ಚಾಮರಾಜನಗರ: ಪತ್ತದಾರಿಕೆಯಲ್ಲಿ ನಂ.1 ಆಗಿ, ಕಾಡುಗಳ್ಳರಿಗೆ ಸಿಂಹಸ್ವಪ್ಪವಾಗಿದ್ದಂತ ಬಂಡೀಪುರದ ಅರಣ್ಯ ಇಲಾಖೆಯಲ್ಲಿ ಇದ್ದಂತ ಶ್ವಾನ ರಾಣ, ಇನ್ನಿಲ್ಲವಾಗಿದೆ.
ಬಂಡೀಪುರದ ಅರಣ್ಯ ವ್ಯಾಪ್ತಿಯಲ್ಲಿ ಮರ ಕಡಿದವರು, ಹುಲಿ ಸೆರೆ ಹಿಡಿಯೋ ಕಾರ್ಯಾಚರಣೆ ಸೇರಿದಂತೆ ವಿವಿಧ ರೀತಿಯ ಕಾರ್ಯಾಚರಣೆಯಲ್ಲಿ ರಾಣಾ ಶ್ವಾನ ವಿಶೇಷ ಪಾತ್ರವಹಿಸಿತ್ತು. ಅಲ್ಲದೇ ಎಲ್ಲರ ಮೆಚ್ಚುಗೆಗೂ ಪಾತ್ರವಾಗಿತ್ತು.
ಇನ್ನೂ ಕಾಡುಗಳ್ಳರನ್ನು ಹಿಡಿಯೋದರಲ್ಲಿ ಎಕ್ಸ್ ಪರ್ಟ್ ಆಗಿತ್ತು. ಹೀಗಾಗಿ ಕಳ್ಳರಿಗೆ, ಪತ್ತೆದಾರಿಕೆಯಲ್ಲಿ ನಂ.1 ಎಂಬುದಾಗಿ ರಾಣಾ ಗುರ್ತಿಸಿಕೊಂಡಿತ್ತು. ಇಂತಹ ಶ್ವಾನಕ್ಕೆ 10 ವರ್ಷ ವಯಸ್ಸಾಗಿತ್ತು. ಕೆಲ ದಿನಗಳಿಂದ ವಯೋ ಸಹಜ ಖಾಯಿಲೆಯಿಂದ ಕೂಡ ಬಳಲುತ್ತಿತ್ತು. ಇಂದು ಶ್ವಾನ ರಾಣಾ ಸಾವನ್ನಪ್ಪಿದೆ.
ಇದೀಗ ಬಂಡೀಪುರ ಸಫಾರಿ ಕೌಂಟರ್ ಸಮೀಪ ರಾಣಾ ಪ್ರಾರ್ಥೀವ ಶರೀರ ಇರಿಸಲಾಗಿದ್ದು, ಅರಣ್ಯ ಇಲಾಖೆಯಿಂದ ಗೌರವ ಸಮರ್ಪಣೆಯ ಬಳಿಕ ಅಂತ್ಯಕ್ರಿಯೆಯನ್ನು ನೆರವೇರಿಸಲಾಗಿದೆ.