ಬೆಂಗಳೂರು: ಜುಲೈ 2022ರಲ್ಲಿ ನಡೆದಿದ್ದಂತ ಡಿಪಿಇಡಿ ಪರೀಕ್ಷೆಯ ಫಲಿತಾಂಶವನ್ನು ದಿನಾಂಕ 16-08-2022ರಂದು ಬೆಳಿಗ್ಗೆ 11 ಗಂಟೆಗೆ ಪ್ರಕಟವಾಗಲಿದೆ.
ಈ ಕುರಿತಂತೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮಾಹಿತಿ ಬಿಡುಗಡೆ ಮಾಡಿದ್ದು, ದಿನಾಂಕ 16-08-2022ರಂದು ಬೆಳಿಗ್ಗೆ 11 ಗಂಟೆಗೆ ಜುಲೈ 2022ರಂದು ನಡೆದಿದ್ದಂತ ಡಿಪಿಇಡಿ ಪರೀಕ್ಷೆ ಫಲಿತಾಂಶವನ್ನು ಪ್ರಕಟಿಸಲಾಗುತ್ತಿದೆ. ಫಲಿತಾಂಶ ಪ್ರಕಟವಾಗ 15 ದಿನಗಳೊಳಗೆ ಫಲಿತಾಂಶ ತಿದ್ದುಪಡಿ ಇದ್ದಲ್ಲಿ ಸಲ್ಲಿಸಿದ್ರೇ.. ತಿದ್ದುಪಡಿ ಮಾಡಲಾಗುತ್ತದೆ ಎಂದು ಹೇಳಿದೆ.
ಫಲಿತಾಂಶದ ನಂತ್ರ ಅಭ್ಯರ್ಥಿಯ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಜನ್ಮ ದಿನಾಂಕ ಇತ್ಯಾದಿ ಸಣ್ಣಪುಟ್ಟ ತಿದ್ದುಪಡಿಗಳಿದ್ದಲ್ಲಿ, ಪ್ರಸ್ತಾವನೆಯನ್ನು ಪೂರಕ ದೃಢೀಕೃತ ದಾಖಲೆಗಳೊಂದಿಗೆ ರೂ.200 ದಂಡಶುಲ್ಕವನ್ನು ಮಂಡಳಿಗೆ ಪಾವತಿಸಲಾಗಿರುವ ಎನ್ ಇ ಎಫ್ ಟಿ ಚಲನ್ ಮೂಲ ಪ್ರತಿಯೊಂದಿಗೆ ಸಲ್ಲಿಸುವಂತೆ ತಿಳಿಸಿದೆ.
ಮರು ಏಣಿಕೆ ಅಥವಾ ಮರುಮೌಲ್ಯಮಾಪನ ಸೇಲೆಯನ್ನು ಪಡೆಯಬೇಕಾದಲ್ಲಿ ಛಾಯಾಪ್ರತಿಯನ್ನು ಕಡ್ಡಾಯವಾಗಿ ಪಡೆಯಬೇಕಾಗಿರುತ್ತದೆ. ಛಾಯಾಪ್ರತಿ ಮತ್ತು ಮರುಮೌಲ್ಯಮಾಪನಕ್ಕಾಗಿ ಆನ್ ಲೈನ್ ನಲ್ಲಿ http://sslc.karnataka.gov.in ಜಾಲತಾಣದ ಮೂಲಕ ಸಲ್ಲಿಸುವಂತೆ ತಿಳಿಸಿದೆ.
BIGG NEWS : ಸ್ವಾತಂತ್ರ್ಯ ಸಂಗ್ರಾಮ ಇತಿಹಾಸ ʼಇಂದಿನ ಯುವ ಸಮೂಹʼ ಅರಿತುಕೊಳ್ಳಬೇಕು : ಸಚಿವ ವಿ.ಸೋಮಣ್ಣ