ಬೆಂಗಳೂರು: ಬೆಸ್ಕಾಂನ ಇಂದಿರಾನಗರ, ಕೋರಮಂಗಲ, ಶಿವಾಜಿನಗರ, ಮಲ್ಲೇಶ್ವರಂ ಮತ್ತು ವೈಟ್ ಫೀಲ್ಡ್ ವಿಭಾಗಗಳಿಗೆ ಬಿಡ್ಬ್ಲೂಎಸ್ ಎಸ್ ಬಿ ( BWSSB ) ಮತ್ತು ಬಿಬಿಎಂಪಿ ( BBMP ) ನೀರು ಸರಬರಾಜು ವಿಭಾಗ ಸೇರಿ ಮತ್ತಿತರ ಸರಕಾರಿ ಕಚೇರಿಗಳು 236 ಕೋಟಿ ರೂ.ಗಳಿಗೂ ಅಧಿಕ ವಿದ್ಯುತ್ ಶುಲ್ಕ ( Electricity bill ) ಬಾಕಿ ಇರಿಸಿಕೊಂಡಿದ್ದು, ಬೆಸ್ಕಾಂನ ಐದು ವಿಭಾಗಗಳೂ ಬಿಡ್ಬ್ಲೂ ಎಸ್ ಎಸ್ ಬಿ ಮತ್ತು ಬಿಬಿಎಂಪಿಗೆ ಬಿಲ್ ಪಾವತಿಸಲು ಕೋರಿ ಪ್ರತ್ಯೇಕ ನೋಟಿಸ್ ( BESCOM Notice ) ಜಾರಿಗೊಳಿಸಿವೆ.
BIG BREAKING NEWS: ರಾಜ್ಯ ಸರ್ಕಾರದಿಂದ ಎಲ್ಲಾ ನೇರ ನೇಮಕಾತಿ, ಮುಂಬಡ್ತಿಗೆ ತಡೆ
ಬೆಸ್ಕಾಂನ 9 BESCOM ) ಶಿವಾಜಿನಗರ ವಿಭಾಗಗಳ ವ್ಯಾಪ್ತಿಗೆ ಬರುವ ಪಿಳ್ಳಣ್ಣ ಗಾರ್ಡ್ನ್ , ಬಂಬೂ ಬಜಾರ್, ಕಾಕ್ಸ್ ಟೌನ್, ಬಾಣಸವಾಡಿ ಮತ್ತು ನಾಗವಾರ ಉಪ ವಿಭಾಗಗಳಿಗೆ ಬಿಡ್ಬ್ಲೂಎಸ್ ಎಸ್ ಬಿ ಮತ್ತು ಬಿಬಿಎಂಪಿ ನೀರು ಸರಬರಾಜು ವಿಭಾಗ ಕ್ರಮವಾಗಿ 27.54 ಕೋಟಿ ರೂ ಮತ್ತು 90.20 ಕೋಟಿ ರೂ. ಬಾಕಿ ಇರಿಸಿಕೊಂಡಿದ್ದು, ಬಾಕಿ ಪಾವತಿಸಲು ಸೂಚಿಸಿ ಶಿವಾಜಿನಗರ ಕಾರ್ಯನಿರ್ವಾಹಕ ಇಂಜಿನಿಯರ್ ಎರಡೂ ಸಂಸ್ಥೆಗಳಿಗೆ ನೋಟಿಸ್ ಜಾರಿಗೊಳಿಸಿದ್ದಾರೆ.
ಬೆಸ್ಕಾಂನ ಕೋರಮಂಗಲ ವಿಭಾಗದ ಆಸ್ಟಿನ್ ಟೌನ್, ಕೋರಮಂಗಲ, ಮುರುಗೇಶ್ ಪಾಳ್ಯ, ಮಡಿವಾಳ, ಹೆಚ್.ಎ.ಎಲ್ ಉಪ ವಿಭಾಗಳ ವ್ಯಾಪ್ತಿಗೆ ಒಳಪಡುವ 10 ವಾರ್ಡ್ ಗಳಿಂದ ಬಿಡ್ಬ್ಲೂಎಸ್ ಎಸ್ ಬಿ 23.71 ಕೋಟಿ ರೂ. ವಿದ್ಯುತ್ ಶುಲ್ಕ ಬಾಕಿ ಇರಿಸಿಕೊಂಡಿದ್ದು, 19 ವಾರ್ಡ್ ಗಳಿಂದ ಬಿಬಿಎಂಪಿ ಸುಮಾರು 22.20 ಕೋಟಿ ರೂ. ವಿದ್ಯುತ್ ಶುಲ್ಕ ಪಾವತಿಸಬೇಕಾಗಿದೆ.
