ಉತ್ತರಾಖಂಡ : ಇಂದು ಬೆಳಿಗ್ಗೆ ಉತ್ತರಾಖಂಡದ ತೆಹ್ರಿಯಲ್ಲಿ ರಿಕ್ಟರ್ ಮಾಪಕದಲ್ಲಿ 4.5 ತೀವ್ರತೆಯ ಭೂಕಂಪ ಸಂಭವಿಸಿದೆ.
ಭಾನುವಾರ 8:33 ಕ್ಕೆ ಭೂಕಂಪ ಸಂಭವಿಸಿದೆ.ಉತ್ತರಕಾಶಿಯ ಪೂರ್ವ-ಆಗ್ನೇಯಕ್ಕೆ 17 ಕಿಲೋಮೀಟರ್ ದೂರದಲ್ಲಿ 5 ಕಿಲೋಮೀಟರ್ ಆಳದಲ್ಲಿ 30.67 ಡಿಗ್ರಿ ಅಕ್ಷಾಂಶ ಮತ್ತು 78.60 ಡಿಗ್ರಿ ರೇಖಾಂಶದಲ್ಲಿ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್ಸಿಎಸ್) ಮಾಹಿತಿ ನೀಡಿದೆ.
An earthquake with a magnitude of 4.5 on the Richter Scale hit Tehri, Uttarakhand today at 8:33 am (IST): National Center for Seismology (NCS) pic.twitter.com/qCjZJKTrBc
— ANI (@ANI) November 6, 2022
ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ಇನ್ನೂ ವರದಿಯಾಗಿಲ್ಲ. ವರದಿಗಳ ಪ್ರಕಾರ, ದೆಹಲಿ-ಎನ್ಸಿಆರ್ನಲ್ಲಿ ಲಘು ಕಂಪನದ ಅನುಭವವಾಗಿದೆ.
ಉತ್ತರಕಾಶಿ, ಚಮೋಲಿ, ರುದ್ರಪ್ರಯಾಗ ಮತ್ತು ಉತ್ತರಾಖಂಡದ ಹಲವು ಪ್ರದೇಶಗಳು ಕಳೆದ ಆರು ವರ್ಷಗಳಿಂದ ಭೂಕಂಪಗಳಿಂದ ಪದೇ ಪದೇ ನಡುಗುತ್ತಿವೆ. ಫೆಬ್ರವರಿ 6 ರಂದು 5.8 ತೀವ್ರತೆಯ ಬೂಂಪನ ಸಂಭವಿಸಿತ್ತು.
BIG NEWS: ಅಕ್ರಮ ಮೀನುಗಾರಿಕೆ ಆರೋಪ: 15 ಭಾರತೀಯ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