Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಹಿಂದಿ ಅಂಕದ ವಿಷಯದಲ್ಲಿ ಕೋರ್ಟ್ ಆದೇಶದ ವಿಚಾರ : ಸಚಿವ ಮಧು ಬಂಗಾರಪ್ಪ ಹೇಳಿದ್ದೇನು?

18/04/2026 11:02 AM

ಉಪ ಕಛೇರಿಗಳಲ್ಲೇ ಇ – ಸ್ವತ್ತು ವಿತರಣೆ – ಪೌರಾಯುಕ್ತೆ ಎಸ್.ಎನ್. ರಾಧಿಕಾ

18/04/2026 10:54 AM

JOB ALERT : `SSLC’ ಪಾಸಾದವರಿಗೆ ಭರ್ಜರಿ ಗುಡ್ ನ್ಯೂಸ್ : `CRPF’ ನಲ್ಲಿ 9,195 ಕಾನ್ಸ್‌ ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ

18/04/2026 10:47 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಉಪ ಕಛೇರಿಗಳಲ್ಲೇ ಇ – ಸ್ವತ್ತು ವಿತರಣೆ – ಪೌರಾಯುಕ್ತೆ ಎಸ್.ಎನ್. ರಾಧಿಕಾ
KARNATAKA

ಉಪ ಕಛೇರಿಗಳಲ್ಲೇ ಇ – ಸ್ವತ್ತು ವಿತರಣೆ – ಪೌರಾಯುಕ್ತೆ ಎಸ್.ಎನ್. ರಾಧಿಕಾ

By kannadanewsnow0518/04/2026 10:54 AM

ಮಂಡ್ಯ :- ಮದ್ದೂರು ನಗರಸಭಾ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾಗಿರುವ ಗ್ರಾಮ ಪಂಚಾಯಿತಿ ಕಛೇರಿಗಳಲ್ಲೆ ( ಉಪ ಕಛೇರಿ ) ಇ – ಖಾತಾ ಸೇವೆಯನ್ನು ಪ್ರಾರಂಭಿಸಿರುವುದಾಗಿ ನಗರಸಭೆಯ ಪೌರಾಯುಕ್ತೆ ಎಸ್.ಎನ್‌. ರಾಧಿಕಾ ಶುಕ್ರವಾರ ಹೇಳಿದರು.

ನಗರದ ನಗರಸಭೆಯ ಎಸ್.ಎಂ.ಕೃಷ್ಣ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಈ ಹಿಂದೆ ಗ್ರಾಮ ಪಂಚಾಯಿತಿಗಳಾಗಿದ್ದ ಸೋಮನಹಳ್ಳಿ ಹಾಗೂ ಚಾಮನಹಳ್ಳಿಗಳನ್ನು ನಗರಸಭಾ ವ್ಯಾಪ್ತಿಗೆ ಸೇರ್ಪಡೆ ಮಾಡಿರುವ ಹಿನ್ನೆಲೆಯಲ್ಲಿ ಅಲ್ಲಿನ ಸ್ಥಳಿಯ ಸಾರ್ವಜನಿಕರು ಇನ್ನು ಮುಂದೆ ಪ್ರತಿಯೊಂದು ಕೆಲಸ ಕಾರ್ಯಗಳಿಗೂ ನಗರಸಭಾ ಕಛೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂಬ ಆತಂಕದಲ್ಲಿದ್ದರು.

ಆದರೆ, ಸಾರ್ವಜನಿಕರು ನಗರಸಭಾ ಕಛೇರಿಗೆ ಅಲೆದಾಟ ಮಾಡುವ ಸನ್ನಿವೇಶ ಎದುರಾಗಬಾರದು ಎಂಬ ಉದ್ದೇಶದಿಂದ ಈ ಸೇವೆಯನ್ನು ಆರಂಭಗೊಳಿಸಲಾಗಿದ್ದು, ಅಷ್ಟೇ ಅಲ್ಲದೆ ಮುಂದಿನ ದಿನಗಳಲ್ಲಿ ಮನೆ ಕಟ್ಟಲು ಪರವಾನಗಿ ಸೇರಿದಂತೆ ಹಲವು ಸೇವೆಗಳನ್ನು ಕೂಡ ಉಪ ಕಛೇರಿಯಲ್ಲೆ ಆರಂಭಿಸಲಾಗುವುದು ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದರು.

