ಮಂಗಳೂರು: ಬಂಟ್ವಾಳದಲ್ಲಿ ಎಸ್ಡಿಪಿಐ ಮುಖಂಡನ ಮನೆ ಮೇಲೆ ಎನ್ಐಎ ದಾಳಿಯನ್ನು ಇಂದು ಬೆಳ್ಳಂಬೆಳಗ್ಗೆ ನಡಸಿದೆ ಎನ್ನಲಾಗಿದೆ. ಬಂಟ್ವಾಳದ ಬಿಸಿ ರೋಡ್ನಲ್ಲಿರುವ ರಿಯಾಜ್ ಪರಂಗಿಪೇಟೆಯ ಮನೆ ಮೇಲೆ ದಾಳಿ ನಡೆಸಿದ ಎನ್ಐಎ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದು, ಸದ್ಯ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ ಅಂತ ತಿಳಿದು ಬಂದಿದೆ.
ಬಿಹಾರದ ಪುಲ್ವಾರಿ ಷರೀಫ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂದಪಟ್ಟಂತೆ ಆರೋಪದ ಹಿನ್ನಲಲ್ಲಿ ಎನ್ಐಎ ಅಧಿಕಾರಿಗಳುಯಾಜ್ ಫರಂಗಿಪೇಟೆ ಮನೆ ಮೇಲೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಇನ್ನೂ ಮನೆ ದಾಳಿ ಮಾಡುತ್ತಿದ್ದ ಹಾಗೇ ಸ್ಥಳಕ್ಕೆ ಎಸ್ಡಿಪಿಐ-ಪಿಎಫ್ಐ ಕಾರ್ಯಕರ್ತರು ಆಗಮಿಸಿ ‘ಎನ್ಐಎ ಗೋ ಬ್ಯಾಕ್’ ಎಂದು ಘೋಷಣೆ ಕೂಗಿ ಪ್ರತಿಭಟನೆ ನಡೆಸಲು ಶುರು ಮಾಡಿದರು. ಇದೇ ವೇಳೆ ಸ್ಥಳಕ್ಕೆ ದ ಬಂಟ್ವಾಳ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ಹತೋಟಿಕೆ ತಂದರು.