ಬೆಂಗಳೂರು: ನಗರದಲ್ಲಿ ಮಳೆ ಆರಂಭಗೊಂಡಿದೆ. ಬೇಸಿಗೆಯ ಬಿಸಿಲ ತಾಪ ಕಡಿಮೆಯಾಗುತ್ತಿದೆ. ಸಿಲಿಕಾನ್ ಸಿಟಿಯಲ್ಲಿ ಸುರಿಯುತ್ತಿರೋ ಮಳೆಯಿಂದಾಗಿ ಬೈಕ್ ನಲ್ಲಿ ಸ್ಕಿಡ್ ಆಗಿ ಬಿದ್ದಿದ್ದಂತ ಪೊಲೀಸ್ ಅಧಿಕಾರಿಯ ಮಗನೊಬ್ಬ, ಮಾಡಿದ್ದು ಮಾತ್ರ ಪೊಲೀಸರೇ ಬೆಚ್ಚಿ ಬೀಳುವಂತದ್ದು. ಅದೇನು ಅಂತ ಮುಂದೆ ಓದಿ.
ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದಂತ ಈ ಪ್ರಕರಣ ನಿಮ್ಮನ್ನೇ ಬೆಚ್ಚಿ ಬೀಳಿಸುತ್ತದೆ. ಪೊಲೀಸ್ ಅಧಿಕಾರಿಯ ಮಗನೇ ಹೀಗೆ ಮಾಡ್ತಾನಲ್ಲ ಅನ್ನೋ ಆಶ್ಚರ್ಯವನ್ನು ಹುಟ್ಟು ಹಾಕಬಹುದು. ಅದನ್ನ ನೀವೇ ಪೊಲೀಸ್ ಇಲಾಖೆ ಬಿಡುಗಡೆ ಮಾಡಿರುವಂತ ಈ ಕೆಳಗಿನ ಪ್ರೆಸ್ ನೋಟ್ ನಲ್ಲಿ ಓದಿದ್ರೆ ಗೊತ್ತಾಗುತ್ತೆ. ಓದಿ…
ದಿನಾಂಕ: 21/05/2024 ರಂದು ಫಿರಾದುದಾರರಾದ ಶ್ರೀ.ಗೌತಮ್ ಸುಭಾಷ್ ಎಸ್ ಆನ್ ಸುರೇಶ್ ಬಿ.ಹೆಚ್, 22 ವರ್ಷ, ವಾಸ ನಂ.29, ಬಸವೇಶ್ವರ ಬಡಾವಣೆ, ಮಂಗನಹಳ್ಳಿ ಕ್ರಾಸ್, ಉಲ್ಲಾಳ ಮುಖ್ಯರಸ್ತೆ, ಜ್ಞಾನಭಾರತಿ, ಬೆಂಗಳೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂಲಿನಲ್ಲಿ ದಿನಾಂಕ.20.05.2024 ರಂದು ಕೆಂಗೇಲ ಬಳಿ ನನ್ನ ಸ್ನೇಹಿತರನ್ನು ಭೇಟಿ ಮಾಡಿಕೊಂಡು ಕೆಂಗೇಲಿಯಿಂದ ಬೈಕಿನಲ್ಲಿ ಹೊರಟು ರಾತ್ರಿ ಸುಮಾರು 3.30 ಗಂಟೆ ಸಮಯದಲ್ಲಿ ಪಬ್ ಹೌಸ್‌ನ ಹತ್ತಿರದ ರಸ್ತೆಯಲ್ಲಿ ಬರುತ್ತಿರುವಾಗ ಮೂರು ದ್ವೀಚಕ್ರ ವಾಹನಗಳಲ್ಲಿ ಆರು ಜನ ಅಪಲಚಿತರು ಬಂದು ನೀನು ಎ.ಎಸ್.ಐ., ಸುರೇಶರವರ ಮಗನಾ ಎಂದು ಕೇಳದಾಗ ಅದಕ್ಕೆ ತಾನು ಹೌದು ಎಂದು ಹೇಳದಾಗ ಅವರುಗಳು ತನ್ನ ತಂದೆ ಕಾಮಾಕ್ಷಿಪಾಳ್ಯ ಟ್ರಾಫಿಕ್ ಸ್ಟೇಷನ್‌ನಲ್ಲಿ ಡ್ಯೂಟಿ ಮಾಡುತ್ತಿದ್ದಾಗ ನಮಗೆ ತುಂಬಾ ತೊಂದರೆ ಕೊಟ್ಟಿದ್ದಾರೆ ಎಂದು ಹೇಳಿರುತ್ತಾನೆ.
ಅವರೆ ನನ್ನ ಬೈಕ್ ಚಾಲನೆ ಮಾಡಿಕೊಂಡು ಬಲವಂತದಿಂದ ಹತ್ತಿರದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಚಾಕುವಿನಿಂದ ಎಡಗೈ, ಎಡ ಭುಜ ಮತ್ತು ಮೊಣಕೈ ಹತ್ತಿರ ತಿವಿದು ರಕ್ತಗಾಯ ಮಾಡಿ, ಕಾಲುಗಳಿಂದ ಒದ್ದು ಹಲ್ಲೆ ಮಾಡಿ ನಿನ್ನ ತಂಗಿ ಎಲ್ಲ ಕಾಲೇಜಿಗೆ ಹೋಗುತ್ತಾಳೆ ಎಂದು ನಮಗೆ ಗೊತ್ತು, ನಿನ್ನ ತಂಲಯನ್ನು ರೇಪ್ ಮಾಡುತ್ತೇವೆ ಹಾಗೂ ನಿನ್ನ ತಂದೆ ತಾಯಿಯನ್ನು ಸಾಯಿಸುತ್ತೇವೆಂದು ಇತ್ಯಾದಿಯಾಗಿ ಬೆದಲಕೆಯನ್ನು ಹಾಕಿರುವವರನ್ನು ಪತ್ತೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ ಮೇರೆಗೆ ಠಾಣಾ .30.226/2024 0 143, 144, 363, 341, 323, 324, 504, 506, 427 149 åå s ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿರುತ್ತದೆ.
ತನಿಖಾ ಕಾಲದಲ್ಲಿ ಕೃತ್ಯ ನಡೆದ ಸ್ಥಳದ ಸುತ್ತಮುತ್ತ ಸಿಸಿ ಕ್ಯಾಮರಾಗಳನ್ನು ಪಲಶೀಲನೆ ನಡೆಸಲಾಗಿ ಪಿದ್ಯಾದುದಾರರು ದೂಲನಲ್ಲಿ ತಿಳಿಸಿರುವಂತೆ ಘಟನೆ ನಡೆದಿರುವ ಬಗ್ಗೆ ಸಂದೇಹ ಬಂದಿದ್ದಲಂದ ಪಿರಾದಿಯನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಪಿದ್ಯಾಥಿಯು ಸದಲ ಘಟನೆ ನಡೆದಿರುವುದು ಸುಳ್ಳಾಗಿದ್ದು, ತಾನು ದಿನಾಂಕ:20.05.2024 ರಂದು ರಾತ್ರಿ ಕೆಂಗೇಲಿಯಲ್ಲಿರುವ ತನ್ನ ಇಬ್ಬರು ಸ್ನೇಹಿತರೊಂದಿಗೆ ಮದ್ಯಪಾನ ಮಾಡಿ ನಂತರ ಮನೆಗೆ ಹೋಗುತ್ತಿದ್ದಾಗ ತುಂತುರು ಮಳೆ ಬೀಳುತ್ತಿದ್ದು, ಈ ಸಂದರ್ಭದಲ್ಲಿ ಫಿರಾಬಿ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನ ಅಪಾಚಿ ಆರ್.ಆರ್-310ಗ್ರೇ ಬಣ್ಣದ ವಾಹನ ಸಂಖ್ಯೆಕೆಎ.01.ಜೆಪಿ.0066 ರಲ್ಲಿ ಕೆಂಗೇಲ ಕಡೆಯಿಂದ ಅಮ್ಮ ಆಶ್ರಮ ರಸ್ತೆಯ ಮುಖಾಂತರ ಬರುತ್ತಿದ್ದಾಗ ವಾಹನವು ಅಚಾನಕಾಣ ಆಯತಪ್ಪಿ ಕೆಳಗೆ ಇದ್ದು, ಬೈಕ್ ಜಖಂಗೊಂಡಿದ್ದಲ್ಲದೇ ತನ್ನ ವಿವೋ ಮೊಬೈಲ್ ಸಹ ಒಡೆದು ಹೋಗಿರುತ್ತದೆ.
