ಕೆಎನ್ ಎನ್ ನ್ಯೂಸ್ ಡೆಸ್ಕ್ : ಇತ್ತೀಚಿನ ದಿನಗಳಲ್ಲಿ ಟ್ರಾಫಿಕ್ ಎಲ್ಲ ನೋಡಿ ಹೆಚ್ಚಿನ ಜನರು ಮನೆಯಲ್ಲೇ ಇರೋದೆ ಇಷ್ಟ ಪಡುತ್ತಾರೆ. ಮನೆಯಿಂದ ಹೊರಗೆ ಬರೋದೆ ಇಲ್ಲ. ಆರೋಗ್ಯಕ್ಕಾಗಿ ವಾಕ್ ಕೂಡ ಮೂರು ಹೊತ್ತು ಮನೆಯಲ್ಲಿ ಕಾಲ ಕಳೆಯುತ್ತಾರೆ.
ಎಚ್ಚರ..! ನಿಮಗೆ ಕಿಡ್ನಿ ಸಮಸ್ಯೆ ಕಾಡುತ್ತಾ ? ಈ ಕೆಟ್ಟ ಅಭ್ಯಾಸಗಳನ್ನು ಇಂದೇ ಬಿಟ್ಟುಬಿಡಿ | Kidney Health
ಹೀಗಾಗಿ ಅವರು ಮಾನಸಿಕ, ದೈಹಿಕವಾಗಿ ಕುಗ್ಗಿರುತ್ತಾರೆ. ಉತ್ತಮ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕಾಗಿ ಮನೆಯಿಂದ ಹೊರಗೆ ಹೋಗುವುದು ಉತ್ತಮ ಆಯ್ಕೆ ಎಂಬುದನ್ನು ಸಂಶೋಧನೆಯೊಂದು ತಿಳಿಸಿದೆ.ಮನೆಯಿಂದ 15 ಮೈಲುಗಳಿಗಿಂತ ಹೆಚ್ಚು ದೂರ ಪ್ರಯಾಣಿಸುವವರು, ಸಾಮಾನ್ಯವಾಗಿ ಉತ್ತಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಹೊಂದಿರುತ್ತಾರೆ ಎಂದು ಸಂಶೋಧನೆಯೊಂದು ಹೇಳಿದೆ. ದೂರದ ಸ್ಥಳಗಳಿಗೆ ಭೇಟಿ ನೀಡುವುದು, ಸ್ನೇಹಿತರು ಹಾಗೂ ಕುಟುಂಬಸ್ಥರನ್ನು ಆಗಾಗ ಭೇಟಿ ಮಾಡುವುದು, ಸಾಮಾಜಿಕ ಭಾಗವಹಿಸುವಿಕೆಯನ್ನು ಹೆಚ್ಚಿಸುತ್ತದೆ. ಇದು ಆರೋಗ್ಯದ ಸುಧಾರಣೆಗೆ ಕಾರಣವಾಗುತ್ತದೆ ಎನ್ನುತ್ತದೆ ಸಂಶೋಧನೆ.
ಎಚ್ಚರ..! ನಿಮಗೆ ಕಿಡ್ನಿ ಸಮಸ್ಯೆ ಕಾಡುತ್ತಾ ? ಈ ಕೆಟ್ಟ ಅಭ್ಯಾಸಗಳನ್ನು ಇಂದೇ ಬಿಟ್ಟುಬಿಡಿ | Kidney Health
ಯುಸಿಎಲ್ ಸಂಶೋಧಕರ ನೇತೃತ್ವದ ಹೊಸ ಅಧ್ಯಯನದ ಪ್ರಕಾರ, ತಾವು ವಾಸಿಸುವ ಪ್ರದೇಶಗಳನ್ನು ಮೀರಿ ಅನ್ಯ ಪ್ರದೇಶಗಳಿಗೆ ಆಗಾಗ ಭೇಟಿ ನೀಡುವವರು, ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹೊಂದಿರುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ ಸದಾ ಮನೆಯಲ್ಲೇ ಇರುವವರು ಅಥವಾ ಮನೆಯ ಸುತ್ತಮುತ್ತಲಿನ ಪರಿಸರದಲ್ಲೇ ಸುತ್ತಾಡುವವರು, ಒಂದು ರೀತಿಯ ಏಕಾಂತವನ್ನು ಅನುಭವಿಸುತ್ತಾರೆ ಎಂದು ಸಂಶೋಧನೆ ತಿಳಿಸುತ್ತದೆ.
ನಿರ್ದಿಷ್ಟವಾಗಿ ಇಲ್ಲಿನ ಸ್ಥಳೀಯರು ಹೊರ ಪ್ರದೇಶಗಳಿಗೆ ಅಷ್ಟಾಗಿ ಭೇಟಿ ನೀಡುವುದಿಲ್ಲ. ಇದಕ್ಕೆ ಕಳಪೆ ಸಾರಿಗೆ ವ್ಯವಸ್ಥೆ ಪ್ರಮುಖ ಕಾರಣ. ಇದು ಅವರನ್ನು ನಿರ್ದಿಷ್ಟ ಪ್ರದೇಶಕ್ಕೆ ಸಿಮೀತಗೊಳಿಸಿದೆ ಎಂದು ಸಂಶೋಧಕರು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ.