ಬೆಂಗಳೂರು: ಸಿಲಿಕಾನ್ ಸಿಟಿ ( Silicon City ) ಬೆಂಗಳೂರು ನಗರ ಪೊಲೀಸರು ಮೊಬೈಲ್ ಕಳ್ಳರ ( Mobile Theft ) ಕರಾಮತ್ತಿಗೆ ಕಡಿವಾಣ ಹಾಕಲು ಮಹತ್ವದ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಬೆಂಗಳೂರು ಸಿಟಿ ಪೊಲೀಸರು ( Bengaluru City Police ) ಇದಕ್ಕಾಗಿ ಸೆಂಟ್ರಲ್ ಎಕ್ವಿಪ್ ಮೆಂಟ್ ಐಡೆಂಟಿಟಿ ರಿಜಿಸ್ಟರ್ ( Central Equipment Identity Register – CEIR ) ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರಲು ತೀರ್ಮಾನಿಸಿದ್ದಾರೆ. ಹೀಗಾಗಿ ನೀವು ಮೊಬೈಲ್ ಕಳೆದುಕೊಂಡ್ರೇ ಡೋಂಟ್ ವರಿ. ಯಾಕೆ ಎನ್ನುವ ಬಗ್ಗೆ ಮುಂದೆ ಓದಿ.
ಸಿಎಂ ಬೊಮ್ಮಾಯಿಗೆ ಧಮ್ಮು,, ತಾಕತ್ತಿದ್ದರೇ ಭ್ರಷ್ಟಾಚಾರದ ಪ್ರಕರಣಗಳನ್ನು ತನಿಖೆಗೆ ನೀಡಿ ತೋರಿಸಲಿ – DKS ಸವಾಲು
ಹೌದು ಇದಕ್ಕಾಗಿ ಬೆಂಗಳೂರು ನಗರ ಪೊಲೀಸರು ಸಿಇಐಆರ್ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದ್ದಾರೆ. ಈ ಯೋಜನೆಯಿಂದಾಗಿ ಕಳೆದು ಹೋದ ಮೊಬೈಲ್ ನ ಐಎಂಇಐ ನಂಬರ್ ಆಧರಿಸಿ, ಮೊಬೈಲ್ ಪತ್ತೆ ಹಚ್ಚುವ, ಮೊಬೈಲ್ ಬಳಕೆ ( Mobile Use ) ಆಗದಂತೆ ಬ್ಲಾಕ್ ಮಾಡುವ ತಂತ್ರಜ್ಞಾನದ ಅವಕಾಶವಿದೆ. ಇದು ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆ ಅಭಿವೃದ್ಧಿ ಪಡಿಸಿರುವ ಯೋಜನೆಯಾಗಿದೆ. ಈಗಾಗಲೇ ಇದನ್ನು ದೆಹಲಿ, ಮುಂಬೈನಲ್ಲಿ ಜಾರಿಗೆ ತರಲಾಗಿದೆ. ಇದೀಗ ಈ ಯೋಜನೆಯನ್ನು ಬೆಂಗಳೂರಿನಲ್ಲಿ ಅನುಷ್ಠಾನಗೊಳಿಸೋದಕ್ಕೆ ಮುಂದಾಗಿದೆ. ಈ ಮೂಲಕ ಸಿಇಐಆರ್ ಯೋಜನೆ ಜಾರಿಗೆ ತಂದ ಮೂರನೇ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
BIGG NEWS ; ನಿರುದ್ಯೋಗ, ಭ್ರಷ್ಟಾಚಾರ ಕುರಿತು ನಗರ ಭಾರತೀಯರು ಹೆಚ್ಚು ಚಿಂತಿತರಾಗಿದ್ದಾರೆ ; ಸಮೀಕ್ಷೆ
ಅಂದಹಾಗೇ ಸೆಪ್ಟೆಂಬರ್ 30ರಿಂದ ಬೆಂಗಳೂರಿನಲ್ಲಿ ಸಿಇಐಆರ್ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ. ಮೊಬೈಲ್ ಕಳವು ಪ್ರಕರಣಗಳಲ್ಲಿ ದಾಖಲಾದಂತ ದೂರು ಆಧರಿಸಿ, ಸುಮಾರು 1250ಕ್ಕೂ ಅಧಿಕ ಕದ್ದ ಮೊಬೈಲ್ ಗಳನ್ನು ಬೇರೆ ಯಾರೂ ಬಳಕೆ ಮಾಡದಂತೆ ಬ್ಲಾಕ್ ಮಾಡಲಾಗಿದೆ. ಇದಲ್ಲದೇ 476 ಕದ್ದ ಮೊಬೈಲ್ ಗಳಿಗೆ ಹೊಸ ಸಿಮ್ ಕಾರ್ಡ್ ಹಾಕಿ ಬಳಕೆಗೆ ಪ್ರಯತ್ನಿಸಿರೋದನ್ನು ಬೆಂಗಳೂರು ಸಿಟಿ ಪೊಲೀಸರು ಪತ್ತೆ ಹಚ್ಚಿದ್ದಾರೆ.
‘ರಸ್ತೆ ಅಪಘಾತದಲ್ಲಿ ಸಾಕು ನಾಯಿ ಗಾಯಗೊಳಿಸಿದರೆ ಅಪರಾಧವಲ್ಲ’ : ಹೈಕೋರ್ಟ್ ತೀರ್ಪು
ಸೆಂಟ್ರಲ್ ಎಕ್ವಿಪ್ ಮೆಂಟ್ ಐಡೆಂಟಿಟಿ ರಿಜಿಸ್ಟರ್ ( ಸಿಇಐಆರ್ ) ಹೇಗೆ ಕಾರ್ಯ ನಿರ್ವಹಿಸಲಿದೆ ಗೊತ್ತಾ?
ಸಿಇಐಆರ್ ಯೋಜನೆಯನ್ನು ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ. ಮೊಬೈಲ್ ಕಳೆದುಕೊಂಡಂತ ಜನರು ಪೊಲೀಸರಿಗೆ ಠಾಣೆಗೆ ತೆರಳಿ ಇಲ್ಲವೇ, ಇ-ಲಾಸ್ಟ್ ಮೂಲಕ ರಿಪೋರ್ಟ್ ಮಾಡಬೇಕು. ಹೀಗೆ ಸಲ್ಲಿಸಲಾಗುವಂತ ದೂರನ್ನು ಆಧರಿಸಿ ಕಂಮಾಂಡ್ ಸೆಂಟರ್ ನಿಂದ ಸಿಇಐಆರ್ ವೆಬ್ ಸೈಟ್ ನಲ್ಲಿ ( Website ) ಮೊಬೈಲ್ ಬ್ಲಾಕ್ ಮಾಡಲಾಗುತ್ತದೆ.
BIGG NEWS : ಶಾಸಕ ಅರವಿಂದ ಬೆಲ್ಲದ್ ಹೆಸರಿನಲ್ಲಿ ಡೆತ್ ನೋಟ್ ಬರೆದು ಮಹಿಳೆ ಆತ್ಮಹತ್ಯೆಗೆ ಯತ್ನ!
ಪೊಲೀಸರು ಕಮಾಂಡ್ ಸೆಂಟರ್ ನಿಂದ ( Police Command Centre ) ಬ್ಲಾಕ್ ಮಾಡಿದ ನಂತ್ರ, ಅಂತಹ ಪೋನ್ ಗೆ ಹೊಸ ಸಿಮ್ ಕಾರ್ಡ್ ಹಾಕಿ, ಬಳಕೆಗೆ ಪ್ರಯತ್ನಿಸಿದ ಕೂಡಲೇ ಪೊಲೀಸರಿಗೆ ಅಲರ್ಟ್ ಸಂದೇಶ ರವಾನೆಯಾಗಲಿದೆ. ಆಗ ಪೊಲೀಸರು ಎಚ್ಚೆತ್ತುಕೊಂಡು ಕಳುವಾದಂತ ಮೊಬೈಲ್ ಪತ್ತೆಗೆ ಇಳಿಯಲಿದ್ದಾರೆ. ಕದ್ದ ಮೊಬೈಲ್ ಅನ್ನು ಪತ್ತೆ ಹಚ್ಚಿ ಜಪ್ತಿ ಮಾಡಿದ ಬಳಿಕ, ಮೊಬೈಲ್ ಮಾಲೀಕನಿಗೆ ನೀಡಲಾಗುತ್ತದೆ.
Job Alert: ಸಮುದಾಯ ಆರೋಗ್ಯ ಅಧಿಕಾರಿ(CHO) ಹುದ್ದೆಗೆ ಅರ್ಜಿ ಆಹ್ವಾನ: ಮಾಸಿಕ 30 ಸಾವಿರ ವೇತನ
ಮೊಬೈಲ್ ಮಾಲೀಕನು ಕನ್ನ ಕಳವಾದ ಮೊಬೈಲ್ ಸಿಕ್ಕ ನಂತ್ರ, ಮೊಬೈಲ್ ಗೆ ಸಿಮ್ ಕಾರ್ಡ್ ಹಾಕಿದಾಗ, ಅದಕ್ಕೆ ಪೊಲೀಸರು ಒಟಿಪಿ ಕಳುಹಿಸುತ್ತಾರೆ. ಅದನ್ನು ಪೊಲೀಸರಿಗೆ ನೀಡಿದ ಬಳಿಕ ಕಳುವಾಗಿ, ಆನಂತ್ರ ಸಿಕ್ಕಂತ ಮೊಬೈಲ್ ಅನ್ ಬ್ಲಾಕ್ ಆಗಲಿದೆ. ಈ ಮೂಲಕ ಕದ್ದ ಮೊಬೈಲ್ ಬೇರೆಯಾರು ಬಳಕೆ ಮಾಡಲು ಸಾಧ್ಯವಾಗದೇ, ಬಳಕೆಗೆ ಪ್ರಯತ್ನಿಸಿದ್ರೂ ಸಿಕ್ಕಿ ಹಾಕಿಕೊಳ್ಳೋದು ಗ್ಯಾರಂಟಿ.