ಬೈಕ್ ಮತ್ತು ಮೊಬೈಲ್ ಡ್ಯಾಮೇಜ್ ಆಗಿರುವ ವಿಚಾರ ತನ್ನ ತಂದೆಗೆ ತಿಆದರೆ ಅವರು ಕೋಪಿಸಿಕೊಂಡು ತನ್ನನ್ನು ಬೈಯುತ್ತಾರೆಂದು ಹೆದಲಕೆಯಿಂದ ಫಿರಾದಿಯು ತನ್ನ ಬೈಕ್ ಟೂಲ್ಸ್ ಬಾಕ್ಸ್‌ನಲ್ಲಿಟ್ಟಿದ್ದ (ಈ ಹಿಂದೆ ಗಾಡಿಯನ್ನು ಕ್ಲೀನ್ ಮಾಡುವ ಉದ್ದೇಶಕ್ಕಾಗಿ ಖಲೀದಿಸಿಟ್ಟುಕೊಂಡಿದ್ದ) ಷೇವಿಂಗ್ ಗ್ಲೆಡ್‌ನ್ನು ತೆಗೆದುಕೊಂಡು ಸ್ವತ: ತಾನೇ ತನ್ನ ಎಡಗೈ, ಎಡಭುಜಕ್ಕೆ ಕೊಯ್ದುಕೊಂಡು ರಕ್ತಗಾಯ ಮಾಡಿಕೊಂಡು ತನ್ನ ತಂದೆ ಹಾಗೂ ಸ್ನೇಹಿತರಿಗೆ ಕರೆಮಾಡಿ ಮೇಲ್ಕಂಡಂತೆ ಸುಳ್ಳು ಮಾಹಿತಿ ನೀಡಿದ್ದು, ನಂತರ ಆತನ ತಂದೆ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಠಾಣೆಗೆ ಬಂದು ಮೇಲ್ಕಂಡಂತೆ ದೂರನ್ನು ನೀಡಿರುವುದು ಕಂಡುಬಂದಿರುತ್ತದೆ.
ಆದ್ದರಿಂದ ಸದರಿ ಪ್ರಕರಣದಲ್ಲಿ ಪಿದ್ಯಾಥಿಯಾದ ಗೌತಮ್ ಸುಭಾಷ್‌ರವರು ತಾನು ಮದ್ಯಪಾನ ಮಾಡಿ ಬೈಕ್ ಚಲಾಯಿಸುವಾಗ ಆಯತಪ್ಪಿ ಇಲ್ಲದ್ದಲಂದ ಬೈಕ್ ಮತ್ತು ಮೊಬೈಲ್ ಫೋನ್ ಡ್ಯಾಮೇಜ್ ಆದಕಾರಣ ತನ್ನ ತಂದೆಯ ಮೇಳನ ಭಯದಿಂದ ಈ ರೀತಿ ಸುಳ್ಳು ದೂರು ನೀಡಿರುವುದಾಗಿ ತನಿಖೆಯಲ್ಲಿ ಕಂಡು ಬಂದಿರುತ್ತದೆ ಅಂತ ಸ್ಪಷ್ಟ ಪಡಿಸಿದೆ.
ರೈತರಿಗೆ ಮಹತ್ವದ ಮಾಹಿತಿ: ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಏಕೆ? ಪ್ರಯೋಜನ ಏನು? ಇಲ್ಲಿದೆ ಮಾಹಿತಿ
2024-25 ನೇ ಸಾಲಿನ ಶೈಕ್ಷಣಿಕ ಮಾರ್ಗದರ್ಶಿ ಪುಸ್ತಕ : ಶಾಲಾ ಮುಖ್ಯಸ್ತರಿಗೆ ಶಿಕ್ಷಣ ಇಲಾಖೆಯಿಂದ ಮಹತ್ವದ ಸೂಚನೆ