ಕೆಎನ್ ಎನ್ ನ್ಯೂಸ್ ಡೆಸ್ಕ್ : ಉತ್ತಮ ಆರೋಗ್ಯಬೇಕಾದ್ರೆ ನಿದ್ದೆ ಹೆಚ್ಚು ಪ್ರಮುಖ್ಯತೆ ಕೊಡಬೇಕು. ನಿದ್ರೆ ಸರಿಯಾದ್ರೆನೇ ಫ್ರೇಶ್ ಆಗಿರಲು ಕಾರಣ. ಹೀಗಾಗಿ ಟೈಂಗೆ ಸರಿಯಾಗಿ ನಿದ್ದೆ ಮಾಡಬೇಕು. ಆರೋಗ್ಯಕರ ಮೆದುಳಿನ ಕಾರ್ಯ ಮತ್ತು ನಿಮ್ಮ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿದ್ರೆ ಅತ್ಯಗತ್ಯ.
BIGG NEWS: ಗೇಮಿಂಗ್ ಆ್ಯಪ್ ಹಗರಣ: ಕೋಲ್ಕತಾ ಉದ್ಯಮಿ ಮೇಲೆ ಇಡಿ ದಾಳಿ;7 ಕೋಟಿ ರೂ. ವಶ| gaming app scam
ಆದರೆ, ಕೆಲವೊಬ್ಬರಿಗೆ ರಾತ್ರಿ ಮಲಗಿದ ಬಳಿಕ ನಿದ್ರೆ ಬೀಳೋದೇ ಕಷ್ಟ. ಕಣ್ಣಿಗೆ ನಿದ್ದೆ ಬೀಳಲು ಹರಸಾಹಸ ಪಡುವವರಿದ್ದಾರೆ. ನೀವು ಕೂಡಾ ಅವರಲ್ಲಿ ಒಬ್ಬರಾಗಿದ್ದರೆ, ಈ ಸಲಹೆ ತಿಳಿದುಕೊಳ್ಳಿ.
*ನೈಸರ್ಗಿಕವಾಗಿ ಈ ನಿದ್ದೆ ಮತ್ತು ಎಚ್ಚರವಾಗಿರುವ ಪ್ರಕ್ರಿಯೆ ಸರಿಯಾಗಿದ್ದರೆ, ಮಲಗುವ ಸಮಯಕ್ಕೂ ಮುನ್ನವೆ ನಿಮ್ಮ ಮೆದುಳು ನಿದ್ರೆ ಸಮಯ ಬಂತು ಎಂಬುದನ್ನು ನಿಮಗೆ ಸೂಚಿಸುತ್ತದೆ.
*ನೀವು ಮಲಗುವ ಮತ್ತು ಏಳುವ ಸಮಯವನ್ನು ನಿರ್ಧರಿಸಿ. ಮತ್ತೆ ಪ್ರತಿದಿನ ಅದೇ ಸಮಯವನ್ನು ಅನುಸರಿಸಿ. ಒಂದು ಸ್ಥಿರವಾದ ನಿದ್ರೆಯ ಸಮಯವನ್ನು ಅನುಸರಿಸಿದಾಗ ಮಲಗುವ ವೇಳೆಗೆ ನಿಮ್ಮ ಮೆದುಳಿಗೆ ಸ್ವಾಭಾವಿಕವಾಗಿ ದಣಿದ ಅನುಭವವಾಗುತ್ತದೆ.
* ನೀವು ಮಲಗುವ ಸಮಯ ಹತ್ತಿರವಾದರೂ, ಕೆಲವೊಮ್ಮ ನೀವು ನೋಡುತ್ತಿರುವ ಸಿನಿಮಾ ಅಥವಾ ಸಾಮಾಜಿಕ ಜಾಲತಾಣಗಳು ನಿಮ್ಮನ್ನು ಮಲಗಲು ಬಿಡುವುದಿಲ್ಲ. ಕಂಪ್ಯೂಟರ್, ಟೆಲಿವಿಷನ್, ಸ್ಮಾರ್ಟ್ಫೋನ್, ಟ್ಯಾಬ್ಲೆಟ್ಗಳು ಸೇರಿದಂತೆ ಎಲೆಕ್ಟ್ರಾನಿಕ್ ಸಾಧನಗಳು ಬಲವಾದ ನೀಲಿ ಬೆಳಕನ್ನು ಹೊರಸೂಸುತ್ತವೆ.
ದೇಹದಲ್ಲಿ ಕೊಲೆಸ್ಟ್ರಾಲ್ & ಸಕ್ಕರೆ ನಿಯಂತ್ರಿಸಲು ಆವಕಾಡೊ ಹಣ್ಣು ರಾಮಬಾಣ : ಸಂಶೋಧನೆ | Avocado fruit benefits
*ಯೋಗದಂತೆ, ನಿಯಮಿತ ಧ್ಯಾನ ಅಭ್ಯಾಸವು ನಿಮ್ಮ ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ. ಮನಸ್ಪೂರಕವಾಗಿ ಮಾಡುವ ಧ್ಯಾನ, ನಿಮ್ಮ ಮನಸ್ಸು ಮತ್ತು ಭಾವನೆಗಳನ್ನು ನಿರ್ವಹಿಸಲು ಮತ್ತು ನಿಯಂತ್ರಿಸಲು ಕಲಿಸುತ್ತದೆ. ಇದು ನಿದ್ರೆಯನ್ನು ಸಕ್ರಿಯಗೊಳಿಸುತ್ತದೆ.
*ನಿಮ್ಮ ಕಣ್ಣುಗಳನ್ನು ಮುಚ್ಚಿ, ನಿಮ್ಮ ಆಲೋಚನೆ ಮತ್ತು ಭಾವನೆಗಳ ಮೇಲೆ ಕೇಂದ್ರೀಕರಿಸಲು ಅವಕಾಶ ನೀಡುವ ಮೂಲಕ ನೀವು ಏಕಚಿತ್ತದಿಂದ ಧ್ಯಾನವನ್ನು ಅಭ್ಯಾಸ ಮಾಡಬಹುದು. ಇದಕ್ಕೆ ಸೂಕ್ತವಾದ ವ್ಯಕ್ತಿಗಳೊಂದಿಗೆ ಸಲಹೆಯನ್ನು ಪಡೆದು ಯೋಗದ ಜತೆಗೆ ಧ್ಯಾನವನ್ನು ಮಾಡಿ.
*ಮಲಗುವ ಸಮಯಕ್ಕೂ ಮುಂಚೆ ಓದುವ ಅಭ್ಯಾಸ ರೂಢಿಸಿಕೊಂಡರೆ ಉತ್ತಮ. ಇದರಿಂದ ಒಳ್ಳೆಯ ನಿದ್ದೆ ಕೂಡ ಬರುತ್ತದೆ