ನವದೆಹಲಿ: ಅಕ್ರಮ ಹಣ ವರ್ಗಾವಣೆ ಸಂಬಂಧ ಇಂದು ದೆಹಲಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ( DK Shivakumar ) ಅವರು ಇಡಿ ವಿಚಾರಣೆಗೆ ಹಾಜರಾಗಿದ್ದರು. ಈ ಬಳಿಕ ಅವರು ಏನು ಹೇಳಿದ್ರು ಎನ್ನುವ ಬಗ್ಗೆ ಮುಂದೆ ಓದಿ.
ಈ ಕುರಿತಂತೆ ಡಿ.ಕೆ. ಶಿವಕುಮಾರ್ ಅವರು ದೆಹಲಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಇಂದು ವಿಚಾರಣೆ ವೇಳೆ ಅಧಿಕಾರಿಗಳು ಕೆಲವು ದಾಖಲೆ ಕೇಳಿದ್ದು, ಅವುಗಳನ್ನು ಸಲ್ಲಿಸಿದ್ದೇನೆ. ಇನ್ನು ಕೆಲವು ದಾಖಲೆ ಕೇಳಿದ್ದು, ಅದನ್ನು ಮುಂದಿನ ಕೆಲವು ದಿನಗಳಲ್ಲಿ ಸಲ್ಲಿಸುತ್ತೇನೆ ಎಂದರು.
ಶಬರಿಮಲೆಗೆ ತೆರಳೋ ಭಕ್ತರಿಗೆ ಗುಡ್ ನ್ಯೂಸ್: ಬೆಳಗಾವಿಯಿಂದ ಕೊಲ್ಲಂಗೆ ವಿಶೇಷ ರೈಲುಗಳ ಸಂಚಾರ
ದೇಣಿಗೆ ವಿಚಾರವಾಗಿ ಯಾವ ರೀತಿ ವಿಚಾರಣೆ ನಡೆಯಿತು ಎಂದು ಕೇಳಿದ ಪ್ರಶ್ನೆಗೆ, ‘ ನಾವು ದೇಣಿಗೆ ನೀಡಿದ ಪ್ರತಿಯೊಂದು ರೂಪಾಯಿಗೂ ಲೆಕ್ಕ ಕೇಳಿದ್ದಾರೆ. ನಾವು ಅದಕ್ಕೆ ಸಂಬಂಧಿಸಿದ ದಾಖಲೆ ನೀಡುತ್ತೇವೆ’ ಎಂದರು.
ಮತ್ತೆ ವಿಚಾರಣೆಗೆ ಕರೆದಿದ್ದಾರಾ ಎಂಬ ಪ್ರಶ್ನೆಗೆ, ‘ ಸದ್ಯಕ್ಕೆ ದಾಖಲೆ ಕೇಳಿದ್ದು, ಮುಂದಿನ ವಿಚಾರಣೆ ಬಗ್ಗೆ ಯಾವುದೇ ಮಾಹಿತಿ ಇಲ್ಲ ‘ ಎಂದರು.
‘ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲೇ ಗೆದ್ದು ತೋರಿಸಲಿ’ : ಮಾಜಿ ಸಚಿವ K.S ಈಶ್ವರಪ್ಪ ಸವಾಲ್
ಚುನಾವಣೆ ಸಮಯದಲ್ಲಿ ಡಿ.ಕೆ. ಸಹೋದರರಿಗೆ ಈ ರೀತಿ ಒತ್ತಡ ಹಾಕಿ ಬಿಜೆಪಿ ಸೇರುವ ಒತ್ತಾಯ ಮಾಡಲಾಗುತ್ತಿದೆಯಾ ಎಂದು ಕೇಳಿದಾಗ, ‘ ಈಗ ಆ ವಿಚಾರ ಹೇಳಿಕೊಂಡು ಕೂತರೆ ಸಮಯ ಸಾಲುವುದಿಲ್ಲ. ಈಗ ಆ ವಿಚಾರ ಬೇಡ. ನಾವು ಎಲ್ಲವನ್ನೂ ಎದುರಿಸಲು ಸಿದ್ಧ ‘ ಎಂದು ಹೇಳಿದರು.