ಬೆಂಗಳೂರು: ಡಿ.ಕೆ ಶಿವಕುಮಾರ್ ಅವರೇ ನೀವು ಸಿಎಂ ಆಗೋದು ಡೌಟ್ ಇದೆ, ಹಾಗಾಗಿ ನೀವೇ ಬಿಜೆಪಿಗೆ ಬಂದುಬಿಡಿ ಎಂದು ಸಚಿವ ಮುನಿರತ್ನ ಆಹ್ವಾನ ಕೊಟ್ಟಿದ್ದಾರೆ.
BIGG NEWS : ಮಂಡ್ಯದಲ್ಲಿ ಬಿಜೆಪಿಗೆ ನೆಲೆ ಇಲ್ಲ, ಅವ್ರಿಂದ ಜೆಡಿಎಸ್ ಮುಕ್ತ ಮಾಡಲು ಆಗಲ್ಲ: ನಿಖಿಲ್ ಕುಮಾರಸ್ವಾಮಿ
ಕಾಂಗ್ರೆಸ್ನಿಂದ ವಲಸೆ ಹೋಗಿರುವ ಶಾಸಕರಿಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತೆ ಆಹ್ವಾನ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಡಿಕೆಶಿ ಬಿಜೆಪಿ ಸೇರುವಂತೆ ಮರು ಆಹ್ವಾನ ಕೊಟ್ಟಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮುನಿರತ್ನ, ನಮ್ಮ ಪಕ್ಷಕ್ಕೆ ಬಂದಿರೋ 17 ಜನರ ಮೇಲೆ ಡಿಕೆ ಶಿವಕುಮಾರ್ ಅವ್ರಿಗೆ ಪ್ರೀತಿಯಿದೆ. ಹಾಗಾಗಿ ಆಹ್ವಾನ ನೀಡ್ತಿದ್ದಾರೆ. ನಮಗೂ ಡಿ.ಕೆ ಶಿವಕುಮಾರ್ ಮೇಲೆ ಪ್ರೀತಿಯಿದೆ. ಅವರೇ ಬೇಕಿದ್ದರೆ ಬಿಜೆಪಿಗೆ ಬರಲಿ ಎಂದು ಹೇಳಿದ್ದಾರೆ.
BIGG NEWS : ಮಂಡ್ಯದಲ್ಲಿ ಬಿಜೆಪಿಗೆ ನೆಲೆ ಇಲ್ಲ, ಅವ್ರಿಂದ ಜೆಡಿಎಸ್ ಮುಕ್ತ ಮಾಡಲು ಆಗಲ್ಲ: ನಿಖಿಲ್ ಕುಮಾರಸ್ವಾಮಿ
ಡಿ.ಕೆ ಶಿವಕುಮಾರ್ಗೆ ಕಾಂಗ್ರೆಸ್ ನಲ್ಲಿ ಭವಿಷ್ಯವಿಲ್ಲ. ಜಿ.ಪರಮೇಶ್ವರ್ ಮುಂದಿನ ದಲಿತ ಮುಖ್ಯಮಂತ್ರಿ ನಾನೇ ಅಂತಾರೆ. ಇನ್ನೊಂದೆಡೆ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಅಂತಾರೆ. ಈ ಬಡಿದಾಟದಲ್ಲಿ ನೀವು ಮುಖ್ಯಮಂತ್ರಿ ಆಗೋದು ಡೌಟ್ ಇದೆ. ಹಾಗಾಗಿ ನೀವೆ ಬಿಜೆಪಿಗೆ ಬನ್ನಿ. ನಾವೇ ನಮ್ಮ ನಾಯಕರು, ಪ್ರಧಾನಿಗೆ ಹೇಳ್ತಿವಿ ನಮ್ಮ ಪಕ್ಷಕ್ಕೆ ಸೇರಿಸಿಕೊಳ್ತಿವಿ ಅಂತ. ಡಿಕೆಶಿಗೆ ನಮ್ಮ ಪಕ್ಷಕ್ಕೆ ಬಂದ್ರೆ ಒಳ್ಳೆದಾಗುತ್ತೆ ಎಂದು ಭವಿಷ್ಯ ನುಡಿದಿದ್ದಾರೆ.
BIGG NEWS : ಮಂಡ್ಯದಲ್ಲಿ ಬಿಜೆಪಿಗೆ ನೆಲೆ ಇಲ್ಲ, ಅವ್ರಿಂದ ಜೆಡಿಎಸ್ ಮುಕ್ತ ಮಾಡಲು ಆಗಲ್ಲ: ನಿಖಿಲ್ ಕುಮಾರಸ್ವಾಮಿ
ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ, ಸ್ಪೀಕರ್ ರಮೇಶ್ ಕುಮಾರ್ ನಮ್ಮ ಪಕ್ಷಕ್ಕೆ ಬಿಟ್ಟು ಹೋದವರ ಅವಶ್ಯಕತೆಯಿಲ್ಲ ಅಂದಿದ್ರು. ಈಗ ಏಕೆ ಕರೆಯುತ್ತಿದ್ದಾರೆ. ನಮ್ಮ ಅವಶ್ಯಕತೆ ಬಿದಿದ್ದು ಹೇಗೆ? ಬಿಜೆಪಿಯಲ್ಲಿ ನಮ್ಮನ್ನ ಗೌರವದಿಂದ ನೋಡಿಕೊಳ್ತಿದ್ದಾರೆ ಅಂತಾ ಈಗ ವಾಪಸ್ ಆಹ್ವಾನ ನೀಡುತ್ತಿದ್ದಾರೆ ಎಂದು ಕುಟುಕಿದ್ದಾರೆ.