ಕೆಎನ್ ಎನ್ ನ್ಯೂಸ್ ಡೆಸ್ಕ್ : ಕಡಲೆಕಾಯಿ ಅಂದರೆ ಸಾಕು ಎಲ್ಲರ ಬಾಯಿನಲ್ಲೂ ನೀರು ಬರುತ್ತದೆ. ಕಡಲೆಕಾಯಿ ನಮ್ಮ ಅಡುಗೆ ಮನೆಯ ಅವಿಭಾಜ್ಯ ಅಂಗ ಕೂಡ ಹೌದು. ಇದೇ ಕಾರಣಕ್ಕೆ ಕಡಲೆಕಾಯಿಯನ್ನು ʼಬಡವರ ಬಾದಾಮಿʼ ಎಂತಲೂ ಕರೆಯುತ್ತಾರೆ. ಆದರೆ ಮೊಳಕೆಯೊಡೆದ ಕಡಲೆಕಾಯಿಯ ಆರೋಗ್ಯಕರ ಪ್ರಯೋಜನಗಳ ಬಗ್ಗೆ ಬಹುತೇಕರಿಗೆ ಮಾಹಿತಿ ಇಲ್ಲ.
BIGG NEWS: ದೇವನಹಳ್ಳಿಯಲ್ಲಿ ಸಚಿವರ ಪುತ್ರ ದೇವಾಲಯಕ್ಕೆ ಹೋಗುತ್ತಾರೆ ಎಂದು ಬೀಗ ಹಾಕಿಸಿದ ಶರತ್ ಬಚ್ಚೇಗೌಡ ಬೆಂಬಲಿಗರು
ಕಡಲೆಕಾಯಿಯನ್ನು ಮೊಳಕೆ ಬರಿಸಿ ತಿನ್ನೋದರಿಂದ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಗಳಿವೆ. ಮೊಳಕೆಯೊಡೆದ ಕಡಲೆಕಾಯಿ ಹೃದಯಕ್ಕೆ ತುಂಬಾ ಪ್ರಯೋಜನಕಾರಿ ಎಂಬುದು ವಿಶೇಷ. ಇದರಲ್ಲಿರುವ ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ರಕ್ತ ಪರಿಚಲನೆಯನ್ನು ಸರಿಯಾಗಿಡಲು ಸಹಾಯ ಮಾಡುತ್ತದೆ. ಮೊಳಕೆಯೊಡೆದ ಕಡಲೆಕಾಯಿಯಲ್ಲಿ ಆರೋಗ್ಯಕರ ಕೊಬ್ಬುಗಳಿದ್ದು, ಇದು ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ. ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಸಹ ಮೊಳಕೆಯೊಡೆದ ಕಡಲೆಕಾಯಿ ನಿಯಂತ್ರಿಸುತ್ತದೆ.
BIGG NEWS: ದೇವನಹಳ್ಳಿಯಲ್ಲಿ ಸಚಿವರ ಪುತ್ರ ದೇವಾಲಯಕ್ಕೆ ಹೋಗುತ್ತಾರೆ ಎಂದು ಬೀಗ ಹಾಕಿಸಿದ ಶರತ್ ಬಚ್ಚೇಗೌಡ ಬೆಂಬಲಿಗರು
ಮೊಳಕೆಯೊಡೆದ ಕಡಲೆಕಾಯಿಯನ್ನು ತಿನ್ನುವುದು ತೂಕ ನಷ್ಟಕ್ಕೆ ತುಂಬಾ ಒಳ್ಳೆಯದು ಎಂದು ಸಂಶೋಧನೆಯೊಂದು ಹೇಳುತ್ತದೆ. ಮೊಳಕೆಯೊಡೆದ ಕಡಲೆಕಾಯಿ ಫೈಬರ್ ಅಂಶ ಹೊಂದಿದ್ದು, ಇದು ಚಯಾಪಚಯವನ್ನು ವೇಗಗೊಳಿಸುತ್ತದೆ. ಅಲ್ಲದೇ ಮೊಳಕೆಯೊಡೆದ ಕಲಡಲೆಕಾಯಿ ತೂಕವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.
ಮೊಳಕೆಯೊಡೆದ ಕಡಲೆಕಾಯಿಯಲ್ಲಿ ಒಮೆಗಾ 6 ಕೊಬ್ಬಿನ ಆಮ್ಲಗಳಿವೆ, ಇದು ನಿಮ್ಮ ಬೊಜ್ಜಿನಿಂದ ಎದುರಾಗಬಹುದಾದ ಅಪಾಯವನ್ನು ಕಡಿಮೆ ಮಾಡುತ್ತದೆ. ಮೊಳಕೆಯೊಡೆದ ಕಡಲೆಕಾಯಿಯನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದಾಗಿದೆ.
ಜರ್ನಲ್ ಆಫ್ ಇಂಟರ್ನಲ್ ಮೆಡಿಸಿನ್ನ ವರದಿಯ ಪ್ರಕಾರ, ಮೊಳಕೆಯೊಡೆದ ಕಡಲೆಕಾಯಿಯಲ್ಲಿ ಮೆಗ್ನೀಸಿಯಮ್ ಅಂಶ ಹೆಚ್ಚಿದ್ದು, ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.