआ वायरल। pic.twitter.com/kgosvru8KG
— Gajendra Singh Rathore🚩🇮🇳 (@GSRathore86) October 24, 2022
ಈ ಬಗ್ಗೆ ಸ್ಥಳೀಯ ಮಾರಾಟಗಾರರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಗೋಮತಿ ನಗರ ಪೊಲೀಸರು ಸಿಆರ್ಪಿಸಿಯ ಸೆಕ್ಷನ್ 427 ಮತ್ತು 504 ರ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿದ್ದಾರೆ.
BIGG NEWS: ಶಿವಮೊಗ್ಗದಲ್ಲಿ ವಿಜಯ್ ಹತ್ಯೆ ವಿಚಾರ; ನನ್ನ ಮಗನಿಗೆ ಯಾರು ಶತ್ರುಗಳಿರಲಿಲ್ಲ; ತಾಯಿ ಶಾಂತಾ ಸ್ಪಷ್ಟನೆ
SHOCKING NEWS: ರಾಂಚಿಯಲ್ಲಿ ಹಬ್ಬಕ್ಕೆ ಪೂಜೆ ಮಾಡಿ ಹಚ್ಚಿಟ್ಟ ದೀಪದಿಂದ ಬಸ್ಗೆ ಬೆಂಕಿ: ಚಾಲಕ-ಕಂಡಕ್ಟರ್ ಸಜೀವ ದಹನ