ಹೊಸಪೇಟೆ :ಅಂಜನಾದ್ರಿಯಲ್ಲಿ ಡ್ರಗ್ ಮಾಫಿಯಾ ನಡೆಯುತ್ತಿದೆ. ಆನೆಗೊಂದಿ ಭಾಗದಲ್ಲಿ ಯತೇಚ್ಚವಾಗಿ ಮಾಫಿಯಾ ನಡೀತಿದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗಂಭೀರವಾದ ಆರೋಪವೊಂದನ್ನು ಮಾಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀರಾಮಸೇನೆ ಮುಖ್ಯಸ್ಥ ಮುತಾಲಿಕ್,ರೆಸಾರ್ಟ್ ನಿರ್ಮಿಸಿಕೊಂಡು ಡ್ರಗ್ ಮಾಫಿಯಾ ಮಾಡ್ತಿದ್ದಾರೆ. ಈ ಬಗ್ಗೆ ಸರ್ಕಾರ ಎಚ್ಚೆತ್ತು ತ್ವರಿತವಾಗಿ ತೆರವು ಕಾರ್ಯ ಮಾಡ್ಬೇಕು. ಇಲ್ಲವಾದ್ರೆ ಶ್ರೀರಾಮಸೇನೆ ಬೃಹತ್ ಹೋರಾಟ ಮಾಡುತ್ತೇವೆ ಹೊಸಪೇಟೆಯಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