ಬೆಳಗಾವಿ : ಸವದತ್ತಿ ಯಲ್ಲಮ್ಮ ಕ್ಷೇತ್ರದ ಶಾಸಕ, ವಿಧಾನಸಭೆ ಉಪಸಭಾಪತಿ ಆನಂದ ಮಾಮನಿ (56) ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಶನಿವಾರ ತಡರಾತ್ರಿ ನಿಧನರಾಗಿದ್ದಾರೆ.
BIGG NEWS: ಗೆಳೆಯನ ಸಾವಿಗೆ ಕಂಬನಿ ಮಿಡಿದ ಸಿಎಂ; ಮಾಮನಿ ಅಗಲಿಕೆಗೆ ಹಲವು ಗಣ್ಯರ ಸಂತಾಪ
ಮಾಮನಿ ಸಾವಿಗೆ ಗಣ್ಯರು ಸಂತಾಪ ಸೂಚಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಕೂಡ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಗೆಳೆಯನನ್ನು ನೆನದು ಕಣ್ಣೀರು ಹಾಕಿದ್ದಾರೆ.
ಮಾಮನಿ ಆರಂಭಿಕ ಜೀವನ
1966ರ ಜನವರಿ 18ರಂದು ಜನಿಸಿದ್ದರು. ಮಾಜಿ ಡ್ಯೆಪುಟಿ ಸ್ಪೀಕರ್ ಚಂದ್ರಶೇಖರ್ ಮಾಮನಿ ಹಾಗೂ ಗಂಗಮ್ಮ ಮಾಮನಿ ಅವರ ಮಗ. ಪತ್ನಿ ರತ್ನಾ ಮಾಮನಿ ಹಾಗೂ ಇಬ್ಬರು ಮಕ್ಕಳಿದ್ದಾರೆ.ಮಾಮನಿ ಬಿಕಾಂ ಪದವೀಧರ. 2000, 2002ರಲ್ಲಿ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾಗಿದ್ದರು. 2005, 2008ರಲ್ಲಿ ಸವದತ್ತಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. 2004ರಿಂದ ಜೆಡಿಎಸ್ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದರು.
BIGG NEWS: ಗೆಳೆಯನ ಸಾವಿಗೆ ಕಂಬನಿ ಮಿಡಿದ ಸಿಎಂ; ಮಾಮನಿ ಅಗಲಿಕೆಗೆ ಹಲವು ಗಣ್ಯರ ಸಂತಾಪ
ರಾಜಕೀಯ ಕ್ಷೇತ್ರದಲ್ಲಿ ನಡೆದು ಬಂದು ಹಾದಿ
2008ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿ 2008ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಸವದತ್ತಿ ವಿಧಾನಸಭೆ ಮತಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. 2013ರಲ್ಲಿ ಎರಡನೇ ಬಾರಿಗೆ ಹಾಗೂ 2018ರಲ್ಲಿ ಪುನಃ ಶಾಸಕರಾಗಿ ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರು.
ಆನಂದ ಮಾಮನಿ ಕುಟುಂಬಸ್ಥರು ಸವದತ್ತಿ ಯಲ್ಲಮ್ಮ ಕ್ಷೇತ್ರದಲ್ಲಿ 6 ಬಾರಿ ಶಾಸಕರಾಗಿ ಗೆದ್ದಿದ್ದಾರೆ. ತಂದೆ ಚಂದ್ರಶೇಖರ ಮಾಮನಿ 1998ರಲ್ಲಿ ವಿಧಾನಸಭೆ ಉಪ ಸಭಾಧ್ಯಕ್ಷರಾಗಿದ್ದರು. ನಂತರದಲ್ಲಿ ತಂದೆ ನಿಭಾಯಿಸಿದ್ದ ಹುದ್ದೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಆನಂದ ಮಾಮನಿ 2020ರಲ್ಲಿ ಡೆಪ್ಯುಟಿ ಸ್ಪೀಕರ್ ಆದರು. 1985ರಲ್ಲಿ ಪಕ್ಷೇತರ ಹಾಗೂ 1994ರಲ್ಲಿ ಜನತಾದಳದಿಂದ ಶಾಸಕರಾಗಿ ಜಯ ಗಳಿಸಿದ್ದರು. 1999ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಸೋತಿದ್ದರು.ಇದೀಗ ಬೆಳಗಾವಿ ಜಿಲ್ಲೆಯ ಎರಡು ವಿಧಾನಸಭೆ ಕ್ಷೇತ್ರಗಳು ತೆರವಾಗಿವೆ. ಇತ್ತೀಚೆಗೆ ಹುಕ್ಕೇರಿ ಕ್ಷೇತ್ರದ ಶಾಸಕ, ಸಚಿವ ಉಮೇಶ್ ಕತ್ತಿ ಹೃದಯಾಘಾತದಿಂದ ನಿಧನರಾಗಿದ್ದರು.