ನವದೆಹಲಿ : ಜೀವನವನ್ನ ಶಾಶ್ವತವಾಗಿ ಕೊನೆಗೊಳಿಸುವ ಹಕ್ಕು ಯಾರಿಗೂ ಇಲ್ಲ. ಆದಾಗ್ಯೂ, ಕೆಲವರು ಸಣ್ಣ ಕಾರಣಗಳಿಗಾಗಿ ಸಾಯುತ್ತಾರೆ. ಇಂತಹ ಆತ್ಮಹತ್ಯೆಯ ಘಟನೆಗಳನ್ನ ಸಮಾಜದಲ್ಲಿ ನಿತ್ಯ ನೋಡುತ್ತಿರುತ್ತೇವೆ. ಆದ್ರೆ, ಈ ಆತ್ಮಹತ್ಯೆ ಮನುಷ್ಯರಿಗೆ ಮಾತ್ರ ಸೀಮಿತವಾಗಿಲ್ಲ ಎಂಬುದು ನಿಮಗೆ ತಿಳಿದಿದೆಯೇ? ಪ್ರಾಣಿಗಳು ಕೂಡ ಬಲವಂತವಾಗಿ ಜೀವ ಕಳೆದುಕೊಳ್ಳುತ್ವೆ ಎನ್ನುತ್ತಾರೆ ತಜ್ಞರು. ಪ್ರಾಣಿಗಳು ಆತ್ಮಹತ್ಯೆಗೆ ಕಾರಣವೇನು.? ಯಾವ ಪ್ರಾಣಿಗಳು ಅತ್ಮಹತ್ಯೆ ಮಾಡುತ್ತವೆ ಎಂಬುದನ್ನು ಈಗ ತಿಳಿಯೋಣ.
ನಾಯಿ : ನಾಯಿಗಳು ಮನುಷ್ಯರಿಗೆ ಅತ್ಯಂತ ನಿಕಟವಾದ ಪ್ರಾಣಿಗಳಾಗಿವೆ. ಆದರೆ ನಾಯಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತವೆ ಎಂದರೆ ನೀವು ನಂಬುತ್ತೀರಾ? ಒತ್ತಡ ಮತ್ತು ಖಿನ್ನತೆಯ ಸಮಯದಲ್ಲಿ ಅವು ಆತ್ಮಹತ್ಯೆ ಮಾಡಿಕೊಳ್ಳುತ್ವೆ ಎಂದು ಕೆಲವು ಅಧ್ಯಯನಗಳು ಬಹಿರಂಗಪಡಿಸಿವೆ. ಸ್ವಯಂ ಗಾಯ ಮಾಡಿಕೊಳ್ಳುವುದು ಮತ್ತು ಗೋಡೆಗಳ ಮೇಲಿಂದ ಜಿಗಿಯುವುದನ್ನ ನಾಯಿಗಳಲ್ಲಿ ಆತ್ಮಹತ್ಯೆಯ ಆರಂಭಿಕ ಚಿಹ್ನೆಗಳು ಎಂದು ಪರಿಗಣಿಸಬೇಕು.
ಇಲಿ : ಇಲಿಗಳೂ ಆತ್ಮಹತ್ಯೆ ಮಾಡಿಕೊಳ್ಳುತ್ತವೆ ಎನ್ನುತ್ತಾರೆ ತಜ್ಞರು. ಒತ್ತಡ, ಅನಾರೋಗ್ಯ ಮತ್ತು ಒಂಟಿತನದಂತಹ ಸಮಸ್ಯೆಗಳನ್ನ ಎದುರಿಸಿದಾಗ ಇಲಿಗಳು ಸಾಯುತ್ತವೆ ಎಂದು ಹೇಳಲಾಗುತ್ತದೆ.
ತಿಮಿಂಗಿಲ ಮತ್ತು ಡಾಲ್ಫಿನ್ : ಇನ್ನು ತಿಮಿಂಗಿಲಗಳು ಮತ್ತು ಡಾಲ್ಫಿನ್’ಗಳಲ್ಲಿಯೂ ಆತ್ಮಹತ್ಯೆಯ ಲಕ್ಷಣಗಳು ಕಂಡುಬರುತ್ತವೆ ಎಂದು ಹೇಳಲಾಗುತ್ತದೆ. ಒತ್ತಡ ಮತ್ತು ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು. ಉದ್ದೇಶಪೂರ್ವಕವಾಗಿ ದಡಕ್ಕೆ ಬಂದು ಬೀಳುವ ಮೂಲಕ ಅಥವಾ ತಮ್ಮ ಉಸಿರನ್ನು ಹಿಡಿದಿಟ್ಟುಕೊಳ್ಳುವ ಮೂಲಕ ಅವು ಜೀವ ಕೊನೆಗೊಳಿಸಬಹುದು ಎಂದು ಹಲವಾರು ಅಧ್ಯಯನಗಳು ತೋರಿಸಿವೆ.
ಹಂದಿ : ಹಂದಿಗಳು ಒತ್ತಡಕ್ಕೊಳಗಾದಾಗ ಆತ್ಮಹತ್ಯೆ ಮಾಡಿಕೊಳ್ಳುತ್ತವೆ ಎಂದು ಹಲವಾರು ಅಧ್ಯಯನಗಳು ಬಹಿರಂಗಪಡಿಸಿವೆ. ಒಂದು ಅಧ್ಯಯನದ ಪ್ರಕಾರ, ಹಂದಿಗಳು ಸಾಯಲು ಗೋಡೆಗಳಿಗೆ ಅಪ್ಪಳಿಸುತ್ತವೆ ಎಂದು ಹೇಳಲಾಗುತ್ತದೆ.
ಬೆಕ್ಕು : ಬೆಕ್ಕುಗಳು ಸಹ ಆತ್ಮಹತ್ಯೆ ಮಾಡಿಕೊಳ್ಳುತ್ತವೆ ಎಂದು ಅನೇಕ ಅಧ್ಯಯನಗಳು ಬಹಿರಂಗಪಡಿಸಿವೆ. ಖಿನ್ನತೆಗೆ ಒಳಗಾದಾಗ ಪ್ರಾಣ ತೆಗೆದುಕೊಳ್ಳುತ್ವೆ ಎಂದು ಹೇಳಲಾಗುತ್ತದೆ.
ಮೀನು : ತಜ್ಞರು ಹೇಳುವಂತೆ ಮೀನುಗಳು ಸಹ ತಮ್ಮ ಜೀವನವನ್ನ ಮಧ್ಯಂತರವಾಗಿ ಕೊನೆಗೊಳಿಸುತ್ತವೆ. ಅದರಲ್ಲೂ ಉತ್ತಮ ನೀರು ಇಲ್ಲದಿರುವ ಅಥವಾ ಮೀನು ಸಾಕಾಣಿಕೆ ನಡೆಸುವ ಸ್ಥಳದಲ್ಲಿ ಇಂತಹ ಘಟನೆಗಳು ಹೆಚ್ಚು ಎನ್ನಲಾಗಿದೆ.
ಕಂತೆ ಕಂತೆ ‘ನೋಟು’ಗಳ ನಡುವೆ ‘ಗಣೇಶ’ನ ವೈಭವ ; ‘2.7 ಕೋಟಿ 500 ನೋಟು’ಗಳಿಂದ ಅಲಂಕಾರ
ಡಾ.ಅಶ್ವತ್ಥನಾರಾಯಣ್ ನೇತೃತ್ವದಲ್ಲಿ ಬಿಜೆಪಿ ಸತ್ಯ ಶೋಧನಾ ಸಮಿತಿ: ರಾಜ್ಯಪಾಲರ ಮಧ್ಯಪ್ರವೇಶಕ್ಕೆ ರವಿಕುಮಾರ್ ಒತ್ತಾಯ
ನೇರವಾಗಿ ಬೆಂಕಿಗೆ ‘ಚಪಾತಿ’ ಸುಡುವುದು ಅಪಾಯ, ‘ಕ್ಯಾನ್ಸರ್’ಗೆ ಕಾರಣ : ಅಧ್ಯಯನ