ಬೆಂಗಳೂರು: ಇಂದು 2022ರ ವರ್ಷದ ಕೊನೆಯ ಸೂರ್ಯಗ್ರಣವು ಇದೀಗ ಮುಕ್ತಾಯಗೊಂಡಿದೆ. ಸಂಜೆ 6.27ಕ್ಕೆ ಸೂರ್ಯಗ್ರಹಣವು ಮುಕ್ತಾಯಗೊಂಡಿದೆ. ಗ್ರಹಣವನ್ನು ಅನೇಕ ಖಗೋಳಾಸಕ್ತರು ಕಣ್ ತುಂಬಿಕೊಂಡರು. ಗ್ರಹಣದ ನಂತ್ರ ರಾಜ್ಯದ ವಿವಿಧ ದೇವಾಲಯಗಳಲ್ಲಿ ಗ್ರಹಣದ ದೋಷ ನಿವಾರಣೆಗಾಗಿ ಶುದ್ಧಿ ಕಾರ್ಯವನ್ನು ನಡೆಸಲಾಗುತ್ತಿದೆ.
ಕನ್ನಡದೊಂದಿಗೆ ತುಳು, ಕೊಡವ ಭಾಷೆಯನ್ನೂ ಕೊಲ್ಲುವುದು ಬಿಜೆಪಿಯ ಹುನ್ನಾರ – ಕಾಂಗ್ರೆಸ್ ಕಿಡಿ
ರಾಯರ ಮಠದ ಯೋಗಶಾಲೆಯಲ್ಲಿ ಗ್ರಹಣ ಶಾಂತಿ ಹೋಮ ನಡೆಸಲಾಗುತ್ತಿದ್ದರೇ, ಸೂರ್ಯ ಗ್ರಮಹಣದ ಹಿನ್ನಲೆಯಲ್ಲಿ ಮಸೀದಿಗಳಲ್ಲಿಯೂ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ. ರಾಜ್ಯದ ವಿವಿಧ ದೇವಾಲಯಗಳಲ್ಲಿ ಗೋಮಯದಿಂದ, ಗೋ ಮೂತ್ರದಿಂದ ದೇವಾಲಯಗಳನ್ನು ಶುದ್ಧೀಕರಿಸಲಾಗಿದೆ.
Gold prices: ದೀಪಾವಳಿ ಹಬ್ಬದ ಹೊತ್ತಲ್ಲೇ ಇಳಿಕೆಯಾದ ಬಂಗಾರದ ಬೆಲೆ: ಬೆಳ್ಳಿ ದರವೂ ಇಳಿಕೆ
ಬೆಂಗಳೂರಿನ ಗವಿಗಂಗಾಧರೇಶ್ವರ ದೇವಾಲಯದ ಆವರಣದಲ್ಲಿಯೂ ನೀರಿನಿಂದ ತೊಳೆದು ಗೋಮಯ, ಗೋಜಲದಿಂದ ಆವರಣವನ್ನು ಶುದ್ಧೀಗೊಳಿಸಲಾಗುತ್ತಿದೆ. ಸೂರ್ಯಗ್ರಮಹಣ ಬಿಟ್ಟ ಹಿನ್ನಲೆಯಲ್ಲಿ ದೇವಾಲಯದ ಆವರಣದಲ್ಲಿನ ನಾಗರ ಕಲ್ಲುಗಳನ್ನು ಶುದ್ಧೀಕರಣಗೊಳಿಸಲಾಯಿತು.
BIGG NEWS : ಶಿವಮೊಗ್ಗ ಜಿಲ್ಲೆಯಲ್ಲಿ ‘ಭಗವದ್ಗೀತೆ’ ಹೋಲುವ ಪುಸ್ತಕ ಮಾರಾಟ, ಹಿಂದೂ ಧರ್ಮದ ಅವಹೇಳನ : ಕೇಸ್ ದಾಖಲು
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಪ್ರಸಿದ್ಧ ಪುಣ್ಯ ಕ್ಷೇತ್ರ ಸಿಗಂಧೂರು ಚೌಡೇಶ್ವರಿ ದೇವಾಲಯದ ಆವರಣದಲ್ಲಿ ಸೂರ್ಯಗ್ರಹಣ ಮುಕ್ತಾಯಗೊಂಡ ನಂತ್ರ ಶಾಂತಿ ಹೋಮವನ್ನು ನೆರವೇರಿಸಲಾಯಿತು.