ದೆಹಲಿ: ಖ್ಯಾತ ಲೋಕೋಪಕಾರಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಡೆ( D Veerendra Heggade) ಅವರು ಇಂದು ರಾಜ್ಯಸಭಾ ಸದಸ್ಯರಾಗಿ ಕನ್ನಡದಲ್ಲೇ ದೇವರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಜನಪ್ರಿಯ ಸಂಗೀತ ಸಂಯೋಜಕ ಇಳಯರಾಜಾ ಮತ್ತು ಮಾಜಿ ಒಲಿಂಪಿಕ್ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಪಿ.ಟಿ.ಉಷಾ, ಧರ್ಮಸ್ಧಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಡೆ ಸೇರಿದಂತೆ ನಾಲ್ವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿತ್ತು.
ನಿನ್ನೆ ದೆಹಲಿಗೆ ತೆರಳಿದ್ದ ವೀರೇಂದ್ರ ಹೆಗ್ಡೆ ಅವರು ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ.
ಧರ್ಮಾಧಿಕಾರಿ ರತ್ನವರ್ಮ ಹೆಗ್ಗಡೆ ಮತ್ತು ರತ್ನಮ್ಮ ಹೆಗ್ಗಡೆ ದಂಪತಿಯ ಹಿರಿಯ ಪುತ್ರ ವೀರೇಂದ್ರ ಹೆಗ್ಡೆ ಅವರು ನವೆಂಬರ್ 23, 1948 ರಂದು ಜನಿಸಿದರು. ಅವರು ತುಳು ಪರಂಪರೆಯ ಪೆರ್ಗಡೆ ರಾಜವಂಶದಿಂದ ಬಂದವರು.
73 ವರ್ಷ ವಯಸ್ಸಿನ ಹೆಗ್ಗಡೆ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದ ಆನುವಂಶಿಕ ಧರ್ಮದರ್ಶಿಯಾಗಿದ್ದಾರೆ.
Big news: 13.5 ಶತಕೋಟಿ ವರ್ಷಗಳಷ್ಟು ಹಳೆಯ ನಕ್ಷತ್ರಪುಂಜದ ಚಿತ್ರ ಸೆರೆ ಹಿಡಿದ ನಾಸಾದ ʻಜೇಮ್ಸ್ ವೆಬ್ ಟೆಲಿಸ್ಕೋಪ್ʼ!