ಚೆನ್ನೈ: ತಮಿಳುನಾಡಿನ ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಪಳನಿಸ್ವಾಮಿ ಅವರ ಶಿಬಿರಕ್ಕೆ ಭಾರಿ ಹಿನ್ನಡೆಯಾಗಿ, ಮದ್ರಾಸ್ ಹೈಕೋರ್ಟ್ ಜುಲೈ 11, 2022 ರಂದು ನಡೆದ ಸಾಮಾನ್ಯ ಕೌನ್ಸಿಲ್ ಸಭೆ (ಇಪಿಎಸ್) ಅವರನ್ನು ಮಧ್ಯಂತರ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡುವುದು ಅಸಿಂಧು ಎಂದು ಆದೇಶಿಸಿದೆ. ಮದ್ರಾಸ್ ಹೈಕೋರ್ಟ್ ಜೂನ್ 23ರ ಮೊದಲು ಯಥಾಸ್ಥಿತಿಗೆ ಆದೇಶಿಸಿದೆ. ಎಐಎಡಿಎಂಕೆಯ ಹೊಸ ಸಾಮಾನ್ಯ ಮಂಡಳಿ ಸಭೆಯನ್ನು ನಡೆಸಲು ಆದೇಶಿಸಿದೆ.
ಈ ಕುರಿತು ಎಎನ್ಐ ಮಾಹಿತಿ ಹಂಚಿಕೊಂಡಿದ್ದು “ಓ ಪನ್ನೀರ್ ಸೆಲ್ವಂ ಪರವಾಗಿ ಮದ್ರಾಸ್ ಹೈಕೋರ್ಟ್ ಆದೇಶ ನೀಡಿದೆ. ಜೂನ್ 23ರ ನಂತರ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ಹೊರಡಿಸಿದ್ದು, ಎಐಎಡಿಎಂಕೆಯ ಹೊಸ ಸಾಮಾನ್ಯ ಸಭೆ ನಡೆಸುವಂತೆಯೂ ಆದೇಶಿಸಿದೆ ಎಂದು ಹೇಳಿದೆ.
ಎಐಎಡಿಎಂಕೆ ಸಾಮಾನ್ಯ ಸಭೆ ಕರೆಯುವಾಗ ಓ ಪನ್ನೀರ್ ಸೆಲ್ವಂ ಅವರು ಕಾನೂನುಬದ್ದತೆ ಮತ್ತು ಬೈಲಾಗಳ ಉಲ್ಲಂಘನೆಯನ್ನು ಪ್ರಶ್ನಿಸಿದ್ದರು. ಈ ಕುರಿತು ಇಂದು ಅರ್ಜಿಯ ವಿಚಾರಣೆ ನಡೆಸಿದಂತ ಮದ್ರಾಸ್ ಹೈಕೋರ್ಟ್ ನ್ಯಾಯಪೀಠವು, ಎಐಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಇ ಪಳನಿಸ್ವಾಮಿ ನೇಮಕ ಅಸಿಂಧು ಎಂಬುದಾಗಿ ಹೇಳಿದೆ.
Tamil Nadu | Madras High Court orders in favour of O Panneerselvam. Orders status quo ante June 23, also orders conduct of a fresh general council meet of AIADMK.
O Paneerselvam had questioned the legality and violation of bylaws in convening the AIADMK General Council meeting pic.twitter.com/8mlRRemAm9
— ANI (@ANI) August 17, 2022