ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರಕ್ಕೆ ಮೂರು ವರ್ಷ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರದ ರಘುನಾಥಪುರದಲ್ಲಿ ನಡೆಯುತ್ತಿದೆ. ಈ ವೇಳೆ ಮಾತನಾಡಿದ ಸಚಿವ ಸುಧಾಕರ್, ಜನರಿಗೆ ಕಾರ್ಯಕ್ರಮಗಳ ಮಾಹಿತಿ ನೀಡಿದ್ದಾರೆ. ಬೊಮ್ಮಾಯಿ ಸರ್ಕಾರ ಸಾಧನೆಯನ್ನ ಜನರ ಮುಂದೆ ಇಟ್ಟಿದ್ದಾರೆ.
ಸರ್ಕಾರದಿಂದ ರೈತಾಪಿ ಮಕ್ಕಳ ಸಬಲೀಕರಣ ೧೦ ಲಕ್ಷ ರೈತರು ಮಕ್ಕಳಿಗೆ ವಿದ್ಯಾಸಿರಿ ಯೋಜನೆ ಸೌಲಭ್ಯ ನೀಡಲಾಗಿದೆ. ಈಗಾಗಲೇ ಕಾಂಗ್ರೆಸ್ ಕುರ್ಚಿಗಾಗಿ ಕಿತ್ತಾಟ ಶುರು ಮಾಡಿದ್ದಾರೆ. ನೀವೆ ತೀರ್ಮಾನ ತೆಗೆದುಕೊಳ್ಳಿ ಡಬಲ್ ಇಂಜಿನ್ ಸರ್ಕಾರ ಬೇಕಾ? ಡಬಲ್ ಸ್ಟೇರಿಂಗ್ ಇರುವ ಸರ್ಕಾರ ಬೇಕಾ? . ಮುಂದೆ ಡಬಲ್ ಸ್ಟೇರಿಂಗ್ ಡಬಲ್ ಡೋರ್ ಸರ್ಕಾರ ಆಗುತ್ತದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.