ಬೆಂಗಳೂರು: ವೈಫಲ್ಯ ಮರೆಮಾಚಲು ಹಿಜಾಬ್, ಹಲಾಲ್, ಅಜಾನ್ ಎಂದು ದಿನಕ್ಕೊಂದು ವಿವಾದ ಎಬ್ಬಿಸುತ್ತಿದೆ #TroubleEngineSarkara ಸಬ್ ಕ ಸಾತ್, ಸಬ್ ಕ ವಿಕಾಸ್ ಎಂದಿದ್ದ ನರೇಂದ್ರ ಮೋದಿ ( Narendra Modi ) ಅವರೇ, ಸಿಎಂ ಬಸವರಾಜ ಬೊಮ್ಮಾಯಿ ( CM Basavaraj Bommai ) ಅವರು ಆಕ್ಷನ್ಗೆ ರಿಯಾಕ್ಷನ್ ಎಂದು ಸಮಾಜ ಘಾತುಕರಿಗೆ ಕುಮ್ಮಕ್ಕು ಕೊಡ್ತಿದಾರೆ. ಅವರಿಗೆ ಬುದ್ದಿ ಹೇಳುವಿರಾ ಅಥವಾ ಬೆನ್ನು ತಟ್ಟುವಿರಾ? ಎಂದು ಕರ್ನಾಟಕ ಕಾಂಗ್ರೆಸ್ ( Karnataka Congress ), ಬಿಜೆಪಿಯನ್ನು ಪ್ರಶ್ನಿಸಿದೆ.
ವೈಫಲ್ಯ ಮರೆಮಾಚಲು ಹಿಜಾಬ್, ಹಲಾಲ್, ಅಜಾನ್ ಎಂದು ದಿನಕ್ಕೊಂದು ವಿವಾದ ಎಬ್ಬಿಸುತ್ತಿದೆ #TroubleEngineSarkara
ಸಬ್ ಕ ಸಾತ್, ಸಬ್ ಕ ವಿಕಾಸ್ ಎಂದಿದ್ದ @narendramodi ಅವರೇ,
ಸಿಎಂ @BSBommai ಅವರು ಆಕ್ಷನ್ಗೆ ರಿಯಾಕ್ಷನ್ ಎಂದು ಸಮಾಜ ಘಾತುಕರಿಗೆ ಕುಮ್ಮಕ್ಕು ಕೊಡ್ತಿದಾರೆ.ಅವರಿಗೆ ಬುದ್ದಿ ಹೇಳುವಿರಾ ಅಥವಾ ಬೆನ್ನು ತಟ್ಟುವಿರಾ? pic.twitter.com/qaxegtiJQH
— Karnataka Congress (@INCKarnataka) November 11, 2022
ಪ್ರಧಾನಿಗೆ ಪತ್ರ ಬರೆದರೆ ಪರಿಹಾರ ಸಿಗಬಹುದೆಂಬ ಭ್ರಷ್ಟಾಚಾರದಿಂದ ಬೇಸತ್ತ ಜನರ ನಿರೀಕ್ಷೆ ಹುಸಿಯಾಗಿದೆ, ಅಧಿಕಾರಿಗಳ ಲಂಚವತಾರಕ್ಕೆ ಬೇಸತ್ತ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕುಟುಂಬ ಈಗ ರಾಷ್ಟ್ರಪತಿಯವರಲ್ಲಿ ದಯಾಮರಣಕ್ಕೆ ಕೋರಿಕೊಳ್ಳುತ್ತಿದ್ದಾರೆ. ನರೇಂದ್ರ ಮೋದಿ ಅವರೇ, ಇದೇನಾ ನಿಮ್ಮ #TroubleEngineSarkara ದ ಹೆಗ್ಗಳಿಕೆ? ಎಂದು ಕೇಳಿದೆ.
ಪ್ರಧಾನಿಗೆ ಪತ್ರ ಬರೆದರೆ ಪರಿಹಾರ ಸಿಗಬಹುದೆಂಬ ಭ್ರಷ್ಟಾಚಾರದಿಂದ ಬೇಸತ್ತ ಜನರ ನಿರೀಕ್ಷೆ ಹುಸಿಯಾಗಿದೆ,
ಅಧಿಕಾರಿಗಳ ಲಂಚವತಾರಕ್ಕೆ ಬೇಸತ್ತ
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕುಟುಂಬ ಈಗ ರಾಷ್ಟ್ರಪತಿಯವರಲ್ಲಿ ದಯಾಮರಣಕ್ಕೆ ಕೋರಿಕೊಳ್ಳುತ್ತಿದ್ದಾರೆ.@narendramodi ಅವರೇ, ಇದೇನಾ ನಿಮ್ಮ #TroubleEngineSarkara ದ ಹೆಗ್ಗಳಿಕೆ? pic.twitter.com/5h1muhsHKX— Karnataka Congress (@INCKarnataka) November 11, 2022
ಕಟುಕನೊಬ್ಬ ಕರುಣೆಯ ಪ್ರವಚನ ಕೊಟ್ಟಂತಿದೆ ನರೇಂದ್ರ ಮೋದಿ ಅವರು ಕನಕದಾಸರ ಕೀರ್ತನೆ ಹೇಳಿದ್ದು! ಕುಲದ ಹೆಸರಲ್ಲಿ ಯುವಕರನ್ನು ಹೊಡೆದಾಟಕ್ಕಿಳಿಸಿ ಬೀದಿ ಹೆಣವಾಗಿಸುವ ಬಿಜೆಪಿ ನಾಯಕರಿಗೆ ಈ ಮಾತು ಅನ್ವಯಿಸುತ್ತದೆ. ಪ್ರವೀಣ್ ನೆಟ್ಟಾರು, ಹರ್ಷ ಮುಂತಾದವರನ್ನು ಕುಲದ ಕಲಹದಲ್ಲಿ ಬಲಿ ಪಡೆದಿದ್ದು #TroubleEngineSarkara ಅಲ್ಲವೇ ಎಂದಿದೆ.
ಕಟುಕನೊಬ್ಬ ಕರುಣೆಯ ಪ್ರವಚನ ಕೊಟ್ಟಂತಿದೆ @narendramodi ಅವರು ಕನಕದಾಸರ ಕೀರ್ತನೆ ಹೇಳಿದ್ದು!
ಕುಲದ ಹೆಸರಲ್ಲಿ ಯುವಕರನ್ನು ಹೊಡೆದಾಟಕ್ಕಿಳಿಸಿ ಬೀದಿ ಹೆಣವಾಗಿಸುವ @BJP4Karnataka ನಾಯಕರಿಗೆ ಈ ಮಾತು ಅನ್ವಯಿಸುತ್ತದೆ.
ಪ್ರವೀಣ್ ನೆಟ್ಟಾರು, ಹರ್ಷ ಮುಂತಾದವರನ್ನು ಕುಲದ ಕಲಹದಲ್ಲಿ ಬಲಿ ಪಡೆದಿದ್ದು #TroubleEngineSarkara ಅಲ್ಲವೇ. pic.twitter.com/XLwGWFa2c4
— Karnataka Congress (@INCKarnataka) November 11, 2022