Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Nike Layoffs 2026: ನೈಕ್ ಉದ್ಯೋಗಿಗಳಿಗೆ ಬಿಗ್ ಶಾಕ್: ಜಾಗತಿಕವಾಗಿ 1,400 ಸಿಬ್ಬಂದಿ ವಜಾಕ್ಕೆ ಮುಂದಾಗ ಕಂಪನಿ

24/04/2026 2:22 PM

SHOCKING: ರಾಜ್ಯದಲ್ಲಿ ಘೋರ ದುರಂತ: ಜೋಕಾಲಿ ಕುತ್ತಿಗೆಗೆ ಬಿಗಿದು 9 ವರ್ಷದ ಬಾಲಕಿ ಸಾವು

24/04/2026 2:16 PM

BIG NEWS : ತುಮಕೂರಿನಲ್ಲಿ 24ನೇ ರಾಷ್ಟ್ರೀಯ ಅಂಡರ್-20 ಕ್ರೀಡಾಕೂಟ : ಶೌಚಾಲಯದಲ್ಲಿ ಸೂಜಿ, ಸಿರಿಂಜ್ ಪತ್ತೆ!

24/04/2026 2:10 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯಾದ್ಯಂತ ಮಾ. 8 ರಿಂದ ‘ಮಹಿಳಾ ಗ್ರಾಮ ಸಭೆ’ ನಡೆಸಲು ರಾಜ್ಯ ಸರ್ಕಾರ ಸೂಚನೆ.!
KARNATAKA

BIG NEWS : ರಾಜ್ಯಾದ್ಯಂತ ಮಾ. 8 ರಿಂದ ‘ಮಹಿಳಾ ಗ್ರಾಮ ಸಭೆ’ ನಡೆಸಲು ರಾಜ್ಯ ಸರ್ಕಾರ ಸೂಚನೆ.!

By kannadanewsnow5706/03/2025 1:25 PM

ಬೆಂಗಳೂರು : ಮಹಿಳಾ ಸಶಕ್ತೀಕರಣ ಹಾಗೂ ಸ್ಥಳೀಯ ಆಡಳಿತದಲ್ಲಿ ಮಹಿಳೆಯರ ಸಕ್ರಿಯ ಭಾಗವಹಿಸುವಿಕೆಗಾಗಿ ಅಂತರರಾಷ್ಟ್ರೀಯ ಮಹಿಳಾ ದಿನವಾದ 8 ಮಾರ್ಚ್ 2025 ರಿಂದ 30 ಜೂನ್‌ 2025ರವರೆಗೆ ಮಹಿಳಾ ಸ್ನೇಹಿ ಗ್ರಾಮ ಪಂಚಾಯತಿ ಅಭಿಯಾನ ಮತ್ತು ಮಹಿಳಾ ಗ್ರಾಮ ಸಭೆಗಳನ್ನು ನಡೆಸಲು ಸೂಚಿಸಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಗ್ರಾಮಗಳ ಅರ್ಧದಷ್ಟು ಜನಸಂಖ್ಯೆಯನ್ನು ಪ್ರತಿನಿಧಿಸುವ ಮಹಿಳೆಯರು, ವಾರ್ಡ್‌ ಮತ್ತು ಗ್ರಾಮ ಸಭೆಗಳಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗಳು ಮತ್ತು ಬೇಡಿಕೆಗಳನ್ನು ಮಂಡಿಸುವುದು ಬಹಳ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಗ್ರಾಮಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 3-ಎಚ್‌ ಅನ್ವಯ ಮಹಿಳೆಯರಿಗಾಗಿ ಗ್ರಾಮ ಸಭೆಗಳನ್ನು ಆಯೋಜಿಸಲು ಅವಕಾಶ ಕಲ್ಪಿಸಲಾಗಿದೆ.