BIGG NEWS: ಬಿಜೆಪಿ ಇತಿಹಾಸದಲ್ಲೇ ರಾಜಕೀಯ ಹುನ್ನಾರ ಮಾಡಿಲ್ಲ; ಕಾಂಗ್ರೆಸ್ ಗೆ ಸುಧಾಕರ್ ತಿರುಗೇಟು
ಮಲ್ಲೇಶ್ವರಂ ವಿಭಾಗಗಳ ವ್ಯಾಪ್ತಿಗೆ ಒಳಪಡುವ ಉಪ ವಿಭಾಗಗಳಿಗೆ ಬಿಡ್ಬ್ಲೂಎಸ್ ಎಸ್ ಬಿ ಮತ್ತು ಬಿಬಿಎಂಪಿ ಕ್ರಮವಾಗಿ 13.60 ಕೋಟಿ ರೂ. ಮತ್ತು 16.70 ಕೋಟಿ ರೂ.ಗಳನ್ನು ಬೆಸ್ಕಾಂ ಗೆ ಪಾವತಿಸಬೇಕಾಗಿದೆ. ಮಲ್ಲೇಶ್ವರಂ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಎರಡೂ ಸಂಸ್ಥೆಗಳಿಗೆ ಬಿಲ್ ಪಾವತಿಸಲು ಕೋರಿ ನೋಟಿಸ್ ಜಾರಿಗೊಳಿಸಿದ್ದಾರೆ.
ಇಂದಿರಾನಗರ ವಿಭಾಗಕ್ಕೆ ಬಿಬಿಎಂಪಿ, ಬಿಡ್ಬ್ಲೂಎಸ್ ಎಸ್ ಬಿ, ಕಬ್ಬನ್ ಪಾರ್ಕ್, ವಸತಿ ಇಲಾಖೆ ಮ್ಯೂಸಿಯಂ, ತೋಟಗಾರಿಕೆ ಇಲಾಖೆ, ಪೋಸ್ಟ್ ಆಫೀಸ್, ನ್ಯಾಷನಲ್ ಎರೋನಾಟಿಕ್ಸ್ ಲಿಮಿಟೆಡ್, ಎಲ್ ಐ. ಸಿ, ಬಿ.ಎಸ್. ಎನ್.ಎಲ್, ಬಿ.ಡಿ.ಎ. ಬಿ.ಎಂ.ಆರ್ ಸಿ.ಎಲ್, ಡಿ.ಆರ್.ಡಿ. ಓ, ಹೈಕೋರ್ಟ್ ವಸತಿಗೃಹ, ಮುಂತಾದ ಸರಕಾರಿ ಕಚೇರಿಗಳು ಒಟ್ಟು 36.25 ಕೋಟಿ ರೂ. ವಿದ್ಯುತ್ ಬಿಲ್ ಪಾವತಿಸಬೇಕಾಗಿದೆ ಎಂದು ಇಂದಿರಾನಗರ ಕಾರ್ಯನಿರ್ವಾಹಕ ಇಂಜಿನಿಯರ್ ನೀಡಿರುವ ನೋಟಿಸ್ ನಲ್ಲಿ ವಿವರಿಸಲಾಗಿದೆ.
ಶಿವಮೊಗ್ಗ: ಕೋಣಂದೂರು ಪ್ರಾಥಮಿಕ ಆರೋಗ್ಯ ಕೇಂದ್ರ, 30 ಹಾಸಿಗೆ ಮಾದರಿ ಸಮುದಾಯ ಆರೋಗ್ಯ ಕೇಂದ್ರವಾಗಿ ಉನ್ನತಿ
ಹಾಗೆಯೇ ವೈಟ್ ಫೀಲ್ಡ್ ವಿಭಾಗದ ವ್ಯಾಪ್ತಿಗೆ ಬರುವ ಒಟ್ಟು 7 ವಾರ್ಡ್ ಗಳಿಂದ ಬೆಸ್ಕಾಂಗೆ ಬಿಡ್ಬ್ಲೂಎಸ್ ಎಸ್ ಬಿ ಮತ್ತು ಬಿಬಿಎಂಪಿ ಗಳಿಂದ ಒಟ್ಟು 5.81 ಕೋಟಿ ರೂ. ವಿದ್ಯುತ್ ಶುಲ್ಕ ಬಾಕಿ ಇದೆ.
ವಿದ್ಯುತ್ ಬಿಲ್ ವಸೂಲಿಗೆ ಕ್ರಮ ಕೈಗೊಳ್ಳಲು ಬೆಸ್ಕಾಂ ಎಂಡಿ ಮಹಾಂತೇಶ ಬೀಳಗಿ ಇತ್ತೀಚೆಗೆ ನಡೆದ ಅಧಿಕಾರಿಗಳ ಸಭೆಯಲ್ಲಿ ಕಟ್ಟು ನಿಟ್ಟಿನ ಸೂಚನೆ ನೀಡಿದ್ದರು.