ಹಾಸನ: ಮಲೆನಾಡು ಭಾಗಗಳಲ್ಲಿ ಕಾಡಾನೆ ಉಪಟಳ ಹೆಚ್ಚಾಗಿದೆ. ಕಾಡಾನೆಗಳ ಕಾಳಗಕ್ಕೆ ಭಾರಿ ಪ್ರಮಾಣದ ಬೆಳೆ ನಾಶವಾಗಿರುವ ಘಟನೆ ಹಾಸನ ಜಿಲ್ಲೆ, ಸಕಲೇಶಪುರ ತಾಲೂಕಿನ, ಕಾಟಿಹಳ್ಳಿ ಗ್ರಾಮದಲ್ಲಿ ನಡೆದಿದೆ.
BIGG NEWS: ದ್ವೇಷ ಭಾಷಣ ಆರೋಪ: ಯುಪಿ CM ಯೋಗಿ ಆದಿತ್ಯನಾಥ್ ಗೆ ಸುಪ್ರೀಂಕೋರ್ಟ್ ಬಿಗ್ ರಿಲೀಫ್
ತಡರಾತ್ರಿ ಡಿಸೋಜ ಎಂಬುವವರ ಕಾಫಿ ತೋಟದಲ್ಲಿ ಎರಡು ಸಲಗಗಳ ನಡುವೆ ಕಾದಾಟ ನಡೆದಿದ್ದು, ಫಸಲಿಗೆ ಬಂದಿದ್ದ ಕಾಫಿ, ಮೆಣಸಿನ ಗಿಡಗಳು, ಬೈನೆ ಮರಗಳು ನೆಲಸಮವಾಗಿವೆ. ಬೆಳೆ ನಷ್ಟದಿಂದ ತೋಟದ ಮಾಲೀಕರು ಕಂಗಾಲಾಗಿದ್ದು, ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ಡಿಸೋಜ ಒತ್ತಾಯಿಸಿದ್ದಾರೆ.