ಕೆಎನ್ ಎನ್ ನ್ಯೂಸ್ ಡೆಸ್ಕ್ : ಹೆಚ್ಚಾಗಿ ಆರೋಗ್ಯ ಸಮಸ್ಯೆ ಕಂಡು ಬಂದರೆ ಕಿರಿಕಿರಿ ಉಂಟಾಗುವುದು ಸಹಜ. ಅದರಲ್ಲೂ ರಾತ್ರಿ ವೇಳೆಯಲ್ಲೇ ಹೆಚ್ಚು ಕಾಡುತ್ತಿದ್ದಾರೆ ಹಿಂಸೆ ಆಗುತ್ತದೆ. ಅಂತಹ ಸಮಸ್ಯೆಗಳಲ್ಲಿ ಕೆಮ್ಮು ಕೂಡಾ ಒಂದು. ಈ ಒಣಕೆಮ್ಮು ರಾತ್ರಿ ಇಡೀ ನಮ್ಮನ್ನು ಬಾಧಿಸುತ್ತದೆ. ನೆಮ್ಮದಿಯಾಗಿ ನಿದ್ರೆ ಮಾಡಲು ಕೂಡಾ ಬಿಡುವುದಿಲ್ಲ. ನಿರಂತರ ಕೆಮ್ಮುತ್ತಿದ್ದರೆ ಸುಸ್ತು ಕಾಡುತ್ತದೆ.
BIGG NEWS: ದೇಶದಲ್ಲಿ PFI ಬ್ಯಾನ್; ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಿಸಿದ ಕಾಂಗ್ರೆಸ್
ಕೆಮ್ಮು ಶ್ವಾಸನಾಳವನ್ನು ಸ್ವಚ್ಛಗೊಳಿಸುತ್ತದೆ. ಲೋಳೆಯಂತಹ ತ್ಯಾಜ್ಯವು ಶ್ವಾಸನಾಳ ಮತ್ತು ಗಂಟಲಿನಲ್ಲಿ ಸಂಗ್ರಹವಾದಾಗ, ನಮ್ಮ ದೇಹವು ಅದನ್ನು ಕೆಮ್ಮುವ ಮೂಲಕ ಹೊರ ಹಾಕುತ್ತದೆ. ಆದರೆ ಕೆಮ್ಮು ನಿರಂತರ ಮುಂದುವರೆದರೆ ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು. ರಾತ್ರಿ ಮಲಗಿದ ನಂತರವೇ ಎಷ್ಟೋ ಜನರಿಗೆ ಈ ಒಣ ಕೆಮ್ಮು ಕಾಡುತ್ತದೆ. ಇದು ನಿದ್ರೆಗೆ ಭಂಗ ತರುವುದಲ್ಲದೆ ಎದೆ ನೋವಿಗೆ ಕಾರಣವಾಗುತ್ತದೆ. ನಿಮಗೂ ಈ ಸಮಸ್ಯೆ ಕಾಡುತ್ತಿದ್ದರೆ, ಕೆಲವೊಂದು ಮನೆ ಮದ್ದುಗಳಿಂದ ಸಮಸ್ಯೆ ನಿವಾರಿಸಬಹುದು.
ತುಳಸಿ ಎಲೆಗಳು
ಒಣ ಕೆಮ್ಮಿನ ಸಮಸ್ಯೆಯನ್ನು ನಿವಾರಿಸುವಲ್ಲಿ ತುಳಸಿ ಎಲೆಗಳು ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ತುಳಸಿ ಎಲೆಗಳಲ್ಲಿ ಹಲವಾರು ಔಷಧೀಯ ಗುಣಗಳಿವೆ. ಇದು ಶೀತ ಮತ್ತು ಜ್ವರದ ರೋಗಲಕ್ಷಣಗಳನ್ನು ಕಡಿಮೆ ಮಾಡುತ್ತದೆ.
BIGG NEWS: ದೇಶದಲ್ಲಿ PFI ಬ್ಯಾನ್; ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಿಸಿದ ಕಾಂಗ್ರೆಸ್
ಅರಿಶಿನದ ಹಾಲು
ಒಂದು ಲೋಟ ಹಾಲಿಗೆ ಸ್ವಲ್ಪ ನೀರು ಹಾಗೂ ಚಿಟಿಕೆ ಅರಿಶಿನ ಸೇರಿಸಿ 5 ನಿಮಿಷ ಕುದಿಸಿ, ನಂತರ ಈ ಮಿಶ್ರಣದವನ್ನು ಶೋಧಿಸಿ ರಾತ್ರಿ ಮಲಗುವ ಮುನ್ನ ಸೇವಿಸಿದರೆ ಒಣ ಕೆಮ್ಮು ಕ್ರಮೇಣ ಕಡಿಮೆಯಾಗುತ್ತದೆ.
ಶುಂಠಿ ಹಾಗೂ ಬೆಲ್ಲ
ಸಕ್ಕರೆಗಿಂತ ಬೆಲ್ಲ ಸೇವಿಸಿದರೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಬೆಲ್ಲದಲ್ಲಿ ನೈಸರ್ಗಿಕ ಸಕ್ಕರೆ ಅಂಶ ಇದೆ. ಇದನ್ನು ಸೇವಿಸಿದರೆ ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಹೆಚ್ಚಾಗುವುದಿಲ್ಲ. ಒಣ ಕೆಮ್ಮು ಹೋಗಲಾಡಿಸಲು ಕೂಡಾ ಬೆಲ್ಲ ಸಹಾಯಕಾರಿಯಾಗಿದೆ.
BIGG NEWS: ದೇಶದಲ್ಲಿ PFI ಬ್ಯಾನ್; ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಿಸಿದ ಕಾಂಗ್ರೆಸ್
ಜೇನು ತುಪ್ಪ
ಒಂದು ಲೋಟ ಬೆಚ್ಚಗಿನ ನೀರಿಗೆ ಒಂದು ಚಮಚ ಜೇನುತುಪ್ಪ ಬೆರೆಸಿ ಕುಡಿಯುವುದರಿಂದ ರಾತ್ರಿಯಲ್ಲಿ ಬರುವ ಕೆಮ್ಮು ನಿವಾರಣೆಯಾಗುತ್ತದೆ. ಬಿಸಿ ನೀರನ್ನು ಸೇವಿಸುವುದರಿಂದ ಗಂಟಲಿನ ಸಮಸ್ಯೆಗಳು ಸೇರಿದಂತೆ ಶುಷ್ಕತೆಯ ಸಮಸ್ಯೆಯನ್ನು ಕೂಡಾ ಇದು ನಿವಾರಿಸುತ್ತದೆ
ಉಪ್ಪು ಹಾಗೂ ಕರಿ ಮೆಣಸು
ಒಣ ಕೆಮ್ಮಿನ ಸಮಸ್ಯೆಯಿಂದ ಪರಿಹಾರ ಪಡೆಯಲು ಮತ್ತೊಂದು ಉತ್ತಮ ವಿಧಾನವೆಂದರೆ ಉಪ್ಪು ಹಾಗೂ ಕರಿ ಮೆಣಸು. ಒಂದು ಪಾತ್ರೆಯಲ್ಲಿ ಕರಿ ಮೆಣಸಿನ ಪುಡಿ ಹಾಗೂ ಸ್ವಲ್ಪ ಉಪ್ಪು ಸೇರಿಸಿ. ತಿನ್ನುವುದರಿಂದ ರಾತ್ರಿ ಸ್ವಲ್ಪ ನಿದ್ದೆ ಬರುತ್ತದೆ.