ಬೆಂಗಳೂರು: ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ( Primary and High School ) 2022-23ನೇ ಸಾಲಿನ ಸಮುದಾಯದತ್ತ ಶಾಲಾ ಕಾರ್ಯಕ್ರಮವನ್ನು ನಡೆಸಲು ದಿನಾಂಕವನ್ನು ಶಿಕ್ಷಣ ಇಲಾಖೆ ( Education Department ) ನಿಗದಿ ಪಡಿಸಿತ್ತು. ಅದರಂತೆ ನಾಳೆ ಪ್ರಾಥಮಿಕ ಶಾಲೆಗಳಲ್ಲಿ, ನಾಡಿದ್ದು ಪ್ರೌಢ ಶಾಲೆಗಳಲ್ಲಿ ಆಯೋಜಿಸಲು ಸೂಚಿಸಿತ್ತು. ಆದರೇ ಇದೀಗ ಈ ಕಾರ್ಯಕ್ರಮವನ್ನು ದಿಢೀರ್ ಮುಂದೂಡಿಕೆ ಮಾಡಿ ಸಾರ್ವಜನಿಕ ಶಿಕ್ಷಣ ಇಲಾಖೆ ( School Education Department ) ಆದೇಶಿಸಿದೆ. ಅಲ್ಲದೇ ಮರು ದಿನಾಂಕ ಕೂಡ ನಿಗದಿ ಮಾಡಿದೆ.
ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಹೊರಡಿಸಿದ್ದು, ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ 2022-23ನೇ ಸಾಲಿನ ಮೊದಲನೆಯ ಸಮುದಾಯದತ್ತ ಶಾಲಾ ಕಾರ್ಯಕ್ರಮವನ್ನು ಕ್ರಮವಾಗಿ ದಿನಾಂಕ 29-10-2022 ಮತ್ತು 31-10-2022ರಂದು ನಿಗದಿ ಪಡಿಸಿ, ಆದೇಶಿಸಲಾಗಿತ್ತು ಎಂದಿದ್ದಾರೆ.
ಪ್ರಸ್ತುತ ರಾಜ್ಯದ ಶಾಲೆಗಳಲ್ಲಿ ಸಂಕಲನಾತ್ಮಕ ಮೌಲ್ಯಮಾಪನ-1(ಎಸ್ಎ-1) ಕಾರ್ಯಚಟುವಟಿಕೆಯನ್ನು ಮುಂದೂಡಲಾಗಿದ್ದು, ಶಾಲಾ ವಿದ್ಯಾರ್ಷಿಗಳ ಕಲಿಕಾ ಪ್ರಗತಿಯ ವಿಶ್ಲೇಷಣಾ ವರದಿ ಪ್ರಸ್ತುತ ಅಲಭ್ಯವಾಗುವುದರಿಂದ ಅದರ ಆಧಾರದ ಮೇಲೆ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ದಿನಾಂಕ 29-10-2022 ಮತ್ತು 31-10-2022ರಂದು ಕೈಗೊಳ್ಳಬೇಕಾಗಿರುವ 2022-23ನೇ ಸಾಲಿನ ಮೊದಲನೆಯ ಸಮುದಾಯದತ್ತ ಶಾಲಾ ಕಾರ್ಯಕ್ರಮವನ್ನು ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಹಿತದೃಷ್ಠಿಯಿಂದ ರಾಜ್ಯದ ಎಲ್ಲಾ ಪ್ರಾಥಮಿಕ ಶಾಲೆಗಳಲ್ಲಿ ದಿನಾಂಕ 28-11-2022 ಮತ್ತು ಎಲ್ಲಾ ಪ್ರೌಢಶಾಲೆಗಳಲ್ಲಿ ದಿನಾಂಕ 30-11-2022ರಂದು ನಿರ್ವಹಿಸಲು ಸೂಚಿಸಿದ್ದಾರೆ.
BIGG NEWS: ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾಗಿ ಮಾಜಿ ಪ್ರಧಾನಿ ದೇವೇಗೌಡ ಮರು ಆಯ್ಕೆ
ಇನ್ನೂ ಶಿಕ್ಷಣ ಇಲಾಖೆಯಿಂದ ಮರು ನಿಗದಿ ಪಡಿಸಿರುವಂತ ದಿನಾಂಕದಂತೆ ಸಮುದಾಯದತ್ತ ಶಾಲಾ ಕಾರ್ಯಕ್ರಮವನ್ನು ಕೈಗೊಳ್ಳುವಂತೆ ಸಂಬಂಧಿಸಿದ ಇಲಾಖಾಧಿಕಾರಿಗಳು, ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮುಖ್ಯಸ್ಥರಿಗೆ ತಿಳಿಸಲಾಗಿದೆ.
ವರದಿ: ವಸಂತ ಬಿ ಈಶ್ವರಗೆರೆ