ಕೆಎನ್ ಎನ್ ನ್ಯೂಸ್ ಡೆಸ್ಕ್ : ನಾಡಿನಾದ್ಯಂತ ನಾಳೆ ಗೌರಿ- ಗಣೇಶ ಹಬ್ಬದ ಸಂಭ್ರಮ. ಈ ಹಬ್ಬ ಬಂತು ಅಂದ್ರೆ ಸಾಮಾವ್ಯವಾಗಿ ಕೆಲವರು ಮನೆಯಲ್ಲಿ ಕಲರ್ ಪುಲ್ ಗಣೇಶ- ಗೌರಿ ಕೂರಿಸುತ್ತಾರೆ. ಈ ಹಬ್ಬಂದು ಹಲವಾರು ನೇಮಗಳು ಮಾಡುತ್ತಾರೆ. ನಮ್ಮ ಪ್ರತಿ ಆಚರಣೆಗೂ ಅದ್ದರದ್ದೇ ಆದ ಹಿನ್ನೆಲೆ ಇರಲಿದೆ. ನಾವು ಆಚರಿಸುವ ಆಚರಣೆಯಲ್ಲೂ ಪ್ರತಿಯೊಂದಕ್ಕೂ ಕಥೆಗಳಿವೆ.ನಮ್ಮ ಪೂರ್ವಜರು ಏನೇ ಹೇಳಿದರೂ,ಮಾಡಿದರೂ ಅದಕ್ಕೆ ಅರ್ಥ ಇರಲಿದೆ.
ಗಣೇಶ ಮೂರ್ತಿ ವಿಸರ್ಜನೆಗೆ ಮಾಡುವ ಮುನ್ನ ಮುಹೂರ್ತ ಬಗ್ಗೆ ತಿಳಿದುಕೊಳ್ಳಿ
ಮನೆಯಲ್ಲಿ ಗಣೇಶನ ಕೂರಿಸಿ ಸಂಭ್ರಮದಿಂದ ಆಚರಣೆ ಮಾಡುತ್ತೇವೆ. ಆದರೆ ಇಲ್ಲೊಂದು ಮುಖ್ಯವಾದ ವಿಷಯವೆಂದರೆ ಗಣೇಶ ಚತುರ್ಥಿಯಂದು ಚಂದ್ರನನ್ನು ನೋಡಬಾರದು ಎಂದು ಅನಾದಿಕಾಲದಂದಲೂ ರೂಢಿಸಿಕೊಂಡು ಬಂದಿದ್ದಾರೆ. ಒಂದು ವೇಳೆ ಇದನ್ನು ನೋಡಿದ್ರೆ ಅಪವಾದ ತಪ್ಪದು ಎನ್ನುವ ಮಾತು ಕೇಳುತ್ತೇವೆ. ಇದರ ಹಿಂದಿನಅರ್ಥವೇನು ಎಂಬುದು ಕೆಲವರಿಗೂ ಗೊತ್ತಿಲ್ಲ. ಹಾಗಿದ್ರೆ ಇದನ್ನು ಮಾಹಿತಿಯನ್ನು ತಿಳಿದುಕೊಳ್ಳಿ ಯಾಕೆ ಹೀಗೆ ಹೇಳುತ್ತಾರೆ ಎನ್ನುವುದಕ್ಕೆ ಪುರಾಣಗಳಲ್ಲಿ ಪ್ರಸಿದ್ಧ ಕಥೆಯೂ ಇದೆ.
ಗಣೇಶ ಚತುರ್ಥಿಯಂದು ಚಂದ್ರನನ್ನು ಏಕೆ ನೋಡಬಾರದು ಗೊತ್ತಾ?
ಗಣೇಶ ಎಲ್ಲರ ಮನೆಯ ಕಡುಬು, ಮೋದಕ, ಲಾಡು, ಚಕ್ಕುಲಿ ಹೀಗೆ ಭಕ್ಷ್ಯಗಳನ್ನು ತಿಂದು ರಾತ್ರಿ ತನ್ನ ಮನೆಗೆ ವಾಹನವಾದ ಇಲಿಯ ಮೇಲೆ ಕುಳಿತು ಹೋಗುತ್ತಿದ್ದನಂತೆ. ದಾರಿಯಲ್ಲಿ ಹಾವು ಕಂಡು ಇಲಿಯು ಹೆದರಿ ಗಣೇಶನನ್ನು ಕೆಳಗೆ ಹಾಕಿ ಓಡಿ ಹೋಯಿತು. ಕೆಳಗೆ ಬಿದ್ದ ತಕ್ಷಣ ಗಣಪನ ಹೊಟ್ಟೆ ಒಡೆಯಿತು. ಕೋಪಗೊಂಡ ಗಣಪ ಹಾವನ್ನು ಎಳೆದು ಹೊಟ್ಟೆಗೆ ಸುತ್ತಿಕೊಂಡನು. ಇದನ್ನೆಲ್ಲಾ ನೋಡಿ ಚಂದ್ರ ನಕ್ಕನಂತೆ. ಗಣೇಶ ಕೋಪಗೊಂಡು ಚಂದ್ರನಿಗೆ ಶಾಪವಿತ್ತನು.
ಗಣೇಶ ಮೂರ್ತಿ ವಿಸರ್ಜನೆಗೆ ಮಾಡುವ ಮುನ್ನ ಮುಹೂರ್ತ ಬಗ್ಗೆ ತಿಳಿದುಕೊಳ್ಳಿ
ಚಂದ್ರನು ತನ್ನ ತಪ್ಪನ್ನು ಅರಿತು ಅವನಲ್ಲಿ ಪ್ರಾರ್ಥನೆ ಮಾಡಿದನು. ಗಣಪನು ಶಾಂತನಾಗಿ ಅದಕ್ಕೆ ಪರಿಹಾರವಾಗಿ ಯಾರು ಚೌತಿಯ ಚಂದ್ರನನ್ನು ನೋಡುವರೋ ಅವರ ಮೇಲೆ ಸುಳ್ಳು,ಕಳ್ಳತನದ ಆರೋಪ ಬರಲಿ ಎಂದನಂತೆ. ಅಂದಿನಿಂದ ಚೌತಿ ಚಂದ್ರನ ದರ್ಶನ ಮಾಡಬಾರದು ಎಂದಿದೆ. ಅಕಸ್ಮಾತ್ ನೋಡಿದಲ್ಲಿ ಶಮಂತಕ ಮಣಿಯ ಕತೆ ಕೇಳಿದರೆ ಒಳಿತು ಎನ್ನುವ ಪ್ರತೀತಿ ಇದೆ.