Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಸಿನಿಮಾ, ಧಾರಾವಾಹಿ ಶೂಟಿಂಗ್ ಸಂಪೂರ್ಣ ನಿಷೇಧ : ಸರ್ಕಾರ ಮಹತ್ವದ ಆದೇಶ

BIG BREAKING: ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸದಸ್ಯರಾಗಿ ಸಿದ್ದರಾಮಯ್ಯ ನೇಮಕ | Siddaramaiah

BIG BREAKING: ಇಂದೇ ಸಚಿವರ ಪಟ್ಟಿ ಪ್ರಕಟ: ಸಿಎಲ್ ಪಿ ನಾಯಕ ಡಿ.ಕೆ.ಶಿವಕುಮಾರ್ ಘೋಷಣೆ | DK Shivakumar Oath

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಡಾ.ಅಶ್ವತ್ಥನಾರಾಯಣ್ ನೇತೃತ್ವದಲ್ಲಿ ಬಿಜೆಪಿ ಸತ್ಯ ಶೋಧನಾ ಸಮಿತಿ: ರಾಜ್ಯಪಾಲರ ಮಧ್ಯಪ್ರವೇಶಕ್ಕೆ ರವಿಕುಮಾರ್ ಒತ್ತಾಯ
KARNATAKA

ಡಾ.ಅಶ್ವತ್ಥನಾರಾಯಣ್ ನೇತೃತ್ವದಲ್ಲಿ ಬಿಜೆಪಿ ಸತ್ಯ ಶೋಧನಾ ಸಮಿತಿ: ರಾಜ್ಯಪಾಲರ ಮಧ್ಯಪ್ರವೇಶಕ್ಕೆ ರವಿಕುಮಾರ್ ಒತ್ತಾಯ

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ದಲಿತರನ್ನು ಮತ್ತು ಹಿಂದೂಗಳನ್ನು ಹತ್ತಿಕ್ಕುವ ಸರಕಾರ ರಾಜ್ಯದಲ್ಲಿದೆ; ಈ ಸರಕಾರದ ನಡೆನುಡಿ ಬಗ್ಗೆ ಕೂಡಲೇ ರಾಜ್ಯಪಾಲರು ಮಧ್ಯಪ್ರವೇಶ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಆಗ್ರಹಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಬಿಜೆಪಿ ವತಿಯಿಂದ ಡಾ.ಅಶ್ವತ್ಥನಾರಾಯಣ್ ಅವರ ನೇತೃತ್ವದಲ್ಲಿ ಬೈರತಿ ಬಸವರಾಜ್, ಭಾಸ್ಕರ ರಾವ್, ನಾರಾಯಣಗೌಡರನ್ನು ಒಳಗೊಂಡ ಸತ್ಯ ಶೋಧನಾ ಸಮಿತಿ ರಚಿಸಲಾಗಿದೆ. ನಿನ್ನೆ ನಮ್ಮ ಅಧ್ಯಕ್ಷ ವಿಜಯೇಂದ್ರ, ಆರ್.ಅಶೋಕ್ ಅವರು ನಾಗಮಂಗಲಕ್ಕೆ ತೆರಳಿ ನೋಡಿಕೊಂಡು ಬಂದಿದ್ದಾರೆ ಎಂದರು. ಹಿಂದೂಗಳಿಗೆ ಅನ್ಯಾಯ ಮಾಡುವ ಸರಕಾರ ಇದೆಂದು ಆಕ್ಷೇಪಿಸಿದರು.

ನಾಗಮಂಗಲದಲ್ಲಿ ಗಣಪತಿ ವಿಸರ್ಜನೆಗೆ ತೆರಳುವ ಮೆರವಣಿಗೆಯ ಮೇಲೆ ಮುಸಲ್ಮಾನರು ಕಲ್ಲುಗಳನ್ನು ಎಸೆದಿದ್ದಾರೆ. ನೂರಾರು ಕಲ್ಲುಗಳನ್ನು ಎಸೆದಿದ್ದಾರೆ. ಮಸೀದಿಯಲ್ಲಿ ಕಲ್ಲುಗಳು ಹೇಗೆ ಬಂದವು? ಲಾಂಗುಗಳು, ಪೆಟ್ರೋಲ್ ಬಾಂಬ್ ಹೇಗೆ ಬಂದವು? ಎಂದು ಕೇಳಿದರು. ಪೆಟ್ರೋಲ್ ಬಾಂಬ್ ಎಸೆದು ಅಂಗಡಿಗಳನ್ನು ಸುಟ್ಟು ಹಾಕಿದ್ದಾರೆ. ಸುಮಾರು 40ಕ್ಕೂ ಹೆಚ್ಚು ಅಂಗಡಿಗಳು ಸುಟ್ಟು ಭಸ್ಮವಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಬಟ್ಟೆ ಅಂಗಡಿ, ಸಿಮೆಂಟ್ ಅಂಗಡಿ, ಕಿರಾಣಿ ಅಂಗಡಿ ಸೇರಿ ಹಲವಾರು ಅಂಗಡಿಗಳ ದರೋಡೆ ಮಾಡಿದ್ದಾರೆ. ಹಲವಾರು ಅಂಗಡಿ ಭಸ್ಮವಾಗಿದ್ದು, ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಈ ಸರಕಾರ ಹಿಂದೂಗಳಿಗೆ ರಕ್ಷಣೆ ಕೊಡದ ಸರಕಾರ. ಕೇವಲ ಮುಸಲ್ಮಾನರನ್ನು ತೃಪ್ತಿ ಪಡಿಸುವ ಸರಕಾರ ಎಂದು ದೂರಿದರು.

ಗೃಹ ಸಚಿವರು ಇದೊಂದು ಸಣ್ಣ ಘಟನೆ ಎಂದಿದ್ದಾರೆ. ಸಿದ್ದರಾಮಯ್ಯನವರು ಇದರ ಕುರಿತು ಚಕಾರ ಎತ್ತುತ್ತಿಲ್ಲ ಎಂದು ಆಕ್ಷೇಪಿಸಿದರು. ಮುಖ್ಯಮಂತ್ರಿಗಳು ಈ ಘಟನೆ ಬಗ್ಗೆ ಗಮನ ಕೊಡಬೇಕು. ಕೇವಲ ಹಿಂದೂಗಳನ್ನು ಮಾತ್ರ ಎ 1, ಎ 2 (ಮೊದಲನೇ ಆರೋಪಿ, ಎರಡನೇ ಆರೋಪಿ) ಮಾಡುತ್ತಿದ್ದಾರೆ. ಮುಸಲ್ಮಾನ ಬಂಧುಗಳು ಕಲ್ಲೆಸೆದಿದ್ದಾರೆ. ಯಾರ ಮೇಲೆ ಎ 1, ಎ 2 ಹಾಕಬೇಕಿತ್ತು? ಕಲ್ಲೆಸೆದವರ ಮೇಲೆ ಆರೋಪಿ ನಂ 1, ಆರೋಪಿ ನಂ 2 ಎಂದು ಹೆಸರಿಸಬೇಕಿತ್ತು. ಹಿಂದೂಗಳ ಆಸ್ತಿಪಾಸ್ತಿ ನಷ್ಟವಾಗಿದೆ. ಮತ್ತೆ ಅವರ ಮೇಲೆ ಕೇಸು ಹಾಕುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಈ ಸರಕಾರಕ್ಕೆ ನಾಚಿಕೆ, ಮಾನ, ಮರ್ಯಾದೆ, ಗೌರವ ಏನೇನೂ ಇಲ್ಲ. ಈ ಸರಕಾರ ಬರಲು ಹಿಂದೂಗಳು ಮತ ಹಾಕಿದ್ದಾರಾ? ಇಲ್ಲವೇ ಎಂದು ಕೇಳಿದರು.

ಮಾಗಡಿಯ ಸರ್ವತೋಮುಖ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ: ಸಿಎಂ ಸಿದ್ದರಾಮಯ್ಯ ಭರವಸೆ

BIG NEWS : ಕೇಜ್ರಿವಾಲ್ ಗೆ ಸುಪ್ರೀಂಕೋರ್ಟ್ ಜಾಮೀನು ನೀಡಿದ್ದು ಕೇಂದ್ರ ಸರ್ಕಾರಕ್ಕೆ ಕೊಟ್ಟ ತಪರಾಕಿ : ಸಿಎಂ ಸಿದ್ದರಾಮಯ್ಯ

BREAKING: ಶೀಘ್ರವೇ ನಂದಿನಿ ಹಾಲಿನ ದರ ಹೆಚ್ಚಳ: ಸಿಎಂ ಸಿದ್ದರಾಮಯ್ಯ ಘೋಷಣೆ | Nandini Milk Price Hike

Share. Facebook Twitter LinkedIn WhatsApp Email

Related Posts

BIG NEWS : ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಸಿನಿಮಾ, ಧಾರಾವಾಹಿ ಶೂಟಿಂಗ್ ಸಂಪೂರ್ಣ ನಿಷೇಧ : ಸರ್ಕಾರ ಮಹತ್ವದ ಆದೇಶ

2 Mins Read

BIG BREAKING: ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸದಸ್ಯರಾಗಿ ಸಿದ್ದರಾಮಯ್ಯ ನೇಮಕ | Siddaramaiah

1 Min Read

BIG BREAKING: ಇಂದೇ ಸಚಿವರ ಪಟ್ಟಿ ಪ್ರಕಟ: ಸಿಎಲ್ ಪಿ ನಾಯಕ ಡಿ.ಕೆ.ಶಿವಕುಮಾರ್ ಘೋಷಣೆ | DK Shivakumar Oath

1 Min Read
Recent News

BIG NEWS : ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಸಿನಿಮಾ, ಧಾರಾವಾಹಿ ಶೂಟಿಂಗ್ ಸಂಪೂರ್ಣ ನಿಷೇಧ : ಸರ್ಕಾರ ಮಹತ್ವದ ಆದೇಶ

BIG BREAKING: ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸದಸ್ಯರಾಗಿ ಸಿದ್ದರಾಮಯ್ಯ ನೇಮಕ | Siddaramaiah

BIG BREAKING: ಇಂದೇ ಸಚಿವರ ಪಟ್ಟಿ ಪ್ರಕಟ: ಸಿಎಲ್ ಪಿ ನಾಯಕ ಡಿ.ಕೆ.ಶಿವಕುಮಾರ್ ಘೋಷಣೆ | DK Shivakumar Oath

BREAKING: ಇಂದು ಸಂಜೆ ನಡೆಯಬೇಕಿದ್ದ ಕಾಂಗ್ರೆಸ್ ಭವನ ಶಂಕುಸ್ಥಾಪನೆ ಕಾರ್ಯಕ್ರಮ ಮುಂದೂಡಿಕೆ | DK Shivakumar Oath

State News
KARNATAKA

BIG NEWS : ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಸಿನಿಮಾ, ಧಾರಾವಾಹಿ ಶೂಟಿಂಗ್ ಸಂಪೂರ್ಣ ನಿಷೇಧ : ಸರ್ಕಾರ ಮಹತ್ವದ ಆದೇಶ

By kannadanewsnow57 KARNATAKA 2 Mins Read

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳ ಒಳಗೆ ಮತ್ತು ಶಾಲಾ ಆವರಣದಲ್ಲಿ ಇನ್ಮುಂದೆ ಸಿನಿಮಾ, ಕಿರುಚಿತ್ರ ಹಾಗೂ ಧಾರಾವಾಹಿಗಳ ಚಿತ್ರೀಕರಣ ನಡೆಸುವುದಕ್ಕೆ…

BIG BREAKING: ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸದಸ್ಯರಾಗಿ ಸಿದ್ದರಾಮಯ್ಯ ನೇಮಕ | Siddaramaiah

BIG BREAKING: ಇಂದೇ ಸಚಿವರ ಪಟ್ಟಿ ಪ್ರಕಟ: ಸಿಎಲ್ ಪಿ ನಾಯಕ ಡಿ.ಕೆ.ಶಿವಕುಮಾರ್ ಘೋಷಣೆ | DK Shivakumar Oath

BREAKING: ಇಂದು ಸಂಜೆ ನಡೆಯಬೇಕಿದ್ದ ಕಾಂಗ್ರೆಸ್ ಭವನ ಶಂಕುಸ್ಥಾಪನೆ ಕಾರ್ಯಕ್ರಮ ಮುಂದೂಡಿಕೆ | DK Shivakumar Oath

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.