ಮೈಸೂರು : ಈ ಬಾರಿ ಅರ್ಥ ಪೂರ್ಣ ಹಾಗೂ ವೈಭವಪೂರ್ಣ ದಸರಾ ಆಚರಣೆ ( Mysore Dasara 2022 ) ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( CM Basavaraj Bommai ) ತಿಳಿಸಿದರು.
ಅವರು ಇಂದು ಮೈಸೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ನಾಳೆ ರಾಷ್ಟ್ರಪತಿ ದ್ರೌ ಪದಿ ಮುರ್ಮು ಅವರಿಂದ ಚಾಮುಂಡೇಶ್ವರಿ ಪೂಜೆ, ದಸರಾ ಉದ್ಘಾಟನೆ ನಡೆಯಲಿದೆ. ದಸರಾ ಹಬ್ಬಕ್ಕೆ ತನ್ನದೇ ಆದ ಪರಂಪರೆ ಇದೆ. ದಸರಾ ನಾಡಹಬ್ಬವೂ ಹೌದು ಜನ ಸುಗ್ಗಿ ಮುಗಿಸಿ ಸಂಭ್ರಮಿಸುವ ಹಬ್ಬವೂ ಹೌದು ಎಂದರು.
ದಸರಾ ಹಬ್ಬದ ಎಲ್ಲಾ ಸಿದ್ಧತೆಗಳನ್ನು ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳು ಹಗಲಿರುಳು ಮಾಡಿದ್ದಾರೆ. ಕರ್ನಾಟಕ ಜನತೆಗೆ ನಾಡಹಬ್ಬ ದಸರಾ ಶುಭಾಶಯಗಳು. ಮೈಸೂರು ಜನತೆಗೆ ವಿಶೇಷ ಶುಭಾಶಯಗಳನ್ನು ಮುಖ್ಯ ಮಂತ್ರಿಗಳು ತಿಳಿಸಿದರು.
ಆಂಬ್ಯುಲೆನ್ಸ್ ಸೇವೆ ಶೀಘ್ರವೇ ದುರಸ್ತಿ
108 ಆಂಬ್ಯುಲೆನ್ಸ್ ಸೇವೆ ಸರ್ವರ್ ಸಮಸ್ಯೆಯಿಂದಾಗಿ ಸ್ಥಗಿತಗೊಂಡಿದ್ದು, ಈಗಾಗಲೇ ದುರಸ್ತಿಯಾಗುತ್ತಿದೆ. ಆರೋಗ್ಯ ಸಚಿವರು ಖುದ್ದು ಇದನ್ನು ಪರಿಶೀಲಿಸುತ್ತಿದ್ದಾರೆ ಎಂದು ತಿಳಿಸಿದರು.