ಬೆಂಗಳೂರು: ನಗರದಲ್ಲಿ ಚಾಲಕನೊಬ್ಬ ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿ ಡಿಕ್ಕಿ ಹೊಡೆದಿದೆ. ಇದರ ಪರಿಣಾಮವಾಗಿ ನಿವೃತ್ತ ಯೋಧರೊಬ್ಬರು ಮೃತಪಟ್ಟಿದ್ದಾರೆ.
‘ಸಿದ್ದರಾಮಣ್ಣನಿಗೆ ಈಗ ಅರಳು ಮರಳು ‘: ಸಿಎಂ ಬೊಮ್ಮಾಯಿ ವಾಗ್ಧಾಳಿ |Basavaraj Bommai
ಹೆಬ್ಬಾಳ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ಕೊಡಿಗೇಹಳ್ಳಿಯ ವಿರುಪಾಕ್ಷಾಪುರ ನಿವಾಸಿ ರವಿಶಂಕರ್ ರಾವ್ ಮೃತಪಟ್ಟಿದ್ದರು. ಘಟನೆಯಲ್ಲಿ ಅವರ ಸ್ನೇಹಿತರಾದ ಮಂಜುನಾಥ್, ನವೀನ್ ಹಾಗೂ ಹೋಟೆಲ್ ಸಿಬ್ಬಂದಿ ರಾಘವೇಂದ್ರ ಸೇರಿ ನಾಲ್ವರಿಗೆ ಗಾಯವಾಗಿತ್ತು.ನಿವೃತ್ತ ಯೋಧರಾಗಿರುವ ರವಿಶಂಕರ್ ರಾವ್, ಖಾಸಗಿ ಸೆಕ್ಯೂರಿಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.
‘ಸಿದ್ದರಾಮಣ್ಣನಿಗೆ ಈಗ ಅರಳು ಮರಳು ‘: ಸಿಎಂ ಬೊಮ್ಮಾಯಿ ವಾಗ್ಧಾಳಿ |Basavaraj Bommai
ಸೋಮವಾರ ರಾತ್ರಿ ಕೆಲಸ ಮುಗಿಸಿಕೊಂಡು ಮಂಜುನಾಥ್, ನವೀನ್ ಜತೆ ಮನೆಗೆ ಹೋಗುತ್ತಿದ್ದರು. ದಾರಿ ಮಧ್ಯೆ ಕೊಡಿಗೇಹಳ್ಳಿ ಮುಖ್ಯರಸ್ತೆಯಲ್ಲಿ ಊಟ ಪಾರ್ಸೆಲ್ ತೆಗೆದುಕೊಂಡು ಹೋಗಲು ಪಾದಚಾರಿ ಮಾರ್ಗದಲ್ಲಿ ನಿಂತಿದ್ದರು. ಈ ವೇಳೆ ಕೊಡಿಗೇಹಳ್ಳಿ ಕಡೆಯಿಂದ ವೇಗವಾಗಿ ಬಂದ ಕಾರು ಚಾಲಕ ಏಕಾಏಕಿ ಪಾದಚಾರಿ ಮಾರ್ಗದ ಮೇಲೆ ಕಾರು ಹತ್ತಿಸಿ, ರವಿಶಂಕರ್ ರಾವ್ ಸೇರಿ ಐವರಿಗೆ ಡಿಕ್ಕಿ ಹೊಡೆದಿದ್ದಾನೆ.