ಇ – ಖಾತಾ ಸೇವೆಯನ್ನು ಪಡೆಯಲು 50 ರೂ ಶುಲ್ಕ ನಿಗಧಿಪಡಿಸಲಾಗಿದೆ. ಅದಲ್ಲದೇ ಗ್ರಾಮ ಪಂಚಾಯಿತಿಯಲ್ಲಿ ಎಷ್ಟು ತೆರಿಗೆ ಪಾವತಿ ಮಾಡಲಾಗುತ್ತಿತ್ತು ಅಷ್ಟೇ ಹಣವನ್ನು ಮಾತ್ರ ಭರಿಸಬೇಕಾಗಿದ್ದು, ಹೆಚ್ಚಿನ ಹಣವನ್ನು ಯಾವುದೇ ಕಾರಣಕ್ಕೂ ಪಡೆಯುವುದಿಲ್ಲ.
ಹಾಗೂ ಅರ್ಜಿ ಸಲ್ಲಿಸಿದ ಮೂರು ದಿನಗಳಲ್ಲಿಯೇ ಪಡೆಯಬಹುದಾಗಿದ್ದು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಏನಾದರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ನನ್ನ ಗಮನಕ್ಕೆ ತಂದರೇ ಅಂತವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಗರಸಭಾ ವ್ಯಾಪ್ತಿಗೆ ಸೇರ್ಪಡೆಯಾಗಿರುವ ಇನ್ನುಳಿದ ಗ್ರಾಪಂಗಳಾದ ಗೆಜ್ಜಲಗೆರೆ ಹಾಗೂ ಗೊರವನಹಳ್ಳಿಗಳಲ್ಲಿಯೂ ಇ ಖಾತಾ ಸೇವೆಯನ್ನು ಮುಂದಿನ ದಿನಗಳಲ್ಲಿ ಪ್ರಾರಂಭಿಸಲಾಗುವುದು. ಸದ್ಯದ ಮಟ್ಟಿಗೆ ಎರಡು ಗ್ರಾಪಂ ವ್ಯಾಪ್ತಿಯ 10 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದು, ಅವುಗಳನ್ನು ನಗರಸಭಾ ಕಛೇರಿಯಲ್ಲಿಯೇ ನೀಡಲಾಗುವುದು ಎಂದು ತಿಳಿಸಿದರು.

ಇನ್ನು ನಗರಸಭಾ ವ್ಯಾಪ್ತಿಯಲ್ಲಿ ತೆರಿಗೆ ವಸೂಲಾತಿಯಲ್ಲಿ ಸಾಕಷ್ಟು ನ್ಯೂನತೆಗಳಿದ್ದವು. ನಾನು ಅಧಿಕಾರ ವಹಿಸಿಕೊಂಡ 5 ತಿಂಗಳಲ್ಲೇ ಶೇ.30 ರಷ್ಟು ಇದ್ದದ್ದನ್ನು ಶೇ.70 ರಷ್ಟು ತೆರಿಗೆ ವಸೂಲಾತಿ ಮಾಡಲಾಗಿದ್ದು, ನಗರಸಭಾ ವ್ಯಾಪ್ತಿಯ ಅಭಿವೃದ್ಧಿ, ಮೂಲ ಸೌಕರ್ಯ ಕಲ್ಪಿಸಲು ಜನರು ತೆರಿಗೆ ಪಾವತಿ ಮಾಡುವುದು ಅತ್ಯವಶ್ಯಕವಾಗಿದ್ದು, ನಿಗಧಿತ ಸಮಯದಲ್ಲಿಯೇ ತೆರಿಗೆ ಪಾವತಿ ಮಾಡುವಂತೆ ಪೌರಾಯುಕ್ತೆ ರಾಧಿಕಾ ಮನವಿ ಮಾಡಿದರು‌.

ಈ ವೇಳೆ ಕಂದಾಯ ಅಧಿಕಾರಿ ಪುಟ್ಟಸ್ವಾಮಿ, ಕಂದಾಯ ನಿರೀಕ್ಷಕ ಲೋಕೇಶ್ ಇದ್ದರು.

ವರದಿ : ಗಿರೀಶ್ ರಾಜ್ ಮಂಡ್ಯ

Share. Facebook Twitter LinkedIn WhatsApp Email

Related Posts

BIG NEWS : ಹಿಂದಿ ಅಂಕದ ವಿಷಯದಲ್ಲಿ ಕೋರ್ಟ್ ಆದೇಶದ ವಿಚಾರ : ಸಚಿವ ಮಧು ಬಂಗಾರಪ್ಪ ಹೇಳಿದ್ದೇನು?