ಗ್ರಾಮ ಪಂಚಾಯತಿಗಳಲ್ಲಿ ಸ್ಥಳೀಯ ಮಹಿಳಾ ಸ್ವಸಹಾಯ ಹಾಗೂ ಸ್ತ್ರೀಶಕ್ತಿ ಸಂಘಗಳ ಸಹಭಾಗಿತ್ವದಲ್ಲಿ ಪೂರ್ವ ಸಿದ್ಧತೆಯೊಂದಿಗೆ ಮಹಿಳೆಯರಿಗಾಗಿ ವಿಶೇಷ ಕಾರ್ಯಕ್ರಮ, ಚಟುವಟಿಕೆಗಳನ್ನು ಆಯೋಜಿಸಿ, ಅರ್ಥಪೂರ್ಣವಾಗಿ ಮಹಿಳಾ ಗ್ರಾಮ ಸಭೆಗಳನ್ನು ನಡೆಸಬೇಕೆಂದು ಸೂಚಿಸಲಾಗಿದೆ. ಮಹಿಳೆಯರಿಂದ ಬರುವ ಬೇಡಿಕೆ, ಸಮಸ್ಯೆ ಹಾಗೂ ಪ್ರಶ್ನೆಗಳಿಗೆ ಸಂಬಂಧಿಸಿದ ಇಲಾಖೆಗಳು ಸ್ಪಂದಿಸುವ ಮೂಲಕ ಮಹಿಳಾ ಸ್ನೇಹಿ ಗ್ರಾಮ ಪಂಚಾಯತಿ ಅಭಿಯಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕೆಂದು ನಿರ್ದೇಶಿಸಲಾಗಿದೆ.

ಮಹಿಳಾ ಸ್ನೇಹಿ ಗ್ರಾಮ ಪಂಚಾಯತಿ ಅಭಿಯಾನ ನಡೆಸುವ ಹಿನ್ನಲೆಯಲ್ಲಿ ಪೂರ್ವಭಾವಿಯಾಗಿ ಮಹಿಳೆಯರು ಮತ್ತು ಮಕ್ಕಳಿಗೆ ಸಂಬಂಧಿಸಿದ ಉಪ ಸಮಿತಿಗಳ ಸಭೆಗಳನ್ನು ನಡೆಸಲು ಸೂಚಿಸಲಾಗಿದೆ. ಪ್ರತಿ ಗ್ರಾಮದ ಮಹಿಳೆಯರ ಅಂಕಿ-ಸಂಖ್ಯೆಯ ವಿವರಗಳನ್ನು ಸಂಗ್ರಹಿಸಿ ಮಹಿಳಾ ಗ್ರಾಮಸಭೆಯಲ್ಲಿ ಮಂಡಿಸಬೇಕು. ಗ್ರಾಮಗಳಲ್ಲಿನ ಎಲ್ಲಾ ಸ್ವಸಹಾಯ ಸ್ತ್ರೀ ಶಕ್ತಿ ಸಂಘಗಳ ಸದಸ್ಯರು ಮಹಿಳಾ ಗ್ರಾಮ ಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಖಾತರಿ ಪಡಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಮಹಿಳಾಸ್ನೇಹಿ ಗ್ರಾಮ ಪಂಚಾಯತಿ ಅಭಿಯಾನದ 16 ವಾರಗಳ ಅವಧಿಯಲ್ಲಿ ವಾರಕ್ಕೊಂದರಂತೆ ಸಾಂಸ್ಕೃತಿಕ, ಮನರಂಜನೆ, ಕ್ರೀಡೆ, ಆರೋಗ್ಯ, ಪೌಷ್ಟಿಕಾಂಶ, ನೈರ್ಮಲ್ಯ, ಮಹಿಳಾ ಕಾನೂನುಗಳು ಮುಂತಾದ ವಿಷಯಗಳ ಕುರಿತು ಕಾರ್ಯಕ್ರಮಗಳನ್ನು ಆಯೋಜಿಸಲು ಸೂಚಿಸಲಾಗಿದೆ. ಗ್ರಾಮಸಭೆ ನಡೆಸುವ ಸಮಯದಲ್ಲಿ ಆರೋಗ್ಯ ಶಿಬಿರ, ವಸ್ತು ಪ್ರದರ್ಶನ, ಸಸಿ ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಲಹೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

BIG NEWS: State government orders to hold 'Women's Gram Sabha' across the state from March 8th!
Share. Facebook Twitter LinkedIn WhatsApp Email

Related Posts

SHOCKING: ರಾಜ್ಯದಲ್ಲಿ ಘೋರ ದುರಂತ: ಜೋಕಾಲಿ ಕುತ್ತಿಗೆಗೆ ಬಿಗಿದು 9 ವರ್ಷದ ಬಾಲಕಿ ಸಾವು

24/04/2026 2:16 PM2 Mins Read

BIG NEWS : ತುಮಕೂರಿನಲ್ಲಿ 24ನೇ ರಾಷ್ಟ್ರೀಯ ಅಂಡರ್-20 ಕ್ರೀಡಾಕೂಟ : ಶೌಚಾಲಯದಲ್ಲಿ ಸೂಜಿ, ಸಿರಿಂಜ್ ಪತ್ತೆ!

24/04/2026 2:10 PM1 Min Read

ಪಬ್ನಲ್ಲಿ ಯುವತಿಗೆ ಕಿರುಕುಳ ನೀಡಿದ ಆರೋಪ : ಹೊರಗೆ ಬಂದ ತಕ್ಷಣ, ಯುವತಿಯರಿಂದ ಯುವಕನಿಗೆ ಹಿಗ್ಗಾಮುಗ್ಗಾ ಥಳಿತ!

24/04/2026 2:06 PM1 Min Read
Recent News

Nike Layoffs 2026: ನೈಕ್ ಉದ್ಯೋಗಿಗಳಿಗೆ ಬಿಗ್ ಶಾಕ್: ಜಾಗತಿಕವಾಗಿ 1,400 ಸಿಬ್ಬಂದಿ ವಜಾಕ್ಕೆ ಮುಂದಾಗ ಕಂಪನಿ

24/04/2026 2:22 PM

SHOCKING: ರಾಜ್ಯದಲ್ಲಿ ಘೋರ ದುರಂತ: ಜೋಕಾಲಿ ಕುತ್ತಿಗೆಗೆ ಬಿಗಿದು 9 ವರ್ಷದ ಬಾಲಕಿ ಸಾವು

24/04/2026 2:16 PM

BIG NEWS : ತುಮಕೂರಿನಲ್ಲಿ 24ನೇ ರಾಷ್ಟ್ರೀಯ ಅಂಡರ್-20 ಕ್ರೀಡಾಕೂಟ : ಶೌಚಾಲಯದಲ್ಲಿ ಸೂಜಿ, ಸಿರಿಂಜ್ ಪತ್ತೆ!

24/04/2026 2:10 PM

ಪಬ್ನಲ್ಲಿ ಯುವತಿಗೆ ಕಿರುಕುಳ ನೀಡಿದ ಆರೋಪ : ಹೊರಗೆ ಬಂದ ತಕ್ಷಣ, ಯುವತಿಯರಿಂದ ಯುವಕನಿಗೆ ಹಿಗ್ಗಾಮುಗ್ಗಾ ಥಳಿತ!

24/04/2026 2:06 PM
State News
KARNATAKA

SHOCKING: ರಾಜ್ಯದಲ್ಲಿ ಘೋರ ದುರಂತ: ಜೋಕಾಲಿ ಕುತ್ತಿಗೆಗೆ ಬಿಗಿದು 9 ವರ್ಷದ ಬಾಲಕಿ ಸಾವು

By kannadanewsnow0924/04/2026 2:16 PM KARNATAKA 2 Mins Read

ಶಿವಮೊಗ್ಗ: ಬೇಸಿಗೆ ರಜೆಯ ಮೋಜು-ಮಸ್ತಿಗಾಗಿ ಚಿಕ್ಕಮ್ಮನ ಮನೆಗೆ ಬಂದಿದ್ದ ಬಾಲಕಿಯೊಬ್ಬಳು, ಆಟವಾಡುತ್ತಲೇ ಸಾವನ್ನಪ್ಪಿರುವ ದಾರುಣ ಘಟನೆಯೊಂದು ಶಿವಮೊಗ್ಗ ಜಿಲ್ಲೆಯ ಲಕ್ಕಿನಕೊಪ್ಪದಲ್ಲಿ…

BIG NEWS : ತುಮಕೂರಿನಲ್ಲಿ 24ನೇ ರಾಷ್ಟ್ರೀಯ ಅಂಡರ್-20 ಕ್ರೀಡಾಕೂಟ : ಶೌಚಾಲಯದಲ್ಲಿ ಸೂಜಿ, ಸಿರಿಂಜ್ ಪತ್ತೆ!

24/04/2026 2:10 PM

ಪಬ್ನಲ್ಲಿ ಯುವತಿಗೆ ಕಿರುಕುಳ ನೀಡಿದ ಆರೋಪ : ಹೊರಗೆ ಬಂದ ತಕ್ಷಣ, ಯುವತಿಯರಿಂದ ಯುವಕನಿಗೆ ಹಿಗ್ಗಾಮುಗ್ಗಾ ಥಳಿತ!

24/04/2026 2:06 PM

ALERT : 3 ದಿನಕ್ಕೂ ಹೆಚ್ಚು ದಿನ ಫ್ರಿಜ್‌ ನಲ್ಲಿಟ್ಟ ಇಡ್ಲಿ-ದೋಸೆ ಹಿಟ್ಟು ಬಳಸಿದ್ರೆ ಈ ಆರೋಗ್ಯ ಸಮಸ್ಯೆಗಳು ಫಿಕ್ಸ್.!

24/04/2026 1:44 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.