ಕೆಎನ್ಎನ್ ಡಿಜಿಟಲ್ ಡೆಸ್ಟ್ : ಸಿಹಿ ಇರಲಿ, ಖಾರ ಇರಲಿ ಅದಕ್ಕೆ ಸ್ವಲ್ಪ ತುಪ್ಪವನ್ನು ಹಾಕಿಕೊಂಡು ಆಸ್ವಾದಿಸಿದರೆ ರುಚಿಯೇ ಬೇರೆ ತರ ಇರುತ್ತೆ. ನಮ್ಮ ಹಿರಿಯರು ತಮ್ಮ ಆಹಾರ ಪದಾರ್ಥಗಳಲ್ಲಿ ತುಪ್ಪವನ್ನು ಸೇವಿಸುತ್ತಿದ್ದರು. ಈ ತುಪ್ಪವನ್ನು ಹಿತಮಿತವಾಗಿ ಪ್ರತಿನಿತ್ಯ ಸೇವಿಸುವುದರಿಂದ ನಮ್ಮ ಆರೋಗ್ಯದ ಸುಧಾರಣೆಗೆ ಅನೇಕ ಪ್ರಯೋಜನವಿದೆ.
ಕಾಂತಿಯುತ ಚರ್ಮ:
ತುಪ್ಪವು ಚರ್ಮವನ್ನು ಕಾಂತಿಯುತವಾಗಿ ಮತ್ತು ಸುಂದರವಾಗಿಡುತ್ತದೆ. ತುಪ್ಪವು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ತುಪ್ಪವು ವಯಸ್ಸಾದ ಚಿಹ್ನೆಗಳನ್ನು ತಡೆಯುತ್ತದೆ. ಜೊತೆಗೆ ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ. ಇದು ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ. ತುಪ್ಪವು ಚರ್ಮ ಮತ್ತು ಕೂದಲಿಗೆ ಹೊಳಪನ್ನು ತರುತ್ತದೆ.
ಮೆದುಳಿನ ಆರೋಗ್ಯ:
ತುಪ್ಪದಲ್ಲಿ ಹೆಚ್ಚಿನ ಖನಿಜಗಳು ಹಾಗೂ ಸ್ಯಾಚುರೇಟೆಡ್ ಕೊಬ್ಬುಗಳು ಇರುತ್ತವೆ. ಇದರಿಂದಾಗಿ ತುಪ್ಪವನ್ನು ಸೇವಿಸುವುದರಿಂದ ಮೂಳೆಗಳು ಗಟ್ಟಿಮುಟ್ಟಾಗುತ್ತವೆ. ಜೊತೆಗೆ ನರಗಳ ಹಾಗೂ ಮೆದುಳಿನ ಆರೋಗ್ಯವನ್ನು ಕಾಪಾಡುತ್ತದೆ. ಇದರಿಂದಾಗಿ ತುಪ್ಪವನ್ನು ಪ್ರತಿನಿತ್ಯ ಹಿತ ಮಿತವಾಗಿ ಬಳಸುವುದು ಅತ್ಯವಶ್ಯವಾಗಿದೆ.
ಜೀರ್ಣಕ್ರಿಯೆ:
ತುಪ್ಪವು ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ನೀವು ರೊಟ್ಟಿ, ಚಪಾತಿ ಅಥವಾ ಯಾವುದಾದರೂ ನಾರಿನ ಪದಾರ್ಥದ ಜೊತೆಗೆ ತಿನ್ನುವುದರಿಂದ ಅದನ್ನು ಸುಲಭವಾಗಿ ಜೀರ್ಣಕ್ರಿಯೆ ಮಾಡಲು ಸಹಕಾರಿಯಾಗಿದೆ. ಹಾಗೂ ಚಯಾಪಚಯವೂ ಸರಿಯಾದ ರೀತಿಯಲ್ಲಿ ಆಗುತ್ತದೆ. ಗ್ಯಾಸ್ ಆದವರು ತುಪ್ಪವನ್ನು ಸೇವಿಸಬೇಕು. ಇದು ಉತ್ತಮ ಜೀರ್ಣಕ್ರಿಯೆಗೆ ಸಂಬಂಧಿಸಿರುವುದರಿಂದ ಗ್ಯಾಸ್ ಬಹುಬೇಗ ಕಡಿಮೆ ಮಾಡಿ, ದೇಹದ ಆರೋಗ್ಯವನ್ನು ಕಾಪಾಡುತ್ತದೆ.
ರೋಗಗಳ ವಿರುದ್ಧ ಹೋರಾಟ:
ತುಪ್ಪದಲ್ಲಿ ಬಹಳಷ್ಟು ಬ್ಯುಟರಿಕ್ ಆಮ್ಲವಿರುತ್ತದೆ. ಇದು ರೋಗದ ವಿರುದ್ಧ ಹೋರಾಡುವ ಜೀವಸತ್ವಗಳನ್ನು ದೇಹದಲ್ಲಿ ಹೆಚ್ಚಿಸುತ್ತದೆ. ತುಪ್ಪವು ಪ್ರಮುಖ ಕೊಬ್ಬಿನಾಮ್ಲಗಳು ಮತ್ತು ಕೊಬ್ಬು ಕರಗುವ ಜೀವಸತ್ವಗಳ ಗಮನಾರ್ಹ ಮೂಲವಾಗಿದೆ.