18/04/2026 11:02 AM1 Min Read

BREAKING : ಶಾಸಕರ ಕ್ಷೇತ್ರಕ್ಕೆ ಬಿಡುಗಡೆಯಾದ ಅನುದಾನವನ್ನು ತಮ್ಮ ಕ್ಷೇತ್ರಕ್ಕೆ ಕೊಂಡೋಯ್ದ ಸಚಿವರು!

18/04/2026 10:25 AM1 Min Read

ಮಹಿಳಾ ಸಬಲೀಕರಣಕ್ಕೆ ಮತ್ತೊಂದು ಉದಾಹರಣೆ : ‘ಗೃಹಲಕ್ಷ್ಮಿ’ ಹಣದಿಂದ ಐಸ್ ಕ್ರೀಮ್ ಪಾರ್ಲರ್ ತೆರೆದ ಮಹಿಳೆ!

18/04/2026 10:14 AM1 Min Read
Recent News

BIG NEWS : ಹಿಂದಿ ಅಂಕದ ವಿಷಯದಲ್ಲಿ ಕೋರ್ಟ್ ಆದೇಶದ ವಿಚಾರ : ಸಚಿವ ಮಧು ಬಂಗಾರಪ್ಪ ಹೇಳಿದ್ದೇನು?

18/04/2026 11:02 AM

ಉಪ ಕಛೇರಿಗಳಲ್ಲೇ ಇ – ಸ್ವತ್ತು ವಿತರಣೆ – ಪೌರಾಯುಕ್ತೆ ಎಸ್.ಎನ್. ರಾಧಿಕಾ

18/04/2026 10:54 AM

JOB ALERT : `SSLC’ ಪಾಸಾದವರಿಗೆ ಭರ್ಜರಿ ಗುಡ್ ನ್ಯೂಸ್ : `CRPF’ ನಲ್ಲಿ 9,195 ಕಾನ್ಸ್‌ ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ

18/04/2026 10:47 AM

BREAKING : ಶಾಸಕರ ಕ್ಷೇತ್ರಕ್ಕೆ ಬಿಡುಗಡೆಯಾದ ಅನುದಾನವನ್ನು ತಮ್ಮ ಕ್ಷೇತ್ರಕ್ಕೆ ಕೊಂಡೋಯ್ದ ಸಚಿವರು!

18/04/2026 10:25 AM
State News
KARNATAKA

BIG NEWS : ಹಿಂದಿ ಅಂಕದ ವಿಷಯದಲ್ಲಿ ಕೋರ್ಟ್ ಆದೇಶದ ವಿಚಾರ : ಸಚಿವ ಮಧು ಬಂಗಾರಪ್ಪ ಹೇಳಿದ್ದೇನು?

By kannadanewsnow0518/04/2026 11:02 AM KARNATAKA 1 Min Read

ಬೆಂಗಳೂರು : ಹಿಂದಿ ಅಂಕದ ವಿಷಯದಲ್ಲಿ ಕೋರ್ಟ್ ಆದೇಶದ ವಿಚಾರಕ್ಕೆ ಸಂಬಂಧಪಟ್ಟಂತೆ ಶಿಕ್ಷಕರು ಪಿಐಎಲ್ ಹಾಕಿರುವುದಕ್ಕೆ ಕೋರ್ಟ್ ಆದೇಶ ಮಾಡಿದೆ.…

ಉಪ ಕಛೇರಿಗಳಲ್ಲೇ ಇ – ಸ್ವತ್ತು ವಿತರಣೆ – ಪೌರಾಯುಕ್ತೆ ಎಸ್.ಎನ್. ರಾಧಿಕಾ

18/04/2026 10:54 AM

BREAKING : ಶಾಸಕರ ಕ್ಷೇತ್ರಕ್ಕೆ ಬಿಡುಗಡೆಯಾದ ಅನುದಾನವನ್ನು ತಮ್ಮ ಕ್ಷೇತ್ರಕ್ಕೆ ಕೊಂಡೋಯ್ದ ಸಚಿವರು!

18/04/2026 10:25 AM

ಮಹಿಳಾ ಸಬಲೀಕರಣಕ್ಕೆ ಮತ್ತೊಂದು ಉದಾಹರಣೆ : ‘ಗೃಹಲಕ್ಷ್ಮಿ’ ಹಣದಿಂದ ಐಸ್ ಕ್ರೀಮ್ ಪಾರ್ಲರ್ ತೆರೆದ ಮಹಿಳೆ!

18/04/2026 10:14 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.