ಕೆಎನ್ ಎನ್ ನ್ಯೂಸ್ ಡೆಸ್ಕ್ : ಇಂದಿನ ದಿನಗಳಲ್ಲಿ ಮಳೆ ಸುರಿಯುವುದರಿಂದ ಮನೆಗಳ ಬಿರುಕು ಮಾಡುತ್ತಿದೆ. ನಿರ್ಮಾಣ ಗುಣಮಟ್ಟ ಕಳಪೆಯಾಗಿರುವುದು ಅಥವಾ ಇನ್ಯಾವುದೋ ಕಾರಣದಿಂದ ಕೆಲವು ಮನೆಗಳ ಗೋಡೆಗಳಲ್ಲಿ ಬಿರುಕುಗಳಿರುವುದು ಸಾಮಾನ್ಯ.
BIGG NEWS: ಮಂಗಳೂರಿನ ಪಿಲಿಕುಳದಲ್ಲಿ ಹುಲಿಗಳ ನಡುವೆ ಕಾದಾಟ: ಗಾಯಗೊಂಡ ಹುಲಿ ಮರಿ ಸಾವು
ಇಂತಹ ಬಿರುಕು ರಿಪೇರಿ ಮಾಡಲಾಗದೆ ಇದ್ದರೆ ಇತರರಿಗೆ ಕಾಣದಂತೆ ಮರೆಮಾಚಬಹುದು. ದೊಡ್ಡ ಮಟ್ಟದ ಬಿರುಕು ಆಗಿದ್ದರೆ, ಅಪಾಯಕಾರಿಯಾಗಿದ್ದರೆ ಮರೆಮಾಚದೆ ರಿಪೇರಿ ಮಾಡಿಸಿ.ಮನೆಯ ಸುಂದರವಾದ ಗೋಡೆಗಳಲ್ಲಿ ಕೆಲವೊಂದು ಬಿರುಕುಗಳು ಇರಬಹುದು. ಹಳೆ ಮನೆಗಳಲ್ಲಿ, ಗುಣಮಟ್ಟದ ನಿರ್ಮಾಣವಿಲ್ಲದ ಮನೆಗಳಲ್ಲಿ ಇಂತಹ ಬಿರುಕುಗಳು ಸಾಮಾನ್ಯ. ಇಂತಹ ಬಿರುಕುಗಳನ್ನು ಮುಚ್ಚಲು ಸಿಮೆಂಟ್ ಅಥವಾ ಇತರೆ ಟ್ಯಾಪಿಂಗ್ ವಿಧಾನಗಳನ್ನು ಬಳಸಬಹುದು. ಆದರೆ, ಇಂತಹ ವಿಧಾನಗಳನ್ನು ಬಳಸಿದರೂ ಗೋಡೆಯ ಮೊದಲಿನ ಅಂದ ವಾಪಸ್ ದೊರಕುವುದು ಕಷ್ಟ. ಈ ರೀತಿ ಬಿರುಕು ಬಿಟ್ಟ ಸ್ಥಳಕ್ಕೆ ಏನಾದರೂ ವಸ್ತುವನ್ನು ಅಡ್ಡವಿಡುವುದೇ ಸುಲಭವಾದ ದಾರಿಯಾಗಿದೆ.
BIGG NEWS: ಮಂಗಳೂರಿನ ಪಿಲಿಕುಳದಲ್ಲಿ ಹುಲಿಗಳ ನಡುವೆ ಕಾದಾಟ: ಗಾಯಗೊಂಡ ಹುಲಿ ಮರಿ ಸಾವು
ವಾಲ್ಪೇಪರ್ ಬಳಸಿ
ಮನೆಯ ಗೋಡೆಯ ಅಂದ ಹೆಚ್ಚಿಸುವ ವಾಲ್ಪೇಪರ್ಗಳನ್ನು ಗೋಡೆಯ ಬಿರುಕು ಮುಚ್ಚಲು ಬಳಸಬಹುದು. ನಿಮಗೆ ಇಷ್ಟವಾದ ವಾಲ್ಪೇಪರ್ ಆಯ್ಕೆ ಮಾಡಿ. ಬಿರುಕು ಬಿಟ್ಟ ಗೋಡೆಗೆ ಜೋಡಿಸಿ. ವಾಲ್ಪೇಪರ್ ಅಂಟಿಸುವ ಮೊದಲು ಗೋಡೆಯ ಬಿರುಕಿನೊಳಗೆ ಸಿಮೆಂಟ್ ಅಥವಾ ಗಮ್ ಹಾಕಿ. ಬಿರುಕು ರಿಪೇರಿ ಮಾಡಿದ ಬಳಿಕ ಈ ರೀತಿ ವಾಲ್ಪೇಪರ್ ಅಂಟಿಸುವುದು ಉತ್ತಮ. ನಿಮ್ಮ ಮನೆಯ ಇಂಟೀರಿಯರ್ಗೆ ಹೊಂದಾಣಿಕೆಯಾಗುವಂತಹ ವಾಲ್ಪೇಪರ್ ಆಯ್ಕೆ ಮಾಡಿ. ಇಲ್ಲವಾದರೆ ಗೋಡೆ ಭಿನ್ನವಾಗಿ ಕಾಣಬಹುದು.
ದೊಡ್ಡ ಗಡಿಯಾರ ಬಳಸಿ
ಯಾವುದಾದರೂ ನಿರ್ದಿಷ್ಟ ಸ್ಥಳದಲ್ಲಿ ಮಾತ್ರ ಬಿರುಕು ಇದ್ದರೆ ಅಲ್ಲಿ ಗೋಡೆ ಗಡಿಯಾರವಿಡಿ. ಬಿರುಕು ಆಳವಾಗಿದ್ದರೆ ಅದಕ್ಕೆ ಗಮ್ ಅಥವಾ ಸಿಮೆಂಟ್ ಹಚ್ಚಿ. ಇಲ್ಲವಾದರೆ ಈ ಬಿರುಕಿನೊಳಗೆ ಮತ್ತು ಗಡಿಯಾರದ ಹಿಂದೆ ತಿಗಣೆ ಅಥವಾ ಇನ್ನಿತರೆ ಜೀವಿಗಳು ಮನೆ ಮಾಡಬಹುದು. ಬಿರುಕು ಉದ್ದವಾಗಿದ್ದರೆ ನೆಲದಿಂದ ಸೀಲಿಂಗ್ ತನಕ ಎತ್ತರದ ಗಡಿಯಾರ ಬಳಿಸಿ.
BIGG NEWS: ಮಂಗಳೂರಿನ ಪಿಲಿಕುಳದಲ್ಲಿ ಹುಲಿಗಳ ನಡುವೆ ಕಾದಾಟ: ಗಾಯಗೊಂಡ ಹುಲಿ ಮರಿ ಸಾವು
ಕನ್ನಡಿ ಬಳಸಿ
ಬಿರುಕು ಬಿದ್ದ ಗೋಡೆಯನ್ನು ಮುಚ್ಚಲು ಹೆಚ್ಚಾಗಿ ಉದ್ದವಾದ ಕನ್ನಡಿಯನ್ನು ಹೆಚ್ಚಿನ ಜನರು ಬಳಸುತ್ತಾರೆ. ಅಂದಚಂದದ ಇಂತಹ ಕನ್ನಡಿಗಳು ಮನೆಯ ಸೌಂದರ್ಯವನ್ನೂ ಹೆಚ್ಚಿಸುತ್ತವೆ. ಕನ್ನಡಿ ಇಡುವ ಮೊದಲು ಗೋಡೆಯ ಬಿರುಕನ್ನು ರಿಪೇರಿ ಮಾಡಿ.
ಕಲಾತ್ಮಕ ವಸ್ತುಗಳ ಬಳಕೆ
ಗೋಡೆಯಲ್ಲಿ ಚಿತ್ರಪಟಗಳನ್ನು ಅಥವಾ ಟೆಕ್ಸ್ಟೈಲ್ ಆರ್ಟ್ಗಳನ್ನು ಗೋಡೆ ಬಿರುಕು ಇರುವಲ್ಲಿ ನೇತಾಡಿಸಿ. ಮಂಡಲಗಳು, ಜೈಪುರದ ಕಲಾತ್ಮಕ ಗೋಡೆ ಚಿತ್ರಗಳು, ರಾಧಾ ಕೃಷ್ಣಾ ಫೋಟೊಗಳು ಸೇರಿದಂತೆ ನಿಮ್ಮಿಷ್ಟದ ಕಲಾತ್ಮಕ ವಸ್ತುಗಳನ್ನು ನೇತಾಡಿಸಿ. ಇದರಿಂದ ಮನೆಯ ಅಂದವೂ ಹಲವು ಪಟ್ಟು ಹೆಚ್ಚುತ್ತದೆ. ಗೋಡೆಯ ಬಿರುಕು ತುಂಬಾ ಉದ್ದವಾಗಿದ್ದರೆ ದೊಡ್ಡದಾದ ಆರ್ಟ್ವರ್ಕ್ಗಳನ್ನು ಬಳಸಿ. ಬಾಡಿಗೆ ಮನೆಯಲ್ಲಿ ವಾಸಿಸುವವರಿಗಂತೂ ಈ ರೀತಿ ನೇತಾಡಿಸುವ ಆರ್ಟ್ವರ್ಕ್ಗಳು ಹೆಚ್ಚು ಸೂಕ್ತವಾಗಿದೆ.