ನವದೆಹಲಿ : ರೈಲು ಎರಡು ಸಮಾನಾಂತರ ಹಳಿಗಳ ಮೇಲೆ ಚಲಿಸುವ ಯಂತ್ರ ಚಾಲಿತ ವಾಹನವಾಗಿದ್ದು, ಸರಕು ಅಥವಾ ಪ್ರಯಾಣಿಕರನ್ನು ಸಾಗಿಸಲು ರೈಲನ್ನು ಸಾಮಾನ್ಯವಾಗಿ ಬಳಸುತ್ತಾರೆ. ಆಧುನಿಕ ಕಾಲದಲ್ಲಿ ಡೀಸೆಲ್ ಮತ್ತು ವಿದ್ಯುತ್ ಯಂತ್ರವನ್ನು ಬಳಸಲಾಗುತ್ತಿತ್ತು. ಆದರೆ ಮುಂದಿನ 2025ರ ಒಳಗೆ ಎಲ್ಲ ಡೀಸೆಲ್ ಹಾಗೂ ಬಯೋ ಇಂಧನ ರೈಲು ಇಂಜಿನ್ಗಳನ್ನು ಹಿಂಪಡೆದು ಸಂಪೂರ್ಣ ಎಲೆಕ್ಟ್ರಿಕ್ ಇಂಜಿನ್ಗಳನ್ನು ಅಳವಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.
ವಿದ್ಯುತ್ ಚಾಲಿತ ವಾಹನಗಳ ಮೇಲೆ ಈ ನೀತಿಯನ್ನು ಕಳೆದ ವಾರ ಜಾರಿಗೆ ತರಲಾಗಿದೆ. ಇದರೊಂದಿಗೆ ರೈಲ್ವೆಯು ಪ್ರಮುಖ ರೈಲು ನಿಲ್ದಾಣಗಳು, ಕಚೇರಿ ಕಟ್ಟಡಗಳು, ಪಾರ್ಕಿಂಗ್ ಸ್ಥಳಗಳು ಇತ್ಯಾದಿ ಸ್ಥಳಗಳಲ್ಲಿ ಚಾರ್ಜಿಂಗ್ ಸ್ಟೇಷನ್ಗಳನ್ನು ನಿರ್ಮಿಸುವುದಾಗಿ ಹೇಳಿದೆ.2023ರೊಳಗೆ ಭಾರತವನ್ನು ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳ (Electric Vehicles) ದೇಶವಾಗಿ ಮಾಡಬೇಕೆಂಬ ಸರ್ಕಾರದ ಗುರಿಯ ಹಿನ್ನೆಲೆಯಲ್ಲಿ ರೈಲ್ವೆಯ ಈ ನೀತಿಗೆ ಮಹತ್ವ ಬಂದಿದೆ.
ರೈಲ್ವೆಯಲ್ಲಿ ಸಂಪೂರ್ಣ ಎಲೆಕ್ಟ್ರಿಕ್ ಇಂಜಿನ್ ಅನುಷ್ಠಾನಕ್ಕೆ ಬರಲು 46 ಸಾವಿರ ಚಾರ್ಜಿಂಗ್ ಸ್ಟೇಷನ್ಗಳು ದೇಶಾದ್ಯಂತ ಬೇಕಾಗುತ್ತವೆ. ಸದ್ಯದ ಗುರಿ ಪ್ರಕಾರ 2023 ರೊಳಗೆ ಶೇ.20, 2024ರೊಳಗೆ ಶೇ.60 ಹಾಗೂ 2025ರ ಅಂತ್ಯದೊಳಗೆ ಶೇ.100ರಷ್ಟು ಎಲೆಕ್ಟ್ರಿಕ್ ಇಂಜಿನ್ ಅಳವಡಿಸುವ ಗುರಿ ಇಲಾಖೆ ಹಾಕಿಕೊಂಡಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.