ರಾಮನಗರ : ಮುಂದಿನ ವಿಧಾನಸಭಾ ಚುನಾವಣೆಗೆ 2028ರ ವರೆಗೆ ಕಾಯಬೇಕಾಗಿಲ್ಲ.ಅದಕ್ಕಿಂತಲೂ ಮುಂಚೆನೆ ಚುನಾವಣೆ ನಡೆದರೆ ರಾಮನಗರ ಜಿಲ್ಲೆಯ ನಾಲ್ಕು ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಸ್ಪೋಟಕ ಹೇಳಿಕೆ ನೀಡಿದರು.
ಇಂದು ರಾಮನಗರ ಜಿಲ್ಲೆಯಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರ ತೆಗೆಯುವುದಲ್ಲ ಇವರ ಪಾಪದ ಕೊಡ ತುಂಬಿದೆ. ಆತ್ಮಸಾಕ್ಷಿ ಅಂತ ಹೇಳುತ್ತಾರಲ್ಲ ಎಂತಹ ಭಂಡಾರನ್ನು ನೀವು ನೋಡುವುದಕ್ಕೆ ಸಾಧ್ಯವಿಲ್ಲ. ಚುನಾವಣೆಗೆ 2028ರ ವರೆಗೆ ನಾವು ಕಾಯಬೇಕಾಗಿಲ್ಲ ಅದಕ್ಕಿಂತ ಮುಂಚೆ ಚುನಾವಣೆ ಬಂದರೆ ನಾಲ್ಕು ಕ್ಷೇತ್ರ ಗೆಲ್ಲುತ್ತೇವೆ ರಾಮನಗರ ಜಿಲ್ಲೆಯ ನಾಲ್ಕು ಕ್ಷೇತ್ರಗಳನ್ನು ಗೆಲ್ಲುತ್ತೇವೆ. ರಾಮನಗರ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡುತ್ತೇನೆ ದೇಶದಲ್ಲಿಯೇ ಮಾದರಿ ಜಿಲ್ಲೆಯ ನಾಗಿ ಮಾಡುತ್ತೇನೆ ಎಂದರು.
ನಾನು ಯಾರಿಗೂ ಹೆದರುವ ವ್ಯಕ್ತಿಯಲ್ಲ ನಾನು ದೇವರಿಗೆ ಮಾತ್ರ ಹೆದರುತ್ತೇನೆ. ಶಿವನ ಆಶೀರ್ವಾದ ನಮಗೆ ಇರುವವರೆಗೂ ಯಾರೂ ಮುಗಿಸಲು ಆಗಲ್ಲ. ನನಗೆ 3 ಬಾರಿ ಆಪರೇಷನ್ ಆಗಿದೆ. ಒಳ್ಳೆಯ ಕೆಲಸ ಮಾಡಬೇಕು ಬಡವರಿಗೆ ಒಳ್ಳೆಯ ಕೆಲಸ ಮಾಡಲು ದೇವರು 3ನೆ ಜನ್ಮ ನೀಡಿದ್ದಾನೆ. ನಾನು ಯಾವನಿಗೂ ದಮ್ಮಯ್ಯ ಅಂತ ಹೇಳುವುದಿಲ್ಲ. ಯಾವುದೇ ಸಂದರ್ಭದಲ್ಲಿ ಉಪಚುನಾವಣೆ ಘೋಷಣೆಯಾಗಬಹುದು ಎಂದರು.
ಚನ್ನಪಟ್ಟಣಕ್ಕೆ ಯಾರನ್ನೇ ಅಭ್ಯರ್ಥಿ ಮಾಡಿದರು ಗೆಲ್ಲಿಸಬೇಕು. ನಾನು ಯಾರನ್ನೇ ಅಭ್ಯರ್ಥಿ ಮಾಡಿದರು ಗೆಲ್ಲಿಸುವ ಹೊಣೆ ನಿಮ್ಮ ಮೇಲಿದೆ. ಮೋದಿ ಸಂಪುಟದಲ್ಲಿ ಸೀನಿಯರ್ ಮಂತ್ರಿಯಾಗಿ 9ನೇ ಸ್ಥಾನದಲ್ಲಿ ಇದ್ದೇನೆ. ದೇಶವನ್ನು ದರೋಡೆ ಮಾಡುವವರ ನಡುವೆ ಇದ್ದೀರಿ. ಯೋಚಿಸಿ ತೀರ್ಮಾನಿಸಿ ಈಗ ಏನೋ ಮನೆ ಕಟುತತ್ತೇವೆ, ಸೈಟ್ ಕೊಡುತ್ತೇವೆ ಅಂತ ಹೇಳುತ್ತಿದ್ದಾರೆ.
ಅವರು ಕೊಡುವ ಅಷ್ಟರಲ್ಲಿ ಚುನಾವಣೆ ಘೋಷಣೆ ಆಗುತ್ತದೆ. ನಂತರ ಚುನಾವಣೆ ಮುಗಿದ ಮೇಲೆ ಟಾಟಾ ಮಾಡಿ ಹೋಗುತ್ತಾರೆ ಇದೆಲ್ಲ ಮಾಡೋದಾಗಿದ್ರೆ ಈ ಹಿಂದೆಯೇ ಮಾಡಬೇಕಾಗಿತ್ತು. ನನಗೆ ನಷ್ಟ ಆಗಲ್ಲ ಹೆಚ್ಚು ಕಡಿಮೆಯಾದರೆ ನಿಮಗೆ ನಷ್ಟ ಆಗಬಹುದು ಎಂದು ಡಿಕೆ ಬ್ರದರ್ಸ್ ವಿರುದ್ಧ ಎಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.