ಬೆಂಗಳೂರು: ದಿನೇ ದಿನೇ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಅದರಲ್ಲೂ ಹಬ್ಬದ ಸಂದರ್ಭದಲ್ಲಂತೂ ಹೂ, ಹಣ್ಣು ಕಾಯಿಗಳ ಬೆಲೆ ದುಪ್ಪಟ್ಟು ಹೆಚ್ಚಳವಾಗುತ್ತದೆ. ಈ ವೇಳೆಯಲ್ಲಿಯೇ ಆಯುಧಪೂಜೆಗಾಗಿ ( Ayudha Pooja ) ಸಾರಿಗೆ ಸಿಬ್ಬಂದಿಗಳಿಗೆ ಸರ್ಕಾರ ಕೊಟ್ಟ ಹಣ ಮಾತ್ರ, ಒಂದು ಮಾರು ಹೂವಕ್ಕೂ ಸಾಕಾಗದಷ್ಟಾಗಿದೆ. ಸರ್ಕಾರದ ನೀಡಿದಂತ ಆ ಹಣದ ಬಗ್ಗೆ ಸಿಬ್ಬಂದಿಗಳ ಆಕ್ರೋಶಕ್ಕೂ ಕಾರಣವಾಗಿದೆ.
ಪ್ರತಿ ವರ್ಷದಂತೆ ಈ ವರ್ಷವೂ ದಸರಾ ಹಬ್ಬದ ಸಂದರ್ಭದಲ್ಲಿನ ಆಯುಧ ಪೂಜೆ ದಿನ ಬಂದಿದೆ. ಈ ಹಬ್ಬಕ್ಕೆ ಕೆ ಎಸ್ ಆರ್ ಟಿ ಸಿಯಿಂದ ಸಾರಿಗೆ ವಾಹನಗಳನ್ನು ಸ್ವಚ್ಛಗೊಳಿಸಿ, ಪೂಜಿಸೋದಕ್ಕಾಗಿ ಸರ್ಕಾರ ಹಣ ಕೂಡ ನೀಡುತ್ತದೆ. ಆದ್ರೇ ದಿನದಿಂದ ದಿನಕ್ಕೆ ಆ ಹಣವನ್ನು ಅಗತ್ಯ ವಸ್ತುಗಳ ಖರೀದಿ ಬೆಲೆಗೆ ಸಮವಾಗಿ ಹೆಚ್ಚಿಸಿ, ನೀಡಬೇಕಾದಂತ ಸರ್ಕಾರ ಮಾತ್ರ, ಆ ಕೆಲಸ ಮಾಡದೇ ಹಳೆಯ ಕಾಲದ ಬೆಲೆಯಂತೆ ಹಣ ನೀಡುತ್ತಿದೆ.
ಭೋಪಾಲ್: 1 ವರ್ಷದ ಬಾಲಕಿಯ ಶ್ವಾಸನಾಳ ಸೇರಿದ್ದ ʻಹೇರ್ ಪಿನ್ʼ ಹೊರ ತೆಗೆದ ವೈದ್ಯರು, ಶಸ್ತ್ರಚಿಕಿತ್ಸೆ ಯಶಸ್ವಿ
ಇದೀಗ ಕೆ ಎಸ್ ಆರ್ ಟಿ ಸಿ ಸಿಬ್ಬಂದಿಗಳಿಗೆ ಸಾರಿಗೆ ವಾಹನ, ಘಟಗಳಲ್ಲಿನ ಬಸ್ ಗಳಿಗೆ ( KSRTC Bus ) ತಲಾ ರೂ.50 ನೀಡಿದ್ದು, ಸಿಬ್ಬಂದಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಯಾಕೆಂದ್ರೇ ಸರ್ಕಾರ ಆಯುಧ ಪೂಜೆಗಾಗಿ ನೀಡಿರುವಂತ ಹಣದಲ್ಲಿ ಒಂದು ಮಾರು ಹೂ ತಗೋಳ್ಳೋದಿರಲಿ, ನಾಲ್ಕು ನಿಂಬೆಹಣ್ಣು ಕೂಡ ಬರೋದಿಲ್ಲ ಎಂಬುದಾಗಿ ಕಿಡಿಕಾರಿದ್ದಾರೆ.
ಮುಖ್ಯಮಂತ್ರಿಗಳೇ, ಸಾರಿಗೆ ಸಚಿವರೇ, ಜನಪ್ರತಿನಿಧಿಗಳೇ ನಿಮ್ಮ ವೇತನ ಸೇರಿದಂತೆ ವಿವಿಧ ಭತ್ಯೆಗಳನ್ನು ಕಾಲ ಕಾಲಕ್ಕೆ ಹೆಚ್ಚಿಸಿಕೊಳ್ಳುವ ನೀವುಗಳು, ಅದ್ಯಾಕೆ ಸಾರಿಗೆ ಸಿಬ್ಬಂದಿಗಳಿಗೆ ಆಯುಧ ಪೂಜೆಯಲ್ಲಿ ಕೊಡುವಂತ ಪೂಜೆಗಾಗಿಯ ಹಣದಲ್ಲಿಯೂ ಬದಲಾವಣೆ ಮಾಡುವುದಿಲ್ಲ ಎಂಬುದು ಅನೇಕರ ಪ್ರಶ್ನೆಯಾಗಿದೆ.