ಬೆಂಗಳೂರು: ವಿಧಾನಪರಿಷತ್ ಸಭಾಪತಿಯಾಗಿದ್ದಂತ ( Chairman of the Legislative Council ) ಬಸವರಾಜ ಹೊರಟ್ಟಿಯವರು ( Basavaraj Horatti ) ರಾಜೀನಾಮೆ ನೀಡಿದ ಬಳಿಕ, ಆ ಸ್ಥಾನ ತೆರವಾಗಿತ್ತು. ಹೀಗಾಗಿ ಹಂಗಾಮಿ ಸಭಾಪತಿಯಾಗಿ ರಘುನಾಥ್ ರಾವ್ ಮಲ್ಕಾಪುರೆ ಅವರನ್ನು ನೇಮಕ ಮಾಡಲಾಗಿತ್ತು. ಇದೀಗ ಈ ಸ್ಥಾನಕ್ಕೆ ಚುನಾವಣೆ ಘೋಷಣೆ ಮಾಡಲಾಗಿದೆ.
ಲಾಲು ಯಾದವ್ ಗೆ ಕಿಡ್ನಿ ದಾನ ಮಾಡಿದ ಪುತ್ರಿ ; ಜನರ ಬೆಂಬಲಕ್ಕೆ ಧನ್ಯವಾದ ಅರ್ಪಿಸಿದ ರೋಹಿಣಿ ಆಚಾರ್ಯ
ಈ ಕುರಿತಂತೆ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದಾರೆ. ಅದರ ಪ್ರತಿ ಕನ್ನಡ ನ್ಯೂಸ್ ನೌಗೆ ಲಭ್ಯವಾಗಿದ್ದು, ಕರ್ನಾಟಕ ವಿಧಾನ ಪರಿಷತ್ತಿನ ( Vidhana Parishath Speaker Election ) ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮಗಳ ನಿಯಮ7ರ ಉಪ ನಿಯಮ(1)ರಂತೆ ದಿನಾಂಕ 21-12-2022ರಂದು ಸಭಾಪತಿಯವರ ಚುನಾವಣೆಯನ್ನು ನಡೆಸಲು ದಿನಾಂಕ ನಿಗದಿ ಪಡಿಸಿದ್ದಾರೆ.
Gujarat Results: ಕರ್ನಾಟಕದಲ್ಲಿ ‘ಮೋದಿ ಮ್ಯಾಜಿಕ್’ ವರ್ಕ್ ಆಗಲ್ಲ: ಗುಜರಾತ್ ಫಲಿತಾಂಶ ಬಿಜೆಪಿ ಸಾಧನೆಯೂ ಅಲ್ಲ – HDK
ಈ ಹಿನ್ನಲೆಯಲ್ಲಿ ದಿನಾಂಕ 21-12-2022ರಂದು ಬಸವರಾಜ ಹೊರಟ್ಟಿ ಅವರ ರಾಜೀನಾಮೆಯಿಂದ ತೆರವಾಗಿರುವಂತ ಪರಿಷತ್ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ವರದಿ: ವಸಂತ ಬಿ ಈಶ್ವರಗೆರೆ