ಬೆಂಗಳೂರು : ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ಮೋದಿ ಮುಂದೆ ನಾಯಿಯಂತೆ ಇರ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಈ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ‘ನಾಯಿ ನಾರಾಯಣ ಅಂತಾರೆ , ಅದು ಪ್ರಿಯವಾದ ಪ್ರಾಣಿ’ ಸಿದ್ದರಾಮಯ್ಯ ಏನು ಹೇಳಿದ್ದಾರೋ ಗೊತ್ತಿಲ್ಲ ಎಂದರು. ನಾಯಿ ಬಗ್ಗೆ ನನಗೆ ಗೌರವ ಇದೆ, ನಮ್ಮ ಮನೆಯಲ್ಲೂ ಕೂಡ ನಾಯಿ ಇದೆ. ನಮ್ಮ ರಕ್ಷಣೆಗೆ ನಾಯಿ ಬೇಕು. ಕಷ್ಟಕ್ಕೆ ಸುಖಕ್ಕೆ ನಾಯಿ ಬೇಕು ಎಂದು ಉತ್ತರಿಸಿದ್ದಾರೆ.
ದೇಶ ಒಗ್ಗೂಡಿಸಲು ರಾಹುಲ್ ಗಾಂಧಿ ಪಾದಾರ್ಪಣೆ ಮಾಡ್ತಾ ಇದ್ದಾರೆ. ಈ ದೇಶ ನಳಿನ್ ಕುಮಾರ್ ಕಟೀಲ್ ಹೇಳಿಕೆಯನ್ನ ಖಂಡಿಸುತ್ತೆ. ನಾನು ಒಬ್ಬ ಪಕ್ಷದ ಅಧ್ಯಕ್ಷನಾಗಿ ಕಟೀಲ್ ಹೇಳಿಕೆಯನ್ನು ಖಂಡಿಸುತ್ತೇನೆ ಎಂದರು.
ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ಮೋದಿ ಮುಂದೆ ನಾಯಿಯಂತೆ ಇರ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿಗೆ ಧೈರ್ಯವಿದ್ರೆ ಅಭಿವೃದ್ಧಿ ಬಗ್ಗೆ ಚರ್ಚೆಗೆ ಬರಲಿ, ಕಾಂಗ್ರೆಸ್ ಧಮ್ ಬಗ್ಗೆ ಪ್ರಶ್ನೆ ಮಾಡುವ ಸಿಎಂ ಬೊಮ್ಮಾಯಿ,ಮೋದಿ ಮುಂದೆ ನಾಯಿಯಂತೆ ಇರ್ತಾರೆ. ಬೊಮ್ಮಾಯಿಗೆ ಧಮ್, ತಾಕತ್ ಇದ್ರೆ ಕೇಂದ್ರದಿಂದ ಅನುದಾನ ತನ್ನಿ ಎಂದು ಹೇಳಿದ್ದಾರೆ.
ರಾಜ್ಯದಲ್ಲೇ ಪ್ರಥಮ: ‘ಪೊಲೀಸ’ರಿಂದಲೇ ನಾಟಕ ಪ್ರದರ್ಶನ, ನಟ ‘ಕಿಚ್ಚ ಸುದೀಪ್’ ಮೆಚ್ಚುಗೆ
ಸಿದ್ದರಾಮಯ್ಯ ಹೇಳಿಕೆ ಅತ್ಯಂತ ಕೀಳು ಮಟ್ಟದ್ದು – ಸಚಿವ ಅಶ್ವತ್ಥನಾರಾಯಣ ಖಂಡನೆ