ನವದೆಹಲಿ : ದೇಶದ ಚುನಾವಣೆಗಳಲ್ಲಿ ಬ್ಯಾಲೆಟ್ ಪೇಪರ್ ಮತದಾನಕ್ಕೆ ಮರಳುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ.
“ಏನಾಗುತ್ತದೆ ಎಂದರೆ, ನೀವು ಚುನಾವಣೆಯಲ್ಲಿ ಗೆದ್ದಾಗ, ಇವಿಎಂಗಳನ್ನು (ಎಲೆಕ್ಟ್ರಾನಿಕ್ ಮತದಾನ ಯಂತ್ರ) ತಿರುಚಲಾಗುವುದಿಲ್ಲ. ನೀವು ಚುನಾವಣೆಯಲ್ಲಿ ಸೋತಾಗ, ಇವಿಎಂಗಳನ್ನು ತಿರುಚಲಾಗುತ್ತದೆ” ಎಂದು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಪಿ ಬಿ ವರಲೆ ಅವರ ನ್ಯಾಯಪೀಠ ತರಾಟೆಗೆ ತೆಗೆದಯಕೊಂಡಿದೆ.
ಬ್ಯಾಲೆಟ್ ಪೇಪರ್ ಮತದಾನದ ಹೊರತಾಗಿ, ಮತದಾನದ ಸಮಯದಲ್ಲಿ ಮತದಾರರಿಗೆ ಹಣ, ಮದ್ಯ ಅಥವಾ ಇತರ ವಸ್ತುಗಳನ್ನ ವಿತರಿಸಿದ ತಪ್ಪಿತಸ್ಥರೆಂದು ಸಾಬೀತಾದರೆ ಅಭ್ಯರ್ಥಿಗಳನ್ನ ಕನಿಷ್ಠ ಐದು ವರ್ಷಗಳವರೆಗೆ ಅನರ್ಹಗೊಳಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವುದು ಸೇರಿದಂತೆ ಹಲವಾರು ನಿರ್ದೇಶನಗಳನ್ನ ಮನವಿಯಲ್ಲಿ ಕೋರಲಾಗಿದೆ.
ಅರ್ಜಿದಾರರಾದ ಕೆ.ಎ.ಪಾಲ್ ಅವರು ಪಿಐಎಲ್ ಸಲ್ಲಿಸಿರುವುದಾಗಿ ಹೇಳಿದಾಗ, ನ್ಯಾಯಪೀಠ, “ನಿಮ್ಮ ಬಳಿ ಆಸಕ್ತಿದಾಯಕ ಪಿಐಎಲ್ಗಳಿವೆ. ಈ ಅದ್ಭುತ ಆಲೋಚನೆಗಳನ್ನು ನೀವು ಹೇಗೆ ಪಡೆಯುತ್ತೀರಿ?” ಎಂದು ವ್ಯಂಗ್ಯವಾಡಿದರು.
BREAKING : ಡಿ.20ರಂದು ಖಾಲಿ ಇರುವ ‘ಆರು ರಾಜ್ಯಸಭಾ ಸ್ಥಾನ’ಗಳಿಗೆ ಮತದಾನ, ಅಂದೇ ಫಲಿತಾಂಶ
ಇನ್ಫೋಸಿಸ್ ಉದ್ಯೋಗಿಗಳಿಗೆ ಗುಡ್ ನ್ಯೂಸ್ ; ಕಿರಿಯ, ಮಧ್ಯಮ ಮಟ್ಟದ ನೌಕರರಿಗೆ 85% ‘ಬೋನಸ್’ ಘೋಷಣೆ