ವಾಶಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ‘ಅವರ್ ಜರ್ನಿ ಟುಗೆದರ್’ ಪುಸ್ತಕದ ಸಹಿ ಮಾಡಿದ ಪ್ರತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಡುಗೊರೆಯಾಗಿ ನೀಡಿದರು.
ತಮ್ಮ ಓವಲ್ ಕಚೇರಿಯಲ್ಲಿ, ನಿರ್ಣಾಯಕ ಮಾತುಕತೆಗೆ ತೆರಳುವ ಮೊದಲು ಟ್ರಂಪ್ ಮೋದಿಯವರನ್ನು ಆತ್ಮೀಯವಾಗಿ ಅಪ್ಪಿಕೊಂಡರು. “ನಿಮ್ಮನ್ನು ಶ್ವೇತಭವನದಲ್ಲಿ ಮತ್ತೆ ನೋಡಲು ನನಗೆ ಸಂತೋಷವಾಗಿದೆ” ಎಂದು ಪಿಎಂ ಮೋದಿ ಅಧ್ಯಕ್ಷ ಟ್ರಂಪ್ಗೆ ತಿಳಿಸಿದರು.
ಅವರನ್ನು ಸ್ವಾಗತಿಸಿದ ನಂತರ, ಟ್ರಂಪ್ ಪ್ರಧಾನಿ ಮೋದಿಯವರಿಗೆ ತಮ್ಮ ಪುಸ್ತಕ ‘ಅವರ್ ಜರ್ನಿ ಟುಗೆದರ್’ ಅನ್ನು ಉಡುಗೊರೆಯಾಗಿ ನೀಡಿದರು ಮತ್ತು ‘ಹೌಡಿ ಮೋದಿ’ ಮತ್ತು ‘ನಮಸ್ತೆ ಟ್ರಂಪ್’ ಕಾರ್ಯಕ್ರಮಗಳ ಹಲವಾರು ಫೋಟೋಗಳನ್ನು ತೋರಿಸಿದರು.