ಕೆಎನ್ಎನ್ ಡಿಜಿಟಲ್ ಡೆಸ್ಕ್: ಕನ್ನಡ ನ್ಯೂಸ್ ನೌ ವೆಬ್ ಸೈಟ್ ಗೆ ಜಿಲ್ಲಾ ಹಾಗೂ ತಾಲ್ಲೂಕು ವರದಿಗಾರರ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಪತ್ರಕರ್ತರಾಗಿ ಕೆಲಸ ಮಾಡಿದ, ಮಾಡುತ್ತಿರುವ ಅನುಭವ ಇರುವವರಿಗೆ ಮೊದಲ ಆದ್ಯತೆಯಾಗಿದೆ.
ಕನ್ನಡ ನ್ಯೂಸ್ ನೌ ವೆಬ್ ಸೈಟ್, ಕನ್ನಡದ ಮುಂಚೂಣಿಯಲ್ಲಿರುವಂತ ನ್ಯೂಸ್ ಪೋರ್ಟಲ್ ಆಗಿದೆ. ಡೈಲಿ ಹಂಟ್ ನಲ್ಲಿ 1.8 ಮಿಲಿಯನ್ ಫಾಲೋವರ್ಸ್ ಹೊಂದಿರುವಂತ ಕನ್ನಡ ನ್ಯೂಸ್ ನೌ, ಒಂದು ದಿನದ ಪೇಜ್ ಹಿಡ್ಸ್ ಸಂಖ್ಯೆಯೇ ಲಕ್ಷಾಂತರವಾಗಿದೆ. ಇಂತಹ ಕನ್ನಡ ನ್ಯೂಸ್ ನೌ ವೆಬ್ ಸೈಟ್ ಗೆ ಕೆಲಸ ಮಾಡಲು ಜಿಲ್ಲಾ ಹಾಗೂ ತಾಲ್ಲೂಕು ವರದಿಗಾರರ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಶೈಕ್ಷಣಿಕ ವಿದ್ಯಾರ್ಹತೆ
ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಇಲ್ಲವೇ ಪತ್ರಿಕೋದ್ಯಮದಲ್ಲಿ ಪದವಿಯನ್ನು ಪಡೆದಿರುವವರು, ಹಾಲಿ ವೃತ್ತಿ ನಿರತರು ಅರ್ಜಿ ಸಲ್ಲಿಸಬಹುದು. ಕನ್ನಡ ಓದೋದಕ್ಕೆ, ಬರೆಯೋದಕ್ಕೆ ಉತ್ತಮವಾಗಿ ಬರಬೇಕು.
ಅನುಭವ
ಪತ್ರಿಕೆ ಅಥವಾ ಟಿವಿ ಮಾಧ್ಯಮ ಕ್ಷೇತ್ರದಲ್ಲಿ 2 ರಿಂದ 5 ವರ್ಷಗಳ ಕಾಲ ವರದಿಗಾರರಾಗಿ ಕಾರ್ಯ ನಿರ್ವಹಿಸಿದಂತ ಅನುಭವ ಇರಬೇಕು. ಡಿಜಿಟಲ್ ಮೀಡಿಯಾಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದರೇ ಮೊದಲ ಆದ್ಯತೆ ನೀಡಲಾಗುತ್ತದೆ.
ವಯೋಮಿತಿ
21 ವರ್ಷದಿಂದ 40 ವರ್ಷದವರೆಗಿನ ವಯೋಮಾನದವರು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಕೆ ವಿಧಾನ
ಆಸಕ್ತ ಅರ್ಹ ಅಭ್ಯರ್ಥಿಗಳು ವಾಟ್ಸ್ ಆಪ್ ಮೂಲಕ ಅರ್ಜಿಯನ್ನು ಸಲ್ಲಿಸುವುದಾದದರೇ ತಮ್ಮ ಇತ್ತೀಚಿನ ರಿಸ್ಯೂಮ್ ಅನ್ನು ಮೊಬೈಲ್ ಸಂಖ್ಯೆ 9738123234ಗೆ ಕಳುಹಿಸಿ ಕೊಡಬಹುದಾಗಿದೆ. ಇ-ಮೇಲ್ ಮಾಡುವುದಾದರೇ kannadanewsnow@gmail.com ಗೆ ಕಳುಹಿಸಿಕೊಡಲು ಕೆಎನ್ಎನ್ ಸಂಸ್ಥೆ ತಿಳಿಸಿದೆ.