ಬೆಂಗಳೂರು : ಬೆಂಗಳೂರಿನಲ್ಲಿ 208 ಕೋಟಿ. ರೂ ಮೌಲ್ಯದ ರಾಕೆಟ್ ಇಂಜಿನ್ ಉತ್ಪಾದನಾ ಘಟಕಕ್ಕೆ ನಾಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ( Droupadi Murmu) ಚಾಲನೆ ನೀಡಲಿದ್ದಾರೆ.
ಸದ್ಯ ಕರ್ನಾಟಕ ಪ್ರವಾಸದಲ್ಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಾಡಹಬ್ಬ ದಸರಾಗೆ ಚಾಲನೆ ನೀಡಿದ್ದಾರೆ. ಇಂದು ಸಂಜೆ ಬೆಂಗಳೂರಿಗೆ ತೆರಳಲಿರುವ ಅವರು ನಾಳೆ ಬೆಂಗಳೂರಿನಲ್ಲಿ 208 ಕೋಟಿ. ರೂ ಮೌಲ್ಯದ ರಾಕೆಟ್ ಇಂಜಿನ್ ಉತ್ಪಾದನಾ ಘಟಕವನ್ನು ಉದ್ಘಾಟಿಸಲಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
208 ಕೋಟಿ ರೂ. ಮೊತ್ತದ ಇಂಟಿಗ್ರೇಟೆಡ್ ಕ್ರಯೋಜೆನಿಕ್ ಇಂಜಿನ್ ಮ್ಯಾನುಫ್ಯಾಕ್ಚರಿಂಗ್ ಫೆಸಿಲಿಟಿ (ICMF) ಅನ್ನು ಬೆಂಗಳೂರಿನಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸ್ಥಾಪಿಸಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಗೆ ಇದು ಸಂಪೂರ್ಣ ರಾಕೆಟ್ ಎಂಜಿನ್ ತಯಾರಿಕೆ ನಡೆಸಲಿದೆ.ಮಂಗಳವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಈ ಘಟಕವನ್ನು ಉದ್ಘಾಟಿಸಲಿದ್ದಾರೆ. ಸೆ.28 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕರ್ನಾಟಕ ಪ್ರವಾಸ ಮುಗಿಸಿ ನವದೆಹಲಿಗೆ ವಾಪಸ್ ಆಗಲಿದ್ದಾರೆ.
BIGG NEWS : ‘ಹಿಂದೂ’ ಭೌಗೋಳಿಕ-ಸಾಂಸ್ಕೃತಿಕ ಅಸ್ಮಿತೆ, ‘ಭಾರತೀಯ’ಕ್ಕೆ ಸಮಾನಾರ್ಥಕ ; ಮೋಹನ್ ಭಾಗವತ್
BIG NEWS: ST ಸಮುದಾಯಕ್ಕೆ ಅವಮಾನವಾದ್ರೇ ರಾಜೀನಾಮೆ – ಸಚಿವ ಬಿ.ಶ್ರೀರಾಮುಲು ಘೋಷಣೆ