ಬೆಂಗಳೂರು: ರಾಜ್ಯ ಸರ್ಕಾರದಿಂದ ನಿನ್ನೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಮಾಡಿದಂತ ಮನವಿಯಂತೆ, ಸರ್ಕಾರಿ ಇಲಾಖೆಯಲ್ಲಿ ಸಾರ್ವಜನಿಕರ ಪೋಟೋ, ವೀಡಿಯೋ ಚಿತ್ರೀಕರಣವನ್ನು ನಿಷೇಧಿಸಿ ಆದೇಶಿಸಿತ್ತು. ರಾಜ್ಯ ಸರ್ಕಾರದ ಈ ಆದೇಶದ ವಿರುದ್ಧ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಸೇರಿದಂತೆ ನಾಡಿನ ಅನೇಕ ಜನರು ಆಕ್ರೋಶ ವ್ಯಕ್ತ ಪಡಿಸಿದ್ದರು. ಅಲ್ಲದೇ ಭ್ರಷ್ಟ ಅಧಿಕಾರಿಗಳನ್ನು ರಕ್ಷಿಸೋ ಹೊಣೆಯನ್ನು ಸರ್ಕಾರ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದರು. ಈ ಬೆನ್ನಲ್ಲೇ ನಿನ್ನೆಯ ಮಧ್ಯರಾತ್ರಿಯಲ್ಲೇ ವಿವಾದಿತ ಆದೇಶವನ್ನು ಸರ್ಕಾರ ರದ್ದುಗೊಳಿಸಿ ಆದೇಶಿಸಿತ್ತು. ಹೀಗೆ ಹೊರಡಿಸಿದಂತ ಆದೇಶದಲ್ಲಿ ತಪ್ಪು ತಪ್ಪಾಗಿ ಕನ್ನಡ ಬರೆದು ಕಗ್ಗೊಲೆ ಗೈಯ್ಯಲಾಗಿತ್ತು. ಹಾಗಾದ್ರೇ.. ಇಂತಹ ಆದೇಶಕ್ಕೆ ಸಹಿ ಮಾಡಿರುವಂತ ಸರ್ಕಾರದ ಉಪ ಕಾರ್ಯದರ್ಶಿಗೆ ಕನ್ನಡ ಬರೋದಿಲ್ವಾ ಎಂಬುದಾಗಿ ಕನ್ನಡಿಗರು ಗರಂ ಆಗಿದ್ದಾರೆ.
ನಿಮ್ಮ ‘ನಿವೇಶ’ನ ಕೊಳ್ಳುವ ಆಸೆಗೆ ಇಲ್ಲಿದೆ ಅವಕಾಶ: ಇಲ್ಲಿ ‘ಕಡಿಮೆ ದರ’ದಲ್ಲಿ ‘ಸೈಟ್’ಗಳು ಲಭ್ಯ
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸರ್ಕಾರಿ ಇಲಾಖೆಯಲ್ಲಿ ಸಾರ್ವಜನಿಕರಿಂದ ಪೋಟೋ, ವೀಡಿಯೋ ನಿಷೇಧ ಆದೇಶ ವಾಪಾಸ್ ಪಡೆದಿರುವಂತ ಸುತ್ತೋಲೆ ವೈರಲ್ ಕೂಡ ಆಗಿದೆ. ವೈರಲ್ ಆಗಿರುವಂತ ವಾಪಾಸ್ ಪಡೆದಂತ ಆದೇಶದಲ್ಲಿ ಕನ್ನಡವನ್ನೇ ತಪ್ಪು ತಪ್ಪಾಗಿ ಟೈಪಿಸಿ, ಅವಸರದಲ್ಲೇ ಮಧ್ಯರಾತ್ರಿಯಲ್ಲಿ ಅಮಲಿನಲ್ಲಿ ಸುತ್ತೋಲೆ ಹೊರಡಿಸಿದ್ಯಾ ಎನ್ನುವಂತೆ ತಪ್ಪು ಮಾಡಲಾಗಿದೆ ಎಂದು ನೆಟ್ಟಿಗರು ಕುಟುಕಿದ್ದಾರೆ.
ಅಂದಹಾಗೇ ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಆನಂದ.ಕೆ ಎಂಬುವರು ಈ ಕನ್ನಡ ಕಗ್ಗೊಲೆ ಮಾಡಿರುವಂತ ಆದೇಶವನ್ನು ಹೊರಡಿಸಿದ್ದಾರೆ.
ಶಿವಮೊಗ್ಗ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಕ್ಕಳಿಂದ ಜಿಲ್ಲಾಮಟ್ಟದ ಪ್ರಶಸ್ತಿಗೆ ಅರ್ಜಿ ಆಹ್ವಾನ
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವಂತ ಆದೇಶದಲ್ಲಿ ನಡವಳಿ-ನಡಾವಳಿಗಳು, ಪ್ರಸತ್ತಾವನೆ – ಪ್ರಸ್ತಾವನೆ, ಮೇಲೇ –ಮೇಲೆ, ಬಾಗ – ಭಾಗ, ಕರ್ನಾಟಾ – ಕರ್ನಾಟಕ, ಅಡಳಿತ-ಆಡಳಿತ, ಕಚೇರಿ-ಕಛೇರಿಯಂತಹ ತಪ್ಪುಗಳನ್ನು ಮಾಡಲಾಗಿದೆ. ಹಾಗಾದ್ರೇ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಯಂತ ದೊಡ್ಡ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿಯಾಗಿರುವಂತ ಆನಂದ.ಕೆ ಎಂಬುವರಿಗೆ ಕನ್ನಡ ಬರೋದಿಲ್ವಾ ಎಂಬುದಾಗಿ ನೆಟ್ಟಿಗರು ಪ್ರಶ್ನಿಸಿದ್ದಾರೆ.
ಇನ್ನೂ ಕನ್ನಡವನ್ನು ಮಹತ್ವದ ಸುತ್ತೋಲೆಯಲ್ಲಿ ತಪ್ಪು ತಪ್ಪಾಗಿ ಟೈಪಿಸಿದಂತ ಆದೇಶಕ್ಕೆ ಸಹಿ ಮಾಡಿದಂತ ಸರ್ಕಾರದ ಉಪ ಕಾರ್ಯದರ್ಶಿಯನ್ನು ಅಮಾನತಗೊಳಿಸುವಂತೆಯೂ ಅನೇಕರು ಒತ್ತಾಯಿಸಿದ್ದಾರೆ. ಕನ್ನಡ ಬಾರದ ಅಧಿಕಾರಿಗೇಕೆ ಇಂತಹ ಹೊಣೆಗಾರಿಕೆಯನ್ನು ಸರ್ಕಾರ ನೀಡಬೇಕು ಎಂಬುದಾಗಿಯೂ ಪ್ರಶ್ನಿಸಿದ್ದಾರೆ. ಈ ಬಗ್ಗೆ ಸಿಎಂ ಬೊಮ್ಮಾಯಿ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂಬುದಾಗಿ ಕನ್ನಡಿಗರು ಆಗ್ರಹಿಸಿದ್ದಾರೆ.
Watch Video: ಈ ‘ಪುಟ್ಟ ಬಾಲಕಿ’ಯ ನಡೆ ಕಂಡು ನೆರೆದಿದ್ದವರೇ ಭಾವುಕ, ನೀರೂರಿದ ಕಣ್ಣು.! ಯಾಕೆ ಅಂತ ಈ ಸುದ್ದಿ ಓದಿ.!