ಬೆಂಗಳೂರು: ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರುಗಳನ್ನು ( Primary and secondary school teachers ) ನಿಯಮ ಬಾಹಿರವಾಗಿ ನಿಯೋಜನೆ ಮಾಡಿರುವುದನ್ನು ರದ್ದುಗೊಳಿಸಿ, ಶಿಕ್ಷಣ ಇಲಾಖೆ ( Education Department ) ಆದೇಶಿಸಿದೆ.
BREAKING NEWS: ಸಶಸ್ತ್ರ ಪಡೆಗಳ ಪಿಂಚಣಿ ಪರಿಷ್ಕರಣೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ | One Rank One Pension
ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ( School Education Department ) ಆಯುಕ್ತರು ಆದೇಶಿಸಿದ್ದು, ರಾಜ್ಯದ ಹಲವು ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರುಗಳನ್ನು ನಿಯಮ ಬಾಹಿರವಾಗಿ ನಿಯೋಜನೆಗೊಳಿಸಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಈ ಹಿನ್ನಲೆಯಲ್ಲಿ ನಿಯಮಬಾಹಿರವಾಗಿ ಮಾಡಿರುವ ಎಲ್ಲಾ ಶಿಕ್ಷಕರ ನಿಯೋಜನೆಗಳನ್ನು ಕೂಡಲೇ ರದ್ದುಪಡಿಸುವಂತೆ ಸೂಚಿಸಿದ್ದಾರೆ.
ಇದಷ್ಟೇ ಅಲ್ಲದೇ ಒಂದು ವೇಳೆ ಶಿಕ್ಷಕರ ನಿಯೋಜನೆಗಳನ್ನು ಎಲ್ಲಾ ಉಪ ನಿರ್ದೇಶಕರು ( ಆಡಳಿತ ) ಇವರು ರದ್ದು ಪಡಿಸಿ, ಕೈಗೊಂಡು ಕ್ರಮದ ಬಗ್ಗೆ ಇಲಾಖೆಗೆ ಮಾಹಿತಿ ನೀಡದೇ ಇದ್ದಲ್ಲೇ, ಅಂತಹ ಜಿಲ್ಲಾ ಉಪ ನಿರ್ದೇಶಕರ ವಿರುದ್ಧ ಶಿಸ್ತು ಕ್ರಮ ಜರುಗಿಸೋದಾಗಿ ಎಚ್ಚರಿಕೆ ನೀಡಿದ್ದಾರೆ.