ನವದೆಹಲಿ: ಇಂದು ಇಡಿ ವಿಚಾರಣೆಗೆ ಡಿ.ಕೆ ಸುರೇಶ್ ಹಾಜರಾಗಿದ್ದರು. ಅದಕ್ಕೂ ಮುನ್ನ ಜಾರಿ ನಿರ್ದೇಶನಾಲಯಗೆ ಕಿರುಕುಳ ಸಂಸ್ಥೆ ಎಂದು ಮರುನಾಮಕರಣ ಮಾಡಬೇಕು ಎಂದು ಸಂಸದ ಡಿ.ಕೆ ಸುರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
BIGG NEWS: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಕನಕದಾಸ ಜಯಂತಿ ಆಚರಣೆಗೆ ಪಟ್ಟು
ನಗರದಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಉದ್ದೇಶ ಪೂರ್ವಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಯಂಗ್ ಇಂಡಿಯಾಕ್ಕೆ ದೇಣಿಗೆ ನೀಡಿದ ವಿಚಾರದಲ್ಲಿ ಡಿ.ಕೆ ಸುರೇಶ್ ಅವರಿಗೆ ಎರಡನೇ ಬಾರಿಗೆ ಸಮನ್ಸ್ ನೀಡಲಾಗಿತ್ತು. ಸಮನ್ಸ್ ಹಿನ್ನಲೆ ಇಂದು ದೆಹಲಿಯಲ್ಲಿರುವ ಇಡಿ ಕಚೇರಿಗೆ ಹಾಜರಾದರು.
BIGG NEWS: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಕನಕದಾಸ ಜಯಂತಿ ಆಚರಣೆಗೆ ಪಟ್ಟು
ವಿಚಾರಣೆಗೂ ಮುನ್ನ ಮಾತನಾಡಿದ, ಇಡಿ ಕಿರುಕುಳ ನೀಡುವ ಸಂಸ್ಥೆಯಾಗಿದೆ, ಇಡಿ ಅನ್ನೋ ಹೆಸರು ಬದಲಿಸಿ ಕಿರುಕುಳ ಸಂಸ್ಥೆ ಮಾಡಬೇಕು, ರಾಜಕೀಯ ಕಾರಣಗಳಿಗೆ ಕಿರುಕುಳ ನೀಡುತ್ತಿದ್ದಾರೆ ಅನಿಸುತ್ತಿದೆ. ಕಳೆದ ಬಾರಿ ವಿಚಾರಣೆ ಎದುರಿಸಿದ್ದೆವು, ಆನ್ ಲೈನ್ ನಲ್ಲಿ ದಾಖಲೆಗಳನ್ನು ಸಲ್ಲಿಸುವುದಾಗಿ ಹೇಳಿದ್ದೆವು. ಆದರೂ ಮತ್ತೆ ವಿಚಾರಣೆಗೆ ಕರೆದಿದ್ದಾರೆ